ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರವೇ ಕೊರೊನಾ ಲಸಿಕೆ ಸಾಗಣೆಗೆ ಡ್ರೋನ್ ಬಳಕೆ

|
Google Oneindia Kannada News

ನವದೆಹಲಿ, ಜೂನ್ 21: ದೇಶದಲ್ಲಿ ಶೀಘ್ರವೇ ಡ್ರೋನ್‌ಗಳನ್ನು ಬಳಕೆ ಮಾಡಿಕೊಂಡು ಕೊರೊನಾ ಲಸಿಕೆ ಸಾಗಿಸುವ ಕಾರ್ಯ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.

"ಕೊರೊನಾ ಲಸಿಕೆಗಳನ್ನು ದೂರದ ಪ್ರದೇಶಗಳಿಗೆ ಅಥವಾ ಕುಗ್ರಾಮಗಳಿಗೆ ಅತಿ ವೇಗವಾಗಿ ತಲುಪಿಸಲು ಡ್ರೋನ್‌‌ಗಳ ಬಳಕೆ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಈ ಸಂಬಂಧ ಐಸಿಎಂಆರ್ ಸಹಯೋಗದೊಂದಿಗೆ ಅಧ್ಯಯನ ನಡೆಸಲಾಗಿದೆ. ಇದಕ್ಕೆ ಕೆಲವು ಮಾನದಂಡಗಳನ್ನು ಸೂಚಿಸಿದ್ದು, ಈ ಮಾನದಂಡಗಳ ಅನುಸರಣೆಯಾದರೆ ಲಸಿಕೆಗಳ ಸಾಗಣೆ ಪ್ರಾರಂಭವಾಗಬಹುದು" ಎಂದು ಐಐಟಿ ಕಾನ್ಪುರದ ವಕ್ತಾರರು ಭರವಸೆ ವ್ಯಕ್ತಪಡಿಸಿದ್ದಾರೆ.

ದೇಶದಲ್ಲೇ ಮೊದಲು: ಗೌರಿಬಿದರೂರಿನಲ್ಲಿ ಮೊದಲ ಡ್ರೋನ್ ಪ್ರಯೋಗ ಇಂದು ಪ್ರಾರಂಭದೇಶದಲ್ಲೇ ಮೊದಲು: ಗೌರಿಬಿದರೂರಿನಲ್ಲಿ ಮೊದಲ ಡ್ರೋನ್ ಪ್ರಯೋಗ ಇಂದು ಪ್ರಾರಂಭ

ಐಐಟಿ ಕಾನ್ಪುರ ಹಾಗೂ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಲಸಿಕೆ ಸಾಗಣೆಗೆ ಡ್ರೋನ್ ಆಯ್ಕೆಯ ಕಾರ್ಯಸಾಧ್ಯತೆಯ ಅನ್ವೇಷಣೆಗೆ ತೊಡಗಿಕೊಂಡಿದ್ದು, ವಿವರವಾದ ಅಧ್ಯಯನ ನಡೆಸಿ ಈ ಯೋಜನೆಗೆ ಮುಂದಾಗಿವೆ. ಅಧ್ಯಯನದಲ್ಲಿ ಸಕಾರಾತ್ಮಕ ಅಂಶಗಳು ಕಂಡುಬಂದಿದ್ದು, ಮುಂದಿನ ಹಂತವಾಗಿ ಐಸಿಎಂಆರ್ ಡ್ರೋನ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ. ಇದಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ.

 Drones Could Be Used To Supply Corona Vaccines To Remote Areas

ಆದರೆ ಡ್ರೋನ್ ಬಳಕೆಗೆ ನಾಗರೀಕ ವಿಮಾನಯಾನ ಸಚಿವಾಲಯದ ಅನುಮೋದನೆ ಅವಶ್ಯಕವಾಗಿದ್ದು, ಮೊದಲು ಐಐಟಿ ಕಾನ್ಪುರದ ಸಹಯೋಗದೊಂದಿಗೆ ಕಾರ್ಯಸಾಧ್ಯತಾ ಅಧ್ಯಯನ ನಡೆಸುವಂತೆ ತಿಳಿಸಲಾಗಿದೆ. "ಕುಗ್ರಾಮಗಳಲ್ಲಿ ವಾಸಿಸುವ ಜನರಿಗೆ ಲಸಿಕೆ ಲಭ್ಯವಾಗುವಂತೆ ಮಾಡುವುದು ಸವಾಲು ಹಾಗೂ ಡ್ರೋನ್‌‌ಗಳ ಮೂಲಕ ಲಸಿಕೆ ಕಳುಹಿಸುವುದು ಎಷ್ಟು ಸುರಕ್ಷಿತವಾಗಿದೆ ಎಂಬುದರ ಕುರಿತು ಜಂಟಿ ಅಧ್ಯಯನ ನಡೆಸಬೇಕು" ಎಂದು ಐಸಿಎಂಆರ್ ಹಾಗೂ ಐಐಟಿ ಕಾನ್ಪುರಕ್ಕೆ ಸಚಿವಾಲಯ ಸೂಚಿಸಿದೆ.

ಏರೋಸ್ಪೇಸ್ ಇಂಜಿನಿಯರಿಂಗ್ ಪ್ರಾಧ್ಯಾಪಕ ಎ.ಕೆ. ಘೋಷ್ ಮತ್ತು ಅವರ ತಂಡ ಈ ಯೋಜನೆಯ ಅಧ್ಯಯನ ನಡೆಸಿದ್ದು, ಹಲವು ಪ್ರಯೋಗಗಳ ನಂತರ ಈ ಯೋಜನೆಯ ಕಾರ್ಯಸಾಧ್ಯತೆ ಬಗ್ಗೆ ತಿಳಿಸಿದ್ದಾರೆ.

ಡ್ರೋನ್‌‌ಗಳು ಬ್ಯಾಟರಿ ಚಾಲಿತವಾಗಿರುವುದರಿಂದ ಅದರ ತಾಪಮಾನವು ಲಸಿಕೆ ಮೇಲೆ ಪರಿಣಾಮ ಬೀರಬಹುದೇ ಎಂಬ ಕುರಿತು ಅಧ್ಯಯನ ನಡೆಸಲಾಗಿದೆ. ಈ ಎಲ್ಲಾ ಆಯಾಮದ ಸಂಶೋಧನೆಗಳ ಆಧಾರದ ಮೇಲೆ ತಂಡವು ಕೆಲವು ನಿಯತಾಂಕಗಳನ್ನು ನಿಗದಿಪಡಿಸಿದೆ. ಅವುಗಳನ್ನು ಅನುಸರಿಸಿದರೆ ದೂರದ ಸ್ಥಳಗಳಿಗೆ ಡ್ರೋನ್ ಮೂಲಕ ಲಸಿಕೆ ಸಾಗಿಸಲು ಸಾಧ್ಯವಾಗುತ್ತದೆ.

ಲಸಿಕೆ ಸಾಗಣೆಯಲ್ಲಿ ಬಳಸಬೇಕಾದ ಡ್ರೋನ್ ಕನಿಷ್ಠ 35 ಕಿ.ಮೀ ಹಾರಾಟ ವ್ಯಾಪ್ತಿ ಹಾಗೂ ನಾಲ್ಕು ಕೆ.ಜಿ ಹೊರುವ ಸಾಮರ್ಥ್ಯ ಹೊಂದಿರಬೇಕು. ಡ್ರೋನ್‌ಗಳ ತೂಕವು ಡಿಜಿಸಿಎ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂಬ ಮೂಲ ನಿಯಮಗಳನ್ನು ಹೇರಲಾಗಿದ್ದು, ಈ ಎಲ್ಲ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸಲಾಗಿದೆ.

English summary
Drone could soon be used to transport Covid-19 vaccines to challenging remote places in the quickest possible time
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X