ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗವಿಕಲರ ಸಾಧನೆ ಪಟ್ಟಿ ಸೇರಿದ ಭಾರತೀಯ ಡಾ. ಸಾಯಿ ಕೌಸ್ತುವ್

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಜುಲೈ 29; ವಿಶಿಷ್ಟ ಸಾಧನೆಗಳನ್ನು ಮಾಡಿದ ಅಂಗವಿಕಲರ ಪಟ್ಟಿಯನ್ನು ಅಮೆರಿಕ ಬಿಡುಗಡೆ ಮಾಡುತ್ತದೆ. ಡಿ-3 ಅಂಗವಿಕಲರ ಪಟ್ಟಿ 2021ರಲ್ಲಿ ಭಾರತೀಯರಾದ ಡಾ. ಸಾಯಿ ಕೌಸ್ತುವ್ ದಾಸ್‌ಗುಪ್ತಾ ಸ್ಥಾನ ಪಡೆದಿದ್ದಾರೆ.

ಸಮುದಾಯದ ಸಹಕಾರದಿಂದ ಅಂಗವೈಕಲ್ಯವನ್ನು ಮರು ಹೆಸರಿಸುವ, ಅವರ ಸಾಧನೆಯನ್ನು ಜಗತ್ತಿಗೆ ತಿಳಿಸಲು ಎಡಿಎ 31ನೇ ವಾರ್ಷಿಕೋತ್ಸವ ಅಂಗವಾಗಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜಾಗತಿಕವಾಗಿ 30 ಅಂಗವೈಕಲ್ಯ ನಾಯಕರ ವಿಶಿಷ್ಟ ಸಾಧನೆಗಳನ್ನು ವಾರ್ಷಿಕೋತ್ಸವದ ಅಂಗವಾಗಿ ಗೌರವಿಸಲಾಗುತ್ತದೆ.

13 ದೇಶಗಳಲ್ಲಿನ 300 ನಾಮನಿರ್ದೇಶನಗಳಲ್ಲಿ ಭಾರತದಿಂದ ಡಾ. ಸಾಯಿ ಕೌಸ್ತುವ್ ದಾಸ್‌ಗುಪ್ತಾ ಅವರು ಡಿ -30 ಅಂಗವೈಕಲ್ಯ ಪರಿಣಾಮ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಜಾಗತಿಕವಾಗಿ ನಡೆದ ನಾಮ ನಿರ್ದೇಶನ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಭಾರತವನ್ನು ಡಾ. ಸಾಯಿ ಕೌಸ್ತು ಪ್ರತಿನಿಧಿಸುತ್ತಿದ್ದಾರೆ.

Dr Sai Kaustuv Dasgupta

ಡಾ. ಸಾಯಿ ಕೌಸ್ತುವ್ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಅಂಗವಿಕಲತೆ ನಡೆವೆಯೂ ಅವರು ತಮ್ಮ ಉತ್ಸಾಹವನ್ನು ಕಳೆದುಕೊಂಡಿಲ್ಲ. ಜೀವನದಲ್ಲಿ ಉತ್ಸಾಹವಿದ್ದರೆ ಯಾವುದೇ ಸಾಧನೆ ಮಾಡುವುದು ಅಸಾಧ್ಯವಲ್ಲ ಎಂದು ಸಾಬೀತು ಮಾಡಿದ್ದಾರೆ.

ಅಪರೂಪವಾದ ಮೂಳೆ ಕಾಯಿಲೆ ಡಾ. ಸಾಯಿ ಕೌಸ್ತುವ್ ಅವರನ್ನು ಶೇ 90ರಷ್ಟು ಅಂಗವಿಕಲರನ್ನಾಗಿ ಮಾಡಿದೆ. ಆದರೆ ಅದನ್ನು ಮೆಟ್ಟಿನಿಂತು ಅವರು ಯಶಸ್ವಿ ಗ್ರಾಫಿಕ್ಸ್ ಡಿಸೈನರ್, ಗ್ಲೋಬಲ್ ಮೋಟಿವೇಷನಲ್ ಸ್ಪೀಕರ್, ಹ್ಯಾಪಿನೆಸ್ ಕೋಚ್ ಆಗಿದ್ದಾರೆ.

