ಸಂಸತ್‌ಭವನ ಉದ್ಘಾಟನೆಗೆ ದ್ರೌಪದಿ ಮುರ್ಮುರನ್ನು ಕರೆಯದಿರುವುದು ತಾರತಮ್ಯಕ್ಕೆ ಉದಾಹರಣೆ: ಉದಯನಿಧಿ ಸ್ಟಾಲಿನ್ ಸಮರ್ಥನೆ
ನವದೆಹಲಿ, ಸೆಪ್ಟಂಬರ್ 06: ಸನಾತನ ಧರ್ಮ ನಿರ್ಮೂಲನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆ ಕುರಿತು ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ. ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಕರೆಯದಿರುವುದೇ ಸನಾತನ ಧರ್ಮ ತಾರತಮ್ಯ ಎಂದು ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇತ್ತೀಚೆಗೆ ನೂತನ ಸಂಸತ್ ಭವನವನ್ನು ಉದ್ಘಾಟಿಸಲಾಯಿತು. ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿರಲಿಲ್ಲ. ಇದು ಸನಾತನ ಧರ್ಮದಲ್ಲಿನ ತಾರತಮ್ಯಕ್ಕೆ ಉದಾಹರಣೆ ಆಗಿದೆ. ನಾನು ಹೇಳಿಕೆ ಕುರಿತು ಯಾವುದೇ ಕ್ಷಮೆ ಕೇಳುವುದಿಲ್ಲ. ಯಾವದೇ ಬೆದರಿಕೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.

ಸನಾತನ ಧರ್ಮವನ್ನು ಉದಯನಿಧಿ ಸ್ಟಾಲಿನ್ ಡೇಂಘಿ, ಮಲೆರಿಯಾ ರೋಗಕ್ಕೆ ಹೋಲಿಕೆ ಮಾಡಿ ವೇದಿಕೆ ಮೇಲೆ ಮೊನ್ನೆಯಷ್ಟೇ ಮಾತನಾಡಿದ್ದರು. ಡೇಂಘಿ, ಮಲೆರಿಯಾ ವನ್ನು ವಿರೋಧಿಸಲು ಸಾಧ್ಯವಿಲ್ಲ. ಇವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ಸನಾತನ ಧರ್ಮವನ್ನು ವಿರೋಧಿಸಿದರೆ ಸಾಲದು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.
ಇದಕ್ಕೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ನಾಯಕರು ಸ್ಟಾಲಿನ್ ವಿರುದ್ಧ ಕೆಂಡ ಕಾರಿದ್ದಾರೆ. ಇತ್ತ ಕರ್ನಾಟಕ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಅವರು ಉದಯನಿಧಿ ಸ್ಟಾಲಿನ್ ಪರ ಮಾತನಾಡಿದ್ದಾರೆ. ಈ ಸಂಬಂಧ ಕರ್ನಾಟಕದ ಕಾರವಾರದಲ್ಲಿ ಇವರಿಬ್ಬರ ವಿರುದ್ಧ ದೂರು ದಾಖಲಾಗಿದೆ.
ಎಲ್ಲ ಧರ್ಮಗಳ ಜಾತಿ ತಾರತಮ್ಯ ಖಂಡಿಸುತ್ತೇನೆ
ನಾನು ಮೊನ್ನೆಯಷ್ಟೇ ಅಲ್ಲ ಮತ್ತೆ ಮತ್ತೆ ಅದನ್ನೆ ಹೇಳುತ್ತೇನೆ. ಕೇವಲ ಸನಾತನ ಧರ್ಮವನ್ನು, ಹಿಂದೂ ದರ್ಮವನ್ನು ಮಾತ್ರ ವಿರೋಧಿಸುತ್ತಿಲ್ಲ. ಎಲ್ಲ ಧರ್ಮಗಳಲ್ಲಿರುವ ಜಾತಿ ತಾರತಮ್ಯವನ್ನು ನಾನು ವಿರೋಧಿಸಿತ್ತೇನೆ, ಖಂಡಿಸುತ್ತೇವೆ ಎಂದು ಸೋಮವಾರ ತಿಳಿಸಿದ್ದರು.
ಸದ್ಯ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ರಾಷ್ಟ್ರಾದ್ಯಂದ ಭಾರೀ ವಿವಾದ ಸೃಷ್ಟಿ ಮಾಡಿದೆ. ಹಿಂದೂಪರ ಸಂಘಟನೆಗಳು, ಸಾಧುಗಳು, ಬಿಜೆಪಿ ಮುಖಂಡರು ಈ ನಿರ್ಮೂಲನೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸ್ಟಾಲಿನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇತ್ತ ಸ್ಟಾಲಿನ್ ತಮ್ಮ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications