ಆರೋಪಿ ಜತೆಗೆ ತಾಳೆಯಾಗದ ಅತ್ಯಾಚಾರ ಸಂತ್ರಸ್ತೆಯ ಮಗುವಿನ ಡಿಎನ್ ಎ

Posted By:
Subscribe to Oneindia Kannada

ಈಚೆಗೆ ಚಂಡೀಗಡದ ಹತ್ತು ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತ ಮಾಡಿಸಕೂಡದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆ ಬಾಲಕಿಯು ಚಂಡೀಗಡದ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಕಳೆದ ತಿಂಗಳು ಜನ್ಮ ನೀಡಿದ್ದಾಳೆ. ಅಚ್ಚರಿಯ ಸಂಗತಿ ಏನೆಂದರೆ, ಆ ಬಾಲಕಿ ಅತ್ಯಾಚಾರದ ಆರೋಪ ಮಾಡಿದ್ದ ವ್ಯಕ್ತಿಯ ಜತೆಗೆ ಆ ಮಗುವಿನ ಡಿಎನ್ ಎ ಹೊಂದಿಕೆ ಆಗುತ್ತಿಲ್ಲ.

ಅತ್ಯಾಚಾರ ಸಂತ್ರಸ್ತ ಬಾಲಕಿಗೆ 10 ಲಕ್ಷ ರು. ಪರಿಹಾರಕ್ಕೆ ಸುಪ್ರೀಂ ಸೂಚನೆ

ಈ ಬಗ್ಗೆ ಬಿಬಿಸಿ ವರದಿ ಮಾಡಿದ್ದು, ಈ ಪ್ರಕರಣದ ತನಿಖೆ ಪೊಲೀಸರು ಪುನರಾರಂಭಿಸಿದ್ದಾರೆ. ಆ ಬಾಲಕಿಯ ಸಂಬಂಧಿಯ ಮೇಲೆ ಅತ್ಯಾಚಾರದ ದೂರು ದಾಖಲಾಗಿತ್ತು. ಆದರೆ ಈಗ ಆತನ ಜತೆಗೆ ಮಗುವಿನ ಡಿಎನ್ ಎ ತಾಳೆ ಆಗದೆ, ಒಬ್ಬರಿಗಿಂತ ಹೆಚ್ಚು ಮಂದಿ ಬಾಲಕಿ ಮೇಲೆ ಅತ್ಯಾಚಾರ ಮಾಡಿರಬಹುದೇ ಎಂದು ಅನುಮಾನ ಪಡುವಂತಾಗಿದೆ.

DNA Test Of The Baby Born To A 10-Year-Old Rape Survivor Does Not Match Her Alleged Rapist

ಹಾಗೊಂದು ವೇಳೆ ಆಗಿದ್ದರೆ ಆತ ಯಾರು ಎಂಬ ಪ್ರಶ್ನೆ ಎದುರಾಗಿದೆ. ಆ ಬಾಲಕಿಯ ಸೋದರ ಸಂಬಂಧಿಗಳಾದ ನಲವತ್ತಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ ದೌರ್ಜನ್ಯ ನಡೆಸಿದ್ದ ವ್ಯಕ್ತಿಯ ಹೆಸರನ್ನು ಸಂತ್ರಸ್ತೆಯು ಸ್ಪಷ್ಟವಾಗಿ ಹೇಳಿದ್ದಳು. ಪೊಲೀಸರಿಗೆ ನೀಡಿದ್ದ ಹೇಳಿಕೆಯಲ್ಲೂ ತಿಳಿಸಿದ್ದಳು. ಆ ಬಾಲಕಿ ಮೇಲೆ ಆತ ಏಳು ತಿಂಗಳು ಅತ್ಯಾಚಾರ ನಡೆಸಿದ್ದ.

ಆರೋಪಿ ಕೂಡ ತನ್ನ ತಪನ್ನು ಒಪ್ಪಿಕೊಂಡಿದ್ದ. ಅವನ ವಿಚಾರಣೆಯು ಮಕ್ಕಳ ವಿರುದ್ಧದ ಅಪರಾಧದ ವಿಚಾರಣೆ ನಡೆಸುವ ಕೋರ್ಟ್ ನಲ್ಲಿ ನಡೆದಿತ್ತು. ಕೋರ್ಟ್ ನಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲೂ ಸಂತ್ರಸ್ತೆಯು ಆರೋಪಿಯನ್ನು ಗುರುತಿಸಿದ್ದಳು.

ಮುಂಬೈನಲ್ಲಿ 12 ವರ್ಷದ ಬಾಲಕಿ 27 ವಾರಗಳ ಗರ್ಭಿಣಿ

ಇದೀಗ ಮುಂದಿನ ವಿಚಾರಣೆ ಹೇಗೆ ನಡೆಸಬೇಕು ಎಂಬುದೇ ತಿಳಿಯದಾಗಿದೆ. ಬಾಲಕಿಯ ಪೋಷಕರು ಸಹ ತಮಗೆ ಯಾರ ಬಗ್ಗೆಯೂ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ. ಪೊಲೀಸರು ಮತ್ತೊಮ್ಮೆ ಡಿಎನ್ ಎ ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ. ಮೊದಲ ಬಾರಿ ಯಾವುದೇ ತಪ್ಪಾಗಿಲ್ಲ ಎಂಬುದು ಸಾಬೀತು ಪಡಿಸುವ ಪ್ರಯತ್ನ ಇದಾಗಿದೆ.

ಇನ್ನು ಆ ಬಾಲಕಿಗೆ ಹೆರಿಗೆ ಬಗ್ಗೆ ಏನೇನೂ ಗೊತ್ತಿಲ್ಲ. ಹೊಟ್ಟೆಯಲ್ಲಿ ಕಲ್ಲಿದೆ. ಅದನ್ನು ಹೊರ ತೆಗೆಯುವುದಕ್ಕೆ ಆಪರೇಷನ್ ಮಾಡಬೇಕಿದೆ ಎಂದು ಬಾಲಕಿಗೆ ಹೇಳಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಕೆಗೆ ