1993ರ ಮುಂಬೈ ಸರಣಿ ಸ್ಫೋಟ; ಅಬು ಸಲೇಂ, ಮುಸ್ತಾಫಾ ಅಪರಾಧಿ: ಟಾಡಾ ಕೋರ್ಟ್

Posted By:
Subscribe to Oneindia Kannada

ಮುಂಬೈ, ಜೂನ್ 16: 1993ರಲ್ಲಿ ನಡೆದಿದ್ದ ಮುಂಬೈ ಸರಣಿ ಸ್ಫೋಟ ಪ್ರಕರಣದ ಸಂಚು ರೂಪಿಸುವಲ್ಲಿ ನೆರವಾಗಿದ್ದ ಆರೋಪ ಹೊತ್ತಿದ್ದ ಅಬು ಸಲೇಂ ಅಪರಾಧಿಯೆಂದು ಟಾಡಾ ನ್ಯಾಯಾಲಯ ತೀರ್ಪಿತ್ತಿದೆ.

ಮುಂಬೈ ಸ್ಫೋಟದ ರೂವಾರಿ ಟೈಗರ್ ಮೆನನ್ ಜತೆಯಲ್ಲಿ ಬಾಂಬ್ ಸ್ಫೋಟದ ಯೋಜನೆಗೆ ನೆರವಾಗಿದ್ದನೆಂಬ ಆರೋಪ ಅಬು ಸಲೇಂ ಮೇಲಿದೆ.

abhu salem convicted in 1993 Mumbai Blast Case

ಇನ್ನು, ಇದೇ ಪ್ರಕರಣದ ಸಹ ಆರೋಪಿಗಳಾಗಿದ್ದ ಮುಸ್ತಫಾ ದೌಸಾ ಹಾಗೂ ಆತನ ಸಹೋದರ ಮೊಹಮ್ಮದ್ ದೌಸಾ ಅವರನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪಿತ್ತಿದೆ.

ಇವರೊಂದಿಗೆ, ಫಿರೋಜ್ ಅಬ್ದುಲ್ ರಶೀದ್ ಖಾನ್, ತಾಹಿತ್ ಮರ್ಚೆಂಟ್ ಅವರನ್ನೂ ದೋಷಿಯೆಂದು ನ್ಯಾಯಾಲಯ ತೀರ್ಮಾನ ಮಾಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಟಾಡಾ ಸೆಷನ್ಸ್ ನ್ಯಾಯಾಲಯ, ಸ್ಫೋಟದ ರೂವಾರಿಗಳಿಂದ ಆಜ್ಞೆ ಪಡೆದು ಪ್ರಮುಖ ಆರೋಪಿಗಳಿಗೆ ಶಸ್ತ್ರಾಸ್ತ್ರ ಹಾಗೂ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡಿದ ಆರೋಪವನ್ನು ಮುಸ್ತಫಾ ದೌಸಾ ಹಾಗೂ ಮೊಹಮ್ಮದ್ ದೌಸಾ ಹೊತ್ತಿದ್ದಾರೆ.

Dossa brothers convicted in 1993 Mumbai bomb blasts case

1993ರ ಮಾರ್ಚ್ 12ರಂದು ಒಟ್ಟು 12 ಬಾಂಬ್ ಗಳು ಮುಂಬೈನ ವಿವಿಧೆಡೆ ಸ್ಫೋಟಗೊಂಡು ಘೋರ ಪರಿಣಾಮವನ್ನು ಬೀರಿದ್ದವು. ಈ ಸ್ಫೋಟಗಳಲ್ಲಿ ಒಟ್ಟಾರೆ 257 ಮಂದಿ ಸಾವನ್ನಪ್ಪಿದ್ದರೆ, 713 ಮಂದಿ ಭೀಕರವಾಗಿ ಗಾಯಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mustafa Dossa and his brother Mohammad Dossa convicted in the 1993 Mumbai bomb blasts case by a special TADA court on June 16, 2017.
Please Wait while comments are loading...