ಡಾನ್ ದಾವೂದ್ ಜೊತೆ ಬಾಲಿವುಡ್ ನಟಿ ಲವ್ವಿಡವ್ವಿ, ಆ ಒಂದು ಫೋಟೋದಿಂದ ಹಾಳಾಯ್ತು ಮಹಾನಟಿ ಸಿನಿ ಜೀವನ!
ಡಾನ್ ದಾವೂದ್ ಇಬ್ರಾಹಿಂ ಎಲ್ಲಾ ವಿಚಾರದಲ್ಲೂ ಸಾಲು ಸಾಲು ವಿವಾದ ಹುಟ್ಟುಹಾಕಿದ್ದ ವ್ಯಕ್ತಿ. ದಾವೂದ್‌ಗೆ ಇದ್ದ ಹವ್ಯಾಸಗಳು ಕೆಲವೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿದ್ದವು. ಈ ರೀತಿ ದಾವೂದ್ ಇಬ್ರಾಹಿಂ ಲವ್ ಸ್ಟೋರಿ ಕೂಡ, ಸಖತ್ ಸದ್ದನ್ನು ಮಾಡಿತ್ತು. ಹಾಗಾದರೆ ದಾವೂದ್ ಹೆಸರಿನ ಜೊತೆಗೆ ತಳುಕು ಹಾಕಿಕೊಂಡ ಆ ಬ್ಯೂಟಿಯ ಹೆಸರು ಯಾವುದು? ಬಾಲಿವುಡ್ ನಟಿ ಜೀವನ ಮುಂದೆ ಏನಾಯ್ತು ಗೊತ್ತಾ?
ಯೆಸ್, ದಾವೂದ್ ಇಬ್ರಾಹಿಂಗೆ ಈಗ ವಿಷ ಹಾಕಿ ಹತ್ಯೆಗೆ ಯತ್ನಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಡಾನ್ ದಾವೂದ್‌ನ ಈಗ ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದ್ದು ದಾವೂದ್ ಸ್ಥಿತಿ ಗಂಭೀರವಾದ ಹಿನ್ನೆಲೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಈ ನಡುವೆ ದಾವೂದ್ ಇಬ್ರಾಹಿಂ ಹೊಟ್ಟೆಯಲ್ಲಿ ವಿಷ ಕಂಡು ಬಂದಿದೆ ಎಂಬ ವದಂತಿ ಹಬ್ಬಿದೆ ಕೂಡ. ಇಷ್ಟೆಲ್ಲದರ ನಡುವೆ ದಾವೂದ್ ಮತ್ತು ಬಾಲಿವುಡ್ ನಟಿ ನಡುವಿನ ಲವ್ ಕಹಾನಿ ಬಗ್ಗೆಯೂ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಹಾಗಾದರೆ ಯಾರದು ಬಾಲಿವುಡ್ ನಟಿ?

ದಾವೂದ್ ಇಬ್ರಾಹಿಂ ಲವ್ ಕಹಾನಿ!
ಅಂದಹಾಗೆ 'ರಾಮ್ ತೇರಿ ಗಂಗಾ ಮೈಲಿ' ಸಿನಿಮಾ ಬಾಲಿವುಡ್ ಅಂಗಳದಲ್ಲಿ ಹಲವು ದಾಖಲೆ ಮೇಲೆ ದಾಖಲೆ ಬರೆದಿತ್ತು. ಅದ್ರಲ್ಲೂ ಈ ಸಿನಿಮಾ ಮೂಲಕ ನಟಿ ಮಂದಾಕಿನಿ ಬಿ-ಟೌನ್ ಅಂಗಳದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟರು. ಹೀಗೆ ನಟಿ ಮಂದಾಕಿನಿ ಬಾಳಲ್ಲಿ ಹೊಸ ಆಸೆ ಚಿಗುರುವ ಸಮಯದಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಮಂದಾಕಿನಿಯ ಹೆಸರು ತಳಕು ಹಾಕಿಕೊಂಡಿತ್ತು. ವೈರಲ್ ಆದ ದಾವೂದ್ ಜತೆಗಿನ ಮಂದಾಕಿನಿಯ ಫೋಟೋ ಬಾಲಿವುಡ್‌ನ ಶೇಖ್ ಮಾಡಿದ್ದವು. ದಾವೂದ್ & ಮಂದಾಕಿನಿ ನಡುವೆ ಲವ್ ಶುರುವಾಗಿದೆ, ಅವರು ಮದುವೆ ಕೂಡ ಆಗ್ತಾರೆ ಎನ್ನುವ ವರದಿಗಳು ಆಗಿನ ಕಾಲಕ್ಕೆ ಓಡಾಡಿದ್ದವು.
ಹೇಗಿತ್ತು ಮಂದಾಕಿನಿ ಸಿನಿ ಕರಿಯರ್?
ಅಂದಹಾಗೆ 26 ವರ್ಷಗಳ ಹಿಂದೆ ರಾಜ್ ಕಪೂರ್ ಅವರು ನಟಿ ಮಂದಾಕಿನಿಯನ್ನು ಗುರುತಿಸಿ 'ರಾಮ್ ತೇರಿ ಗಂಗಾ ಮೈಲಿ' ಚಿತ್ರದಲ್ಲಿ ಚಾನ್ಸ್ ಕೊಟ್ಟಿದ್ದರು. ಈ ಸಿನಿಮಾದ ಮೂಲಕ ಇಡೀ ಬಾಲಿವುಡ್ ಅಂಗಳ ತಿರುಗಿ ನೋಡುವಂತೆ ಸಾಧನೆ ಮಾಡಿದರು ನಟಿ ಮಂದಾಕಿನಿ. ನಂತರ ನಟಿ ಮಂದಾಕಿನಿ ಅವರ ಡೇಟ್ ಪಡೆಯಲು ಪ್ರತಿಯೊಂದು ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕರು ಕೂಡ ಸಾಲುಗಟ್ಟಿ ನಿಲ್ಲುತ್ತಿದ್ದರು ಎನ್ನಲಾಗಿದೆ. ಜನರು ಕೂಡ ಮಂದಾಕಿನಿ ಅವರ ಸೌಂದರ್ಯಕ್ಕೆ ಮನಸೋತಿದ್ದರು. ಆದರೆ ಆ ನಂತರ ಆಗಿದ್ದೇ ಬೇರೆ.

ಯಾವಾಗ ದಾವೂದ್ ಜೊತೆಗಿನ ನಟಿ ಮಂದಾಕಿನಿ ಅವರ ಫೋಟೋಗಳು ವೈರಲ್ ಆಗಲು ಶುರುವಾದವೋ, ಅಲ್ಲಿಂದ ಮುಂದೆ ನಟಿ ಸಿನಿಮಾ ರಂಗದಿಂದ ದೂರ ಉಳಿಯಲು ಆರಂಭ ಮಾಡಿದ್ದರು. ಟಾಪ್ ನಟಿಯಾಗಿದ್ದ ನಟಿ ಮಂದಾಕಿನಿ ಮುಂದೆ ಚಿತ್ರರಂಗದಿಂದ ಸಂಪೂರ್ಣ ದೂರವಾದರು. ಆಗಿನ ಕಾಲಕ್ಕೆ ಇವರಿಬ್ಬರ ವಿಚಾರ ಜಾಗತಿಕವಾಗಿ ಸಖತ್ ಸೌಂಡ್ ಕೂಡ ಮಾಡಿತ್ತು.
ಈಗ ಏನಾಗಿದೆ ಡಾನ್ ದಾವೂದ್‌ಗೆ?
2 ದಿನದ ಹಿಂದಷ್ಟೇ ದಾವೂದ್‌ನ ಕರಾಚಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯನ್ನ ನೀಡಲಾಗುತ್ತಿದೆ. ದಾವೂದ್ ಇರುವ ಆಸ್ಪತ್ರೆಗೆ ಭಾರಿ ಭದ್ರತೆ ಒದಗಿಸಲಾಗಿದೆ ಅಂತಾ ಹೇಳಲಾಗುತ್ತಿದೆ. ದಾವೂದ್ ಇಬ್ರಾಹಿಂ ಚಿಕಿತ್ಸೆ ಪಡೀತಿರುವ ಕರಾಚಿ ಆಸ್ಪತ್ರೆ ಫ್ಲೋರ್‌ನಲ್ಲಿ ಬೇರೆ ಯಾವುದೇ ರೋಗಿಗಳನ್ನೂ ಇರಿಸಿಲ್ಲ. ಎಲ್ಲರನ್ನೂ ಖಾಲಿ ಮಾಡಿಸಿ ಅದೇ ಫ್ಲೋರ್‌ನಲ್ಲಿ ಡಾನ್ ದಾವೂದ್‌ಗೆ ಟ್ರೀಟ್‌ಮೆಂಟ್ ನೀಡಲಾಗುತ್ತಿದೆ. ಹೀಗೆ ದಾವೂದ್ ಇಬ್ರಾಹಿಂ ಇರುವ ಆಸ್ಪತ್ರೆಯ ಫ್ಲೋರ್‌ಗೆ, ಆಸ್ಪತ್ರೆ ವೈದ್ಯರು & ಕುಟುಂಬ ವರ್ಗವನ್ನ ಬಿಟ್ಟು ಬೇರೆ ಯಾರಿಗೂ ಅವಕಾಶ ನೀಡಿಲ್ಲ ಎನ್ನಲಾಗಿದೆ.












Click it and Unblock the Notifications