ಅರಮನೆಯಲ್ಲಿ ಸಾವಿರಾರು ಮಹಿಳೆಯರೊಂದಿಗೆ ಪಾನಮತ್ತನಾಗಿ ರಾಮ....!: ದ್ರಾವಿಡರ್ ಕಳಗಂ ನಾಯಕಿಯ ಹೇಳಿಕೆ ಹಚ್ಚಿದೆ ಕಿಡಿ!
ಚೆನ್ನೈ, ಜನವರಿ 30: ತಮಿಳುನಾಡಿನ ದ್ರಾವಿಡರ್ ಕಳಗಂನ ನಾಯಕಿ ಉಮಾ ಇಲಕ್ಕಿಯಾ ಅವರು ಭಗವಾನ್ ರಾಮ, ಅಯೋಧ್ಯೆ ರಾಮಮಂದಿರ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಬಗ್ಗೆ ದ್ವೇಷಪೂರಿತ ಭಾಷಣ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭದ ಮೊದಲು, ಕೆಲವು ವಾರಗಳ ಹಿಂದೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ದ್ರಾವಿಡರ್ ಕಳಗಂ ತಮಿಜರ್ ಪೆರವೈ (ದ್ರಾವಿಡ ಕಳಗಂನ ತಮಿಳು ಕೌನ್ಸಿಲ್) ಉಪ ಪ್ರಧಾನ ಕಾರ್ಯದರ್ಶಿ ಉಮಾ ಅವರು ಭಗವಾನ್ ರಾಮನ ಚಾರಿತ್ರ್ಯವನ್ನು ಪ್ರಶ್ನಿಸಿದ್ದಾರೆ.

ಭಗವಾನ್ ರಾಮನ ಚಾರಿತ್ರ್ಯ ಪ್ರಶ್ನಿಸಿದ ನಾಯಕಿ!
ಕಾರ್ಯಕ್ರಮದಲ್ಲಿ ಉಮಾ ಇಲಕ್ಕಿಯಾ ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಆಡಳಿತರೂಢ ಡಿಎಂಕೆ ಪಕ್ಷದ ಜೊತೆಗೆ ಗುರುತಿಸಿಕೊಂಡಿರುವ ಅವರು, ರಾಮನ ಕೆಲಸಗಳು ಮಕ್ಕಳಿಗೆ ಉದಾಹರಣೆಯಾಗಿ ನೀಡಲು ಯೋಗ್ಯವಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಟೀಕೆ ಮಾಡಿರುವ ಹಲವರು ಉಮಾ ಇಲಕ್ಕಿಯಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
"ವಾಲ್ಮೀಕಿ ಬರೆದ ರಾಮಾಯಣದ ಪ್ರಕಾರ, ರಾಮನು ಅರಮನೆಯಲ್ಲಿ ಸಾವಿರಾರು ಮಹಿಳೆಯರೊಂದಿಗೆ ಪಾನಮತ್ತನಾಗಿ ವಾಸಿಸುತ್ತಿದ್ದನೆಂದು ಹೇಳಲಾಗಿದೆ. ನಾನು ನಿಮ್ಮನ್ನು ಕೇಳುವುದೇನೆಂದರೆ, ನಿಮ್ಮ ಮಕ್ಕಳಿಗೆ ಅವನನ್ನು ಉದಾಹರಣೆ ನೀಡುತ್ತೀರಾ..? ನಾವು ನಮ್ಮ ಮಕ್ಕಳಿಗೆ ದೊಡ್ಡ ದೊಡ್ಡ ನಾಯಕರ ಹೆಸರುಗಳನ್ನು ಇಡುತ್ತೇವೆ ಏಕೆಂದರೆ ಮಗುವು ನಾಯಕನಂತೆಯೇ ಇರಬೇಕೆಂದು ನಾವು ಬಯಸುತ್ತೇವೆ ಅಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ನೀವು ನಿಮ್ಮ ಮಕ್ಕಳನ್ನು ಅವನನ್ನು ಉದಾಹರಣೆಯಾಗಿ ನೀಡಲು ಹೊರಟಿದ್ದೀರಾ? ಇದು ಯಾವ ರೀತಿಯ ಮೂರ್ಖತನ? ಅವನು ತನ್ನ ಹೆಂಡತಿಯನ್ನು ಅನುಮಾನಿಸಿ ಕಾಡಿಗೆ ಕಳುಹಿಸಿದವನು. ಅಂತಹವನನ್ನು ನಿಮ್ಮ ಮಕ್ಕಳಿಗೆ ಹೇಗೆ ಉದಾಹರಣೆಯಾಗಿ ತೋರಿಸುತ್ತೀರಿ..? ಇದರಿಂದ ನಮ್ಮ ಮಕ್ಕಳನ್ನು ರಕ್ಷಿಸಬೇಕು" ಎಂದು ಹೇಳಿದ್ದಾರೆ.

ರಾಮಾಯಣವನ್ನು ಉಲ್ಲೇಖಿಸುತ್ತಾ, "ರಾಮನಿಗೆ ಬದುಕುವ ಧೈರ್ಯವಿಲ್ಲ, ಆದ್ದರಿಂದ ಅವನು ತನ್ನ ಜನರೊಂದಿಗೆ ಸರಯೂ ನದಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡನು. ಅವನು ಬಚ್ಚಿಟ್ಟುಕೊಂಡು ವಾಲಿಯನ್ನು ಕೊಂದ ಕೊಲೆಗಾರ. ಕಾರಣವನ್ನು ಸಹ ಕೇಳದೆ ಧ್ಯಾನಸ್ಥನಾಗಿ ಕುಳಿತಿದ್ದ ಸಂಭೂಕನ ಶಿರಚ್ಛೇದ ಮಾಡಿದನು. ಈ ರೀತಿಯ ವ್ಯಕ್ತಿ ನಿಮ್ಮ ಮಕ್ಕಳಿಗೆ ಆರಾಧ್ಯ ಎಂದು ಹೇಳುತ್ತಿರಾ...?" ಎಂದು ಮಾತನಾಡಿದ್ದಾರೆ.
DMK leader Uma Ilakkiya abused Bhagwan Shri Ram. She is a close confidante of Stalin family.
— Incognito (@Incognito_qfs) January 29, 2024
In April 2023, Supreme Court directed all States/UTs to register suo motu FIR against hate speeches irrespective of religion.
Will DMK govt in Tamil Nadu or SC take action against her? pic.twitter.com/Syz95RhY5v
ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ಧಾಳಿ
ಇದೇ ವೇಳೆ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದ ಉಮಾ ಇಲಕ್ಕಿಯಾ, "2025 ರಲ್ಲಿ ಆರ್‌ಎಸ್‌ಎಸ್ ತನ್ನ 100 ವರ್ಷಗಳನ್ನು ಪೂರೈಸುತ್ತದೆ. ಆ ಸಮಯದಲ್ಲಿ ಅವರು ಈ ದೇಶವನ್ನು ಹಿಂದೂರಾಷ್ಟ್ರ, ರಾಮರಾಜ್ಯ ಎಂದು ಘೋಷಿಸುತ್ತಾರೆ. ಇಂದು ಉತ್ತರ ಪ್ರದೇಶದಲ್ಲಿ ಯಾವ ರೀತಿಯ ಸರ್ಕಾರ ಅಧಿಕಾರದಲ್ಲಿದೆಯೋ, ಅದೇ ಧಾರ್ಮಿಕ ಮತಾಂಧ ಸರ್ಕಾರವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಇಡೀ ದೇಶಕ್ಕೆ ತರಲಿದೆ. 2024 ರ ಚುನಾವಣೆಯ ನಂತರ ಭಾರತ ಭಾರತವಾಗಿ ಉಳಿಯುವುದಿಲ್ಲ" ಎಂದು ಕಿಡಿಕಾರಿದ್ದಾರೆ.
"ಬಿಜೆಪಿ ಮತ್ತು ಆರ್ಎಸ್‌ಎಸ್ ಭಾರತವನ್ನು ಒಕ್ಕೂಟ ಅಥವಾ ದೇಶ ಎಂದು ಒಪ್ಪಿಕೊಳ್ಳುತ್ತಿಲ್ಲ. ಅದಕ್ಕಾಗಿಯೇ ತಮಿಳುನಾಡು ಮುಖ್ಯಮಂತ್ರಿಗಳು ಪ್ರಧಾನಿಯನ್ನು 'ಭಾರತದ ಪ್ರಧಾನಿ' ಎಂದು ಪದೇ ಪದೇ ಉಲ್ಲೇಖಿಸುತ್ತಾರೆ. ಇದು ಭಾರತವಲ್ಲ, ಇಂಡಿಯಾ.. ಭಾರತೀಯ ಒಕ್ಕೂಟ, ಅವರು ತಮಿಳುನಾಡಿಗೆ ಬಂದಾಗಲೆಲ್ಲಾ ನಾವು ಅವರಿಗೆ ತಕ್ಕ ಪಾಠ ಮಾಡುತ್ತೇವೆ" ಎಂದು ಟೀಕಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications