ನಿಮ್ಮ ರಾಜಕೀಯಕ್ಕೆ ನಮ್ಮನ್ನು ಎಳೆಯಬೇಡಿ: ಮೋದಿಗೆ ಪಾಕ್ ತಿರುಗೇಟು

ಅಹಮದಾಬಾದ್, ಡಿಸೆಂಬರ್ 11: ಗುಜರಾತ್ ನಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಾಕಿಸ್ತಾನದ ಜತೆ ಕೈಜೋಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಈ ಆರೋಪವನ್ನು ಸಾರಸಗಟಾಗಿ ತಳ್ಳಿ ಹಾಕಿರುವ ಪಾಕಿಸ್ತಾನ ನಿಮ್ಮ ರಾಜಕೀಯಕ್ಕೆ ನಮ್ಮನ್ನು ಎಳೆಯಬೇಡಿ ಎಂದು ತಿರುಗೇಟು ನೀಡಿದೆ.

"ತನ್ನ ರಾಜಕೀಯ ಚರ್ಚೆಗಳಿಗೆ ಪಾಕಿಸ್ತಾನವನ್ನು ಎಳೆದು ತರುವುದನ್ನು ಭಾರತ ನಿಲ್ಲಿಸಬೇಕು. ಸಂಪೂರ್ಣವಾಗಿ ಆಧಾರವಿಲ್ಲದ ಮತ್ತು ಬೇಜವಾಬ್ದಾರಿಯುತ, ತಯಾರಿಸಿದ ಪಿತೂರಿಗಳ ಬದಲು ನಿಮ್ಮ ಸ್ವಂತ ಸಾಮರ್ಥ್ಯದ ಮೇಲೆ ವಿಜಯ ಸಾಧಿಸಿ," ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್ ಪ್ರಧಾನಿ ಮೋದಿಯನ್ನುದ್ದೇಶಿಸಿ ಖಾರವಾಗಿ ಟ್ವೀಟ್ ಮಾಡಿದ್ದಾರೆ.

Don’t drag us into your poll debate : Pakistan tells Modi

ಪಾಕಿಸ್ತಾನದ ಪ್ರತಿಕ್ರಿಯೆಗೆ ಕೆರಳಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, "ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವುದು ಗೊತ್ತಿದೆ. ಪಾಕಿಸ್ತಾನ ನಮಗೆ ಪಾಠ ಹೇಳುವುದನ್ನು ನಿಲ್ಲಿಸಬೇಕು. ಭಾರತದ ಆಂತರಿಕ ವಿಚಾರದಲ್ಲಿ ಹೊರಗಿನವರು ಮೂಗು ತೂರಿಸುವುದನ್ನು ಕ್ಷಮಿಸಲು ಸಾಧ್ಯವಿಲ್ಲ," ಎಂದಿದ್ದಾರೆ.

ಪಾಕಿಸ್ತಾನ ಸೇನಾ ಜನರಲ್ ಸರ್ದಾರ್ ಅರ್ಷದ್ ರಫೀಖ್ ಅವರು ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಮುಂದಿನ ಗುಜರಾತ್ ಮುಖ್ಯಮಂತ್ರಿಯಾಗಬೇಕು ಎಂದು ಫೇಸ್ಬುಕ್ ಪೋಸ್ಟ್ ಹಾಕಿದ್ದರು. ಇದಕ್ಕೆ ಬಿಜೆಪಿ ಕಡೆಯಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದನ್ನೇ ಪ್ರಧಾನಿ ಮೋದಿ ತಮ್ಮ ಭಾನುವಾರದ ಸಮಾವೇಶ ಭಾಷಣದಲ್ಲೂ ಉಲ್ಲೇಖಿಸಿದ್ದರು.

ಇದಕ್ಕೀಗ ಪಾಕಿಸ್ತಾನ ವಿದೇಶಾಂಗ ಇಲಾಖೆ ತಿರುಗೇಟು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+