ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನಯಾನ ಪ್ರಯಾಣಿಕರ ಗಮನಕ್ಕೆ: ನಿಯಮಗಳಲ್ಲಿ ಭಾರೀ ಬದಲಾವಣೆ

|
Google Oneindia Kannada News

"ಎಲ್ಲವೂ ಈಗಿನ ಯೋಜನೆಯ ಪ್ರಕಾರ ನಡೆದರೆ ದೇಶೀಯ ವಿಮಾನ ಕಾರ್ಯಾಚರಣೆಯನ್ನು ಮೇ 15ರ ಮೊದಲು ಪ್ರಾರಂಭಿಸಬಹುದು. ಆದಷ್ಟು ಬೇಗ ವಿಮಾನಯಾನ ಸೇವೆಯನ್ನು ಆರಂಭಿಸುವ ನಿಟ್ಟಿನತ್ತ ನಾವು ಸಾಗುತ್ತಿದ್ದೇವೆ" ಎಂದು ನಾಗರಿಕ ವಿಮಾನಯಾನ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದರು.

ಲಾಕ್ ಡೌನ್ ನಿಂದಾಗಿ ಮಾರ್ಚ್ 25ರಿಂದ ಬಂದ್ ಆಗಿದ್ದ ದೇಶೀಯ ವಿಮಾನಯಾನ ಸೇವೆ ಮತ್ತೆ ಆರಂಭವಾಗುವ ಸಾಧ್ಯತೆಯಿದೆ. ಸೋಮವಾರ (ಮೇ 11) ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ, ಹಲವು ರಾಜ್ಯಗಳ ಸಿಎಂಗಳು ವಿಮಾನಯಾನ ಸದ್ಯಕ್ಕೆ ಆರಂಭಿಸಬಾರದು ಎಂದು ಪ್ರಧಾನಿಯವರನ್ನು ಒತ್ತಾಯಿಸಿದ್ದರು.

ಲಾಕ್ ಡೌನ್ ಮುಗಿಯುವ ಮುನ್ನವೇ ವಿಮಾನಯಾನ ಸೇವೆ ಆರಂಭ?ಲಾಕ್ ಡೌನ್ ಮುಗಿಯುವ ಮುನ್ನವೇ ವಿಮಾನಯಾನ ಸೇವೆ ಆರಂಭ?

ಕನಿಷ್ಠ ಪಕ್ಷ ಮೇ ಅಂತ್ಯದವರೆಗಾದರೂ, ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನವನ್ನು ಆರಂಭಿಸಬಾರದು ಎಂದು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು.

ಲಂಡನ್‌ನಿಂದ ಭಾರತಕ್ಕೆ ಮರಳಿದ ಜಯಮಾಲ ಪುತ್ರಿ ಸೌಂದರ್ಯಲಂಡನ್‌ನಿಂದ ಭಾರತಕ್ಕೆ ಮರಳಿದ ಜಯಮಾಲ ಪುತ್ರಿ ಸೌಂದರ್ಯ

ವಿಮಾನಯಾನ ಆರಂಭಿಸಲು ಕೇಂದ್ರ ಸರಕಾರ ಸಜ್ಜಾಗುತ್ತಿದ್ದು ನಾಗರಿಕ ವಿಮಾನಯಾನ ಖಾತೆಯ ಸಚಿವಾಲಯ, ಮೊದಲ ಹಂತದ ವಾಣಿಜ್ಯ ಸಂಚಾರಕ್ಕೆ ಹೊಸ ನಿಯಮಗಳಿರುವ ಎಸ್ಓಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್) ಸಿದ್ದಪಡಿಸಿದೆ. ಅದರ ಪ್ರಮುಖ ಅಂಶಗಳು ಹೀಗಿವೆ:

ನಾಗರಿಕ ವಿಮಾನಯಾನ ಖಾತೆಯ ಸಚಿವಾಲಯ

ನಾಗರಿಕ ವಿಮಾನಯಾನ ಖಾತೆಯ ಸಚಿವಾಲಯ

ಸೋಮವಾರ, ವಿವಿಧ ಏರ್ಲೈನ್ಸ್ ಮತ್ತು ಏರ್ಪೋರ್ಟ್ ನಿರ್ವಾಹಕರ, ಜೊತೆ, ನಾಗರಿಕ ವಿಮಾನಯಾನ ಖಾತೆಯ ಸಚಿವಾಲಯದ ಅಧಿಕಾರಿಗಳು ಸಭೆಯನ್ನು ನಡೆಸಿದ್ದರು. ಸಭೆಯಲ್ಲಿ, ವಿಮಾನಯಾನ ಆರಂಭವಾದ ನಂತರ ಮುಂದಿನ ಕೆಲವು ದಿನಗಳ ವರೆಗೆ ತೆಗೆದುಕೊಳ್ಳಬೇಕಾದ ನಿಯಮಗಳ ಬಗ್ಗೆ ವಿಸ್ಕೃತ ಚರ್ಚೆ ನಡೆದಿದೆ. (ಚಿತ್ರದಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ)

ಸಾಮಾಜಿಕ ಅಂತರ

ಸಾಮಾಜಿಕ ಅಂತರ

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತೀ ಸಾಲಿನ, ಎರಡೂ ಬದಿಯಲ್ಲಿ ಮಧ್ಯದ ಸೀಟನ್ನು ಖಾಲಿ ಬಿಡುವುದು. ಮತ್ತು, ಟರ್ಮಿನಲ್ ಗೇಟ್ ಗಳಲ್ಲಿ ದಟ್ಟಣಿ ತಪ್ಪಿಸಲು, ಮುಂದಿನ ಸೂಚನೆಯ ವರೆಗೆ ಪ್ರಯಾಣಿಕರ ಐಡಿ ಪ್ರೂಫ್ ಪರಿಶೀಲಿಸದೇ ಇರುವ ನಿಯಮವು ಎಸ್ಓಪಿ ಡ್ರಾಫ್ಟ್ ನಲ್ಲಿದೆ ಎಂದು ಹೇಳಲಾಗುತ್ತಿದೆ.

ಎಂಬತ್ತು ವರ್ಷ ಮೇಲ್ಪಟ್ಟವರನ್ನು ವಿಮಾನಯಾನ ಪ್ರಯಾಣದಿಂದ ನಿರ್ಬಂಧ

ಎಂಬತ್ತು ವರ್ಷ ಮೇಲ್ಪಟ್ಟವರನ್ನು ವಿಮಾನಯಾನ ಪ್ರಯಾಣದಿಂದ ನಿರ್ಬಂಧ

ಎಂಬತ್ತು ವರ್ಷ ಮೇಲ್ಪಟ್ಟವರನ್ನು ವಿಮಾನಯಾನ ಪ್ರಯಾಣದಿಂದ ನಿರ್ಬಂಧಿಸುವ, ಜೊತೆಗೆ, ಕ್ಯಾಬೀನ್ ಲಗ್ಗೇಜಿಗೂ ಸದ್ಯದ ಮಟ್ಟಿಗೆ ನಿರ್ಬಂಧ ಹೇರುವ ಹೊಸ ನಿಯಮವೂ ಎಸ್ಓಪಿ ಡ್ರಾಫ್ಟ್ ನಲ್ಲಿದೆ. ವಿಮಾನ ನಿಲ್ದಾಣಕ್ಕೆ ಬರುವ ಮುನ್ನವೇ ಪ್ರಯಾಣಿಕರು ವೆಬ್-ಚೆಕ್-ಇನ್ ಮಾಡಿರಬೇಕು.

ಪ್ರಯಾಣಿಕರಿಗೆ ಇಪ್ಪತ್ತು ಕೆಜಿ ತೂಕದ ಒಂದು ಬ್ಯಾಗ್ ಅನ್ನು ತೆಗೆದುಕೊಂಡು ಹೋಗಲು ಅವಕಾಶ

ಪ್ರಯಾಣಿಕರಿಗೆ ಇಪ್ಪತ್ತು ಕೆಜಿ ತೂಕದ ಒಂದು ಬ್ಯಾಗ್ ಅನ್ನು ತೆಗೆದುಕೊಂಡು ಹೋಗಲು ಅವಕಾಶ

ಇದಲ್ಲದೇ, ವಿಮಾನ ಹೊರಡುವ ಎರಡು ಗಂಟೆಗೆ ಮುನ್ನ ವಿಮಾನ ನಿಲ್ದಾಣದಲ್ಲಿರಬೇಕು. ವಿಮಾನ ಹೊರಡುವ ಆರು ಗಂಟೆಯ ಮುನ್ನ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಪ್ರವೇಶಕ್ಕೆ ಅವಕಾಶ. ಪ್ರಯಾಣಿಕರಿಗೆ ಇಪ್ಪತ್ತು ಕೆಜಿ ತೂಕದ ಒಂದು ಬ್ಯಾಗ್ ಅನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡುವ ನಿಯಮ, ಹೊಸ ಡ್ರಾಫ್ಟ್ ನಲ್ಲಿದೆ.

English summary
Draft Standard Operating Procedures Proposed By The Civil Aviation Ministry For Passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X