ಈಗಾಗಲೇ ಡಾ. ಸಾಯಿ ಕೌಸ್ತುವ್ ಲಿಮ್ಕಾ ಮತ್ತು 15 ವಿಶ್ವ ದಾಖಲೆಗಳ ಪಟ್ಟಿಗೆ ಸೇರಿದ್ದಾರೆ. ಅಂಗವೈಕಲ್ಯದ ನಡುವೆಯೋ ಜನರಿಗೆ ಅವರು ಭರವಸೆಯನ್ನು ತುಂಬುತ್ತಾರೆ. ಗಾಲಿಕುರ್ಚಿಯನ್ನೇ ಸ್ನೇಹಿತನನ್ನಾಗಿ ಮಾಡಿಕೊಂಡಿರುವ ಅವರು ಈಗ ಅಮೆರಿಕದ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ.

ಡಾ. ಸಾಯಿ ಕೌಸ್ತುವ್ ಹ್ಯಾಪಿನೆಸ್ ಕೋಚಿಂಗ್ ಮೂಲಕ ಲಕ್ಷಾಂತರ ಜನರನ್ನು ಭೇಟಿ ಮಾಡಿದ್ದಾರೆ. ಜಾಗತಿಕ ನಾಯಕರು, ವಿದ್ವಾಂಸರು, ವೈದ್ಯರು, ವಿದ್ಯಾರ್ಥಿಗಳು, ಉದ್ಯಮಿಗಳು, ತೃತೀಯ ಲಿಂಗಿಗಳು, ಕೊಳೆಗೇರಿ ಮಕ್ಕಳು, ಯುವ ಐಟಿ ವೃತ್ತಿಪರರನ್ನು ಭೇಟಿ ಮಾಡಿದ್ದಾರೆ, ಅವರನ್ನು ಸಹ ಪ್ರೇರೆಪಿಸಿದ್ದಾರೆ.

ವಿವಿಧ ಸಮುದಾಯದ ಜನರನ್ನು ಭೇಟಿ ಮಾಡಿ ತಮ್ಮ ವಿವಿಧ ಸೃಜನಶೀಲ ಕೌಶಲ್ಯ ಮತ್ತು ಜ್ಞಾನವನ್ನು ಹಂಚಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ, ಮಲೇಷ್ಯಾ, ಸಿಂಗಾಪುರ ಮುಂತಾದ ದೇಶಗಳ ಜನರೊಂದಿಗೆ ಸಹ ಸಂವಾದ ಮಾಡಿದ್ದಾರೆ.

ಜನರು ದುಃಖಪಡಲು ಒಂದು ಮಿಲಿಯನ್ ಕಾರಣಗಳು ಇರಬಹುದು. ಆದರೆ ಎಲ್ಲವನ್ನೂ ನಾವು ಸಮಾನವಾಗಿ ಸ್ವೀಕಾರ ಮಾಡಿದರೆ ಅವುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಬಹುದು ಎಂದು ಡಾ. ಸಾಯಿ ಕಸೌಸ್ತುವ್ ಹೇಳಿದ್ದಾರೆ.

ಡಿ -30 ಅಂಗವೈಕಲ್ಯ ಪರಿಣಾಮ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಡಾ. ಸಾಯಿ ಕೌಸ್ತುವ್ ವಿಶ್ವಸಂಸ್ಥೆಯು ಮುಂದಿಟ್ಟಿರುವ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (ಎಸ್‌ಡಿಜಿ) ಮತ್ತು ಇತರ ಜಾಗತಿಕ ಅಂಗವೈಕಲ್ಯ ನಾಯಕರೊಂದಿಗೆ ಒಟ್ಟಾಗಿ ಅಂಗವೈಕಲ್ಯ ಹೆಮ್ಮೆಯನ್ನು ಉದ್ದೇಶ ಹೊಂದಿದ್ದಾರೆ.

English summary
Dr. Sai Kaustuv Dasgupta from India selected for D-30 Disability Impact List 2021. Americans with Disabilities Act (ADA) announced their 2021 D-30 disability list honoring the unique accomplishments of 30 disability leaders globally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X