ವಾಡಿಕೆಗಿಂತ ಮಳೆ, ಮುಂಗಾರು ಕ್ಷೀಣ: ಹವಾಮಾನ ಮುನ್ಸೂಚನೆ
ಈ ಬಾರಿ ಭಾರತದಲ್ಲಿ ಮುಂಗಾರು ಕ್ಷೀಣಿಸಲಿದ್ದು, ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಸ್ಕೈಮೆಟ್ ಹವಾಮಾನ ಸಂಸ್ಥೆ ವರದಿ ಮಾಡಿದೆ.
ಬೆಂಗಳೂರು, ಮಾರ್ಚ್ 27: ಈ ಬಾರಿ ಭಾರತದಲ್ಲಿ ಮುಂಗಾರು ಕ್ಷೀಣಿಸಲಿದ್ದು, ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಸ್ಕೈಮೆಟ್ ಹವಾಮಾನ ಸಂಸ್ಥೆ ವರದಿ ಮಾಡಿದೆ. 2017ರಲ್ಲಿ ಉತ್ತಮ ಮಂಗಾರು ಮಳೆ ನಿರೀಕ್ಷೆ ಹೊಂದಿದ್ದ ರೈತಾಪಿ ವರ್ಗಕ್ಕೆ ಇದು ಆಘಾತಕಾರಿಯಾಗಿದೆ.
ವಾಡಿಕೆಗಿಂತ ಕಡಿಮೆ ಮಳೆಯಾಗಲಿದ್ದು, ಜೂನ್ ಹಾಗೂ ಸೆಪ್ಟೆಂಬರ್ ಅವಧಿಯಲ್ಲಿ 887ಎಂಎಂ ಮಳೆ ಸುರಿಯಲಿದೆ. ಅತಿವೃಷ್ಟಿಯ ಬಗ್ಗೆ ಯಾವುದೇ ಸೂಚನೆ ಸಿಕ್ಕಿಲ್ಲ. ಅತಿವೃಷ್ಟಿ ಸಾಧ್ಯತೆ ಶೇ 0ರಷ್ಟಿದೆ.

ಸಾಮಾನ್ಯವಾದ ಮಳೆ ನಿರೀಕ್ಷೇ ಶೇ 50ರಷ್ಟಿದೆ. ನಿರೀಕ್ಷೆಗಿಂತ ಕಡಿಮೆ ಮಳೆ ಶೇ 25ರಷ್ಟಿದೆ. ಸರಾಸರಿ ಶೇ 90ರಷ್ಟು ಕಡಿಮೆ ಮಳೆ ನಿರೀಕ್ಷೆಯಿದ್ದು, ಬರ ಪರಿಸ್ಥಿತಿ ಮುಂದುವರೆಯಲಿದೆ ಎಂದು ಸ್ಕೈಮೆಟ್ ವರದಿ ಹೇಳಿದೆ.
ತಿಂಗಳ ಎಣಿಕೆಯಂತೆ ಜೂನ್ ನಲ್ಲಿ ಮಳೆ ಪ್ರಮಾಣ 164ಎಂಎಂ, ಜುಲೈನಲ್ಲಿ 289ಎಂಎಂ, ಆಗಸ್ಟ್ ನಲ್ಲಿ 261ಎಂಎಂ, ಸೆಪ್ಟೆಂಬರ್ ನಲ್ಲಿ 173 ಎಂಎಂ ನಷ್ಟು ಮಳೆಯಾಗಿದೆ. ಶೇ 30ರಷ್ಟು ಕಡಿಮೆ ಮಳೆ ಸುರಿದಿದೆ ಎಂದು ಸ್ಕೈ ಮೆಟ್ ವೆದರ್ ಸಂಸ್ಥೆ ಹೇಳಿದೆ.












Click it and Unblock the Notifications