ಕೊರೊನಾ ಸೋಂಕು ಕೇವಲ ಶ್ವಾಸಕೋಶಕ್ಕೆ ಮಾತ್ರ ತೊಂದರೆ ಮಾಡುತ್ತಾ?
ನವದೆಹಲಿ, ಆಗಸ್ಟ್ 27: ವಿಶ್ವದಾದ್ಯಂತ ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಕೊರೊನಾ ವೈರಸ್ ಕೇವಲ ಶ್ವಾಸಕೋಶದ ಮೇಲೆ ಮಾತ್ರ ಪರಿಣಾಮವನ್ನು ಬೀರುವುದಿಲ್ಲ ಎಂಬುದನ್ನು ಏಮ್ಸ್ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
Recommended Video
ನಿಮಿಷ ನಿಮಿಷಕ್ಕೂ ತನ್ನ ಹೊಸ ಸ್ವರೂಪವನ್ನು ಇದು ತೋರಿಸುತ್ತಿದ್ದು, ಈ ವೈರಸ್ ಕುರಿತಂತೆ ಹಲವಾರು ಅಧ್ಯಯನಗಳು ನಡೆಯುತ್ತಿವೆ.
ಹಲವು ಪ್ರಕರಣಗಳಲ್ಲಿ ವೈರಸ್‌ಗಳು ರೋಗಿಗಳಲ್ಲಿ ಕಂಡುಬರುವಂತಹ ಲಕ್ಷಣಗಳಿಗೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ, ಹೀಗಾಗಿ ಎಲ್ಲಾ ರೋಗಿಗಳಿಗೂ ಶ್ವಾಸಕೋಶದ ತೊಂದರೆಯನ್ನೇ ಉಂಟು ಮಾಡಬಲ್ಲದು ಎಂಬುದು ತಪ್ಪು ಕಲ್ಪನೆ ಎಂದು ವಿವರಿಸಿದ್ದಾರೆ.

ಏಮ್ಸ್ ಹೇಳಿದ್ದೇನು?
ಈ ನಡುವೆಯೇ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಇದರ ಕುರಿತು ಅಧ್ಯಯನ ಕೈಗೊಂಡಿದ್ದು, ಒಂದಿಷ್ಟು ಅಂಶಗಳು ಹೊರಬಂದಿವೆ.
ನೀತಿ ಆಯೋಗದ ಸಹಯೋಗದಲ್ಲಿ ಮೂಡಿಬರುತ್ತಿರುವ ನ್ಯಾಷನಲ್ ಕ್ಲಿನಿಕಲ್ ಗ್ರಾಂಡ್ ರೌಂಡ್ಸ್ ನಲ್ಲಿ ಏಮ್ಸ್ ನ ನಿರ್ದೇಶಕ ಡಾ.ರಣ್ದೀಪ್ ಗುಲೇರಿಯಾ, ನ್ಯೂರಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಎಂವಿ ಪದ್ಮ ಶ್ರೀವಾಸ್ತವ, ಹೃದಯ ಸಂಬಂಧಿ ಪ್ರೊಫೆಸರ್ ಡಾ. ಅಂಬುಜ್ ರಾಯ್, ಡಿಪಾರ್ಟ್‌ಮೆಂಟ್ ಆಫ್ ಮೆಡಿಸಿನ್‌ನ ಸಹಾಯಕ ಉಪನ್ಯಾಸಕ ಡಾ.ನೀರಜ್ ನಿಶ್ಚಲ್ ಕೊವಿಡ್-19 ನಿಂದ ಉಂಟಾಗುತ್ತಿರುವ ಶ್ವಾಸಕೋಶದ ಜತೆಗಿನ ಬೇರೆ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.ಅವರು ಹೇಳುವುದೇನೆಂದರೆ ಕೊರೊನಾ ವೈರಸ್ ಬಹುತೇಕ ಎಲ್ಲಾ ಅಂಗಾಂಗಗಳಿಗೂ ಸಹ ಮಾರಕವಾಗಿದೆ ಹಾಗೂ ಕೆಲವೊಂದು ಪ್ರಕರಣಗಳಲ್ಲಿ ರೋಗ ಲಕ್ಷಣಗಳಿಗೂ ಶ್ವಾಸಕೋಶಕ್ಕೂ ಸಂಬಂಧವೇ ಇರುವುದಿಲ್ಲ.
ಮೂರು ವಿಭಾಗಗಳು
ಕಡಿಮೆ, ಸಾಧಾರಣ ಮತ್ತು ತೀವ್ರ ಎಂದು ಕೊರೊನಾ ಪ್ರಕರಣಗಳನ್ನು ವಿಭಾಗಿಸಲಾಗಿದ್ದು, ಇದು ಕೇವಲ ಶ್ವಾಸಕೋಶಕ್ಕೆ ಸಂಬಂಧಿಸಿದ ಲಕ್ಷಣಗಳಿಂದ ಮಾಡಲಾಗಿದೆ. ಆದರೆ ಬೇರೆ ಅಂಗಾಂಗಗಳ ಮೇಲಿನ ಪರಿಣಾಮವನ್ನು ಮರುಪರಿಶೀಲಿಸಬೇಕಿದೆ ಎಂದಿದ್ದಾರೆ ತಜ್ಞರು.

ನ್ಯುಮೋನಿಯಾ ಎಂದು ಮೊದಲು ಪರಿಗಣಿಸಲಾಗಿತ್ತು
ಸಂಶೋಧಕರು ಹೇಳಿರುವ ಪ್ರಕಾರ, ಪ್ರಾರಂಭದಲ್ಲಿ ಕರೊನಾವನ್ನು ವೈರಲ್ ನ್ಯುಮೋನಿಯಾ ಎಂದು ಪರಿಗಣಿಸಲಾಗಿತ್ತು. ಆದರೆ ಬರುಬರುತ್ತಾ, ಇದರ ಸ್ವರೂಪ ವಿಸ್ತಾರಗೊಳ್ಳುತ್ತಿದೆ. ಇದೀಗ ದೇಹದಲ್ಲಿರುವ ಎಲ್ಲಾ ಅಂಗಾಂಗಗಳಿಗೂ ಮಾರಣಾಂತಿಕ ಅಪಾಯಗಳನ್ನು ತಂದೊಡ್ಡುವ ಸಾಮರ್ಥ್ಯ ಹೊಂದಿದೆ. ಅದು ಶ್ವಾಸಕೋಶವನ್ನೂ ಮೀರಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪಾರ್ಶ್ವವಾಯು ಹಾಗೂ ಹೃದಯ ನಾಳಗಳಲ್ಲಿ ಬ್ಲಾಕ್
ಎಸಿಎ2 ರಿಸೆಪ್ಟರ್ಸ್ ಮೂಲಕ ಜೀವಕೋಶಗಳಿಗೆ ಈ ವೈರಸ್ ಪ್ರವೇಶ ಪಡೆದುಕೊಳ್ಳುತ್ತವೆ, ಈ ರೀತಿ ಶ್ವಾಸಕೋಶ ಮಾತ್ರವಲ್ಲದೇ ಬೇರೆ ಅಂಗಾಂಗಗಳಿಗೂ ಸೇರ್ಪಡೆಯಾಗುತ್ತವೆ. ಇದರಿಂದಾಗಿ ಸೋಂಕು ಪೀಡಿತರು ರೋಗ ಲಕ್ಷಣ ರಹಿತರಾಗಿದ್ದರೂ ಪಾರ್ಶ್ವವಾಯು ಹಾಗೂ ಹೃದಯ ನಾಳಗಳಲ್ಲಿ ಬ್ಲಾಕ್ ಉಂಟಾಗಿ ಮಾರಣಾಂತಿಕ ಅಪಾಯಗಳನ್ನು ಎದುರಿಸಬಹುದು ಎಂದಿದ್ದಾರೆ.












Click it and Unblock the Notifications