"ನನ್ನ ಫ್ಯಾಕ್ಟರಿಯಲ್ಲೇ ನಿಮ್ಮ ಇಡೀ ಜೀವನ ಕಳೆಯಬೇಡಿ, ಓದಿ ಸರ್ಕಾರಿ ಕೆಲಸ ಪಡೆಯಿರಿ": 25,000 ಮಹಿಳೆಯರ ಬದುಕು ಬದಲಿಸಿದ ಉದ್ಯಮಿ

ಇತ್ತೀಚಿನ ದಿನಗಳಲ್ಲಿ ಉದ್ಯೋಗಿಗಳು ತಮ್ಮ ಕಂಪನಿಯಲ್ಲೇ ಉಳಿದುಕೊಳ್ಳಬೇಕು, ಅಲ್ಲಿಯೇ ದುಡಿದು ತಮ್ಮ ಇಡೀ ಜೀವನವನ್ನ ಕಳೆಯಬೇಕು ಎಂದು ಬಯಸುವ ಮಾಲೀಕರೇ ಹೆಚ್ಚು. ಆದರೆ, "ನಿಮ್ಮ ಇಡೀ ಜೀವನವನ್ನ ನನ್ನ ಮಿಲ್‌ನಲ್ಲಿ ಕೆಲಸ ಮಾಡಿಯೇ ಕಳೆಯಬೇಡಿ. ಚೆನ್ನಾಗಿ ಓದಿ, ಸರ್ಕಾರಿ ಉದ್ಯೋಗ ಅಥವಾ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನ ಪಡೆಯುವ ಗುರಿ ಇಟ್ಟುಕೊಳ್ಳಿ" ಎಂದು ತಮ್ಮ ಕಾರ್ಮಿಕರಿಗೆ ಹೇಳುವ ಮೂಲಕ ನಿಜವಾದ ನಾಯಕ ಎನಿಸಿಕೊಂಡಿರುವ ಕೆಪಿಆರ್ ಮಿಲ್ ಸಂಸ್ಥಾಪಕ ಡಾ. ಕೆ.ಪಿ. ರಾಮಸಾಮಿ ಅವರ ಬಗ್ಗೆ ಗೊತ್ತಾ?.

ಹೌದು, ತಮ್ಮ ಕಾರ್ಖಾನೆಯಲ್ಲಿ ಬೆವರು ಸುರಿಸಿ ದುಡಿಯುವ ಕಾರ್ಮಿಕ ಮಹಿಳೆಯರ ಭವಿಷ್ಯವನ್ನ ಉಜ್ವಲಗೊಳಿಸಿದ ಈ ಉದ್ಯಮಿಯ ಸ್ಫೂರ್ತಿದಾಯಕ ಕಥೆ ಎಲ್ಲರಿಗೂ ಮಾದರಿಯಾಗಿದೆ.

Don t Spend Your Life in My Mills Aim for Govt Jobs How KPR Mill Founder Educated 25 000 Women Workers

ಫ್ಯಾಕ್ಟರಿಯಲ್ಲೇ ಮಹಿಳಾ ಕಾರ್ಮಿಕರ ಶಿಕ್ಷಣಕ್ಕೆ ವ್ಯವಸ್ಥೆ!

ಬಡತನ ಹಾಗೂ ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಎಷ್ಟೋ ಹೆಣ್ಣುಮಕ್ಕಳು ತಮ್ಮ ಶಿಕ್ಷಣವನ್ನ ಅರ್ಧದಲ್ಲೇ ಮೊಟಕುಗೊಳಿಸಿ ಗಾರ್ಮೆಂಟ್ಸ್ ಅಥವಾ ಟೆಕ್ಸ್‌ಟೈಲ್ ಫ್ಯಾಕ್ಟರಿಗಳಲ್ಲಿ ಕೆಲಸಕ್ಕೆ ಸೇರುತ್ತಾರೆ. ಇಂತಹ ಸಾವಿರಾರು ಮಹಿಳೆಯರ ಕನಸನ್ನ 1998ರಲ್ಲಿ ಡಾ. ಕೆ.ಪಿ. ರಾಮಸಾಮಿ ಅವರು ಪ್ರೋತ್ಸಾಹಿಸಲು ಶುರು ಮಾಡಿದರು .

ತಮ್ಮ ಫ್ಯಾಕ್ಟರಿಯಲ್ಲಿ ದುಡಿಯುವ ಮಹಿಳೆಯರು ಕೆಲಸದ ಜೊತೆಗೆ ತಮ್ಮ ಶಿಕ್ಷಣವನ್ನ ಸಹ ಮುಂದುವರಿಸಲು ಅನುಕೂಲವಾಗುವಂತೆ ವಿಶೇಷ ಕ್ರಮ ತೆಗೆದುಕೊಂಡರು. ಇದಕ್ಕಾಗಿ ಅವರು ನುರಿತ ಶಿಕ್ಷಕರನ್ನು ನೇಮಿಸಿಕೊಂಡರು ಮತ್ತು ಫ್ಯಾಕ್ಟರಿಯ ವಸತಿಗೃಹದ ಆವರಣದಲ್ಲೇ ತರಗತಿ ಕೊಠಡಿಗಳನ್ನ ನಿರ್ಮಿಸಿದರು.

ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಮಹಿಳೆಯರು, ಬಿಡುವಿನ ವೇಳೆಯಲ್ಲಿ ಅದೇ ಆವರಣದಲ್ಲಿ ವ್ಯಾಸಂಗ ಮಾಡುವ ಮೂಲಕ ತಮ್ಮ ಶಿಕ್ಷಣವನ್ನೂ ಸಹ ಮುಂದುವರಿಸಿದರು.

25,000 ಕಾರ್ಮಿಕರಿಗೆ ಪ್ರತಿಷ್ಠಿತ ಎಂಎನ್‌ಸಿ ಕಂಪನಿಗಳಲ್ಲಿ ಉದ್ಯೋಗ

ಡಾ. ರಾಮಸಾಮಿ ಅವರ ಈ ಯೋಜನೆಯು ಸಾವಿರಾರು ಮಹಿಳೆಯರ ಜೀವನದ ದಿಕ್ಕನ್ನೇ ಬದಲಾಯಿಸಿತು. ಬಿಡುವಿನ ವೇಳೆಯಲ್ಲಿ ಓದಿ ಪದವಿ ಪಡೆದ ಮಹಿಳೆಯರು ಫ್ಯಾಕ್ಟರಿಯ ಕೆಲಸದಿಂದ ಹೊರಬಂದು ಉತ್ತಮ ಭವಿಷ್ಯ ರೂಪಿಸಿಕೊಂಡರು. ಈ ಕ್ರಮದಿಂದಾಗಿ ಇದುವರೆಗೆ ಬರೋಬ್ಬರಿ 25,000ಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಶಿಕ್ಷಣ ಪೂರೈಸಿ, ಟಾಟಾ ಗ್ರೂಪ್, ಫಾಕ್ಸ್‌ಕಾನ್, ಝೋಹೋದಂತಹ ಜಾಗತಿಕ ಮಟ್ಟದ ಪ್ರತಿಷ್ಠಿತ ಎಂಎನ್‌ಸಿ ಕಂಪನಿಗಳಲ್ಲಿ ಉನ್ನತ ಹಾಗೂ ಕೈತುಂಬಾ ಸಂಬಳ ತರುವ ಹುದ್ದೆಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಕೇವಲ ಒಂದು ಕಾರ್ಖಾನೆಯಲ್ಲಿ ದಿನಗೂಲಿ ನೌಕರರಾಗಿ ಕಳೆದುಹೋಗಬೇಕಿದ್ದ ಇವರ ಬದುಕು, ಶಿಕ್ಷಣದ ಶಕ್ತಿಯಿಂದಾಗಿ ಇಂದು ಕಾರ್ಪೊರೇಟ್ ಜಗತ್ತಿಗೆ ತೆರೆದುಕೊಂಡಿದೆ.

ಸರ್ಕಾರಿ ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಯಶಸ್ಸು

ಕೇವಲ ಖಾಸಗಿ ಕಂಪನಿಗಳು ಮಾತ್ರವಲ್ಲ, ಇಲ್ಲಿ ವ್ಯಾಸಂಗ ಮಾಡಿದ ಅನೇಕ ಮಹಿಳೆಯರು ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಬರೆದು ಸರ್ಕಾರಿ ಉದ್ಯೋಗವನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಕಾರ್ಮಿಕರು ಎಂದರೆ ಕೇವಲ ಲಾಭ ತಂದುಕೊಡುವ ಯಂತ್ರಗಳಲ್ಲ, ಅವರಿಗೂ ಉಜ್ವಲ ಭವಿಷ್ಯವಿದೆ ಎಂದು ನಂಬಿದ ಡಾ. ಕೆ.ಪಿ. ರಾಮಸಾಮಿ ಅವರ ಮಾನವೀಯ ಕಾರ್ಯವು ಇಂದು ಸಾವಿರಾರು ಕುಟುಂಬಗಳಿಗೆ ಆಶಾಕಿರಣವಾಗಿದೆ.

ನಿಜವಾದ ನಾಯಕತ್ವ ಮತ್ತು ಕಾರ್ಪೊರೇಟ್ ಜವಾಬ್ದಾರಿ ಎಂದರೆ ಕೇವಲ ಲಾಭ ಗಳಿಸುವುದಲ್ಲ, ಬದಲಾಗಿ ವ್ಯಕ್ತಿಯೊಬ್ಬನ ಭವಿಷ್ಯವನ್ನ ಕಟ್ಟಿಕೊಡುವುದು ಎಂಬುದನ್ನು ರಾಮಸಾಮಿಯವರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+