• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಾಲಕನ ಮಗಳ ಆರೋಗ್ಯ ಸುಧಾರಿಸಬೇಕಿದ್ದರೆ ನಿಮ್ಮ ಅಗತ್ಯವಿದೆ

By Prasad
|

ದುರಾದೃಷ್ಟ ಅಥವಾ ದುರ್ದೈವ ಯಾವ ರೀತಿ ಬಂದು ನಿಲ್ಲುತ್ತದೋ ಬಲ್ಲವರಾರು? ಆದರೆ, ಕಠಿಣ ಪರಿಸ್ಥಿತಿ ಎದುರಿಸಲು ನಾವು ಯಾವುದೇ ತಯಾರಿಯನ್ನು ಹೊಂದಿರುವುದಿಲ್ಲ. ಆಕಸ್ಮಿಕವಾಗಿ ಬರುವ ಚಿಂತೆ ಅಥವಾ ದುಃಖದ ಸಂಗತಿಯನ್ನು ವಿಧಿಯಿಲ್ಲದೇ ಸ್ವೀಕರಿಸಲೇಬೇಕು.

ಎಲ್ಲರೂ ಸಾಮಾನ್ಯವಾಗಿ ತಮ್ಮ ಮಕ್ಕಳು ಸುಖವಾಗಿರಲಿ ಎಂದು ಬಯಸುತ್ತಾರೆ. ಆದರೆ ಆ ಮಕ್ಕಳ ಭವಿಷ್ಯ ಹಾಳಾದಾಗ ಅಥವಾ ಯಾವುದೋ ಅನಾರೋಗ್ಯ ಅವರನ್ನು ಬಾಧಿಸಿದರೆ ಸಾಕಷ್ಟು ನೋವುಂಟಾಗುವುದು ಸಹಜ. ಅಂಥದೇ ಒಂದು ದುರಾದೃಷ್ಟಕರ ಮನಮಿಡಿಯುವ ನೈಜಕಥೆ ಇಲ್ಲಿದೆ.

ಹೌದು, ಇಂತಹದ್ದೇ ಒಂದು ದುರಾದೃಷ್ಟಕರ ಸಂಗತಿಯೊಂದು ಬಡ ಚಾಲಕನ ಪಾಲಿಗೆ ಒದಗಿ ಬಂದಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಚಾಲಕನ ಮಗಳಾದ ಯುವಶ್ರೀ ಎನ್ನುವವಳು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಿಂದಾಗಿ ಬಳಲುತ್ತಿದ್ದಳು. ಆಗ 11 ವರ್ಷದ ಯುವಶ್ರೀಯ ಪಾಲಕರು ಬಹಳ ಆತಂಕಕ್ಕೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ಯುವಶ್ರೀಯ ತಪಾಸಣೆ ಮಾಡಿದ ವೈದ್ಯರು ಯಕೃತ್ತಿನ ಕಸಿ ಮಾಡಬೇಕು ಎಂದು ಹೇಳಿದರು. ಇದು ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

ಖಾಸಗಿ ಪ್ರಾಥಮಿಕ ಶಾಲೆಯೊಂದರಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುವಶ್ರೀ ತಂದೆಗೆ ಕೇವಲ 10,000 ರುಪಾಯಿ ಮಾಸಿಕ ಆದಾಯವಾಗಿತ್ತು. ಆಕೆಯ ತಾಯಿ ಮನೆಕೆಲಸ ಮಾಡಿ ಬರುತ್ತಿದ್ದಳು. ಯುವಶ್ರೀಯ ಚಿಕಿತ್ಸೆಗೆ 22.5 ಲಕ್ಷ ರು. ಖರ್ಚಾಗುವುದಾಗಿ ತಿಳಿಸಿದರು. ಇವರ ಉಳಿತಾಯದ ಹಣ ಹಾಗೂ ಕೆಲವು ಅಮೂಲ್ಯವಾದ ಆಸ್ತಿಯನ್ನು ಮಾರಾಟ ಮಾಡಿದರು. ಇದರಿಂದ ದೊರೆತ ಹಣವನ್ನು ಬಳಸಿಕೊಂಡು ಚಿಕಿತ್ಸೆಯನ್ನು ಪ್ರಾರಂಭಿಸಿದರು. ಆದರೆ ಅದು ಸಾಕಾಗಲಿಲ್ಲ.

ದಾನಿಗಳ ಬಳಿ ಹಾಗೂ ಕೆಲವು ಸಹಾಯಕರ ಸಹಾಯದಿಂದ ಒಂದು ವಾರದಲ್ಲಿಯೇ ಚೆನ್ನೈನ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಯಕೃತ್ತಿನ ಶಸ್ತ್ರ ಚಿಕಿತ್ಸೆಗೆಯನ್ನು ಯಶಸ್ವಿಯಾಗಿ ಮಾಡಲಾಯಿತು. ವೈದ್ಯರು ಸಹ ಯುವಶ್ರೀ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾಳೆ ಎಂದು ಭರವಸೆ ನೀಡಿದ್ದರು. ಯುವಶ್ರೀ ಆರೋಗ್ಯವಂತ ಹುಡುಗಿಯಾಗಿ ಹಿಂತಿರುಗಲು ಸೂಕ್ತ ಆರೈಕೆಯ ಅಗತ್ಯವಿದೆ. ಅವಳ ಆರೈಕೆಯು ಇದೀಗ ಗಂಭೀರ ಸ್ಥಿತಿಗೆ ಮರಳುತ್ತಿದೆ. ಅವಳ ಆರೈಕೆ ಹಾಗೂ ಔಷಧಿಗಾಗಿ ಮುಂದಿನ ತಿಂಗಳಲ್ಲಿ 10 ಲಕ್ಷ ವೆಚ್ಚ ಮಾಡಬೇಕಿದೆ.

ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇಲ್ಲದ ಯುವಶ್ರೀಯ ತಂದೆ ತಾಯಿಗೆ ಇದೀಗ ಮಗಳ ಆರೋಗ್ಯದ ಕುರಿತು ಇನ್ನಷ್ಟು ಚಿಂತಿಸಬೇಕಿದೆ. ಹಾಗಾಗಿ ಇದೀಗ ಪುನಃ ತನ್ನ ಮಗಳ ಆರೋಗ್ಯ ಚೇತರಿಕೆಗಾಗಿ ಧನ ಸಹಾಯವನ್ನು ಬಯಸುತ್ತಿದ್ದಾರೆ. "ಈಗಾಗಲೇ ಅಪರಿಚತರು, ದಾನಿಗಳು ಹಾಗೂ ಸ್ನೇಹಿತರು ಮಾಡಿದ ಸಹಾಯದಿಂದ ನನ್ನ ಮಗಳಿಗೆ ಯಕೃತ್ತಿನ ಕಸಿ ಚಿಕಿತ್ಸೆ ಮಾಡಿಸಲು ಸಾಧ್ಯವಾಯಿತು" ಎಂದು ಯುವಶ್ರೀ ತಂದೆ ಹೇಳಿದ್ದಾರೆ.

"ಇದೀಗ ಪುನಃ ನನ್ನ ಮಗಳ ಆರೋಗ್ಯ ಸುಧಾರಣೆಗಾಗಿ ಜನರಲ್ಲಿ ಆರ್ಥಿಕ ನೆರವನ್ನು ಬಯಸುತ್ತಿದ್ದೇನೆ. ಮಗಳ ಸ್ಥಿತಿ ಹಾಗೂ ಪತ್ನಿಯ ಕಣ್ಣೀರನ್ನು ನನ್ನಿಂದ ನೋಡಲಾಗತ್ತಿಲ್ಲ. ನನ್ನ ಹೃದಯ ನೋವಿನಿಂದ ಕೂಡಿದೆ" ಎಂದು ಯುವಶ್ರೀ ತಂದೆ ಹೇಳುತ್ತಿದ್ದಾರೆ.

ಯುವಶ್ರೀಯ ಆರೋಗ್ಯ ಸುಧಾರಣೆಗೆ ಧನ ಸಹಾಯ ಮಾಡಲು ನೀವು ನಿಧಿ ಸಂಗ್ರಹಕ್ಕೆ ಸಹಾಯ ಮಾಡಬಹುದು. ಅಲ್ಲದೆ ಈ ವಿಚಾರವನ್ನು ಅಥವಾ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದರ ಮೂಲಕ ಸಹ ನಿಧಿ ಸಂಗ್ರಹಕ್ಕೆ ಸಹಾಯ ಮಾಡಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು human interest story ಸುದ್ದಿಗಳುView All

English summary
Driver’s daughter Yuvasri going without postoperative care after liver transplant. To help Yuvasri return to a healthy life, you can donate to her fundraiser.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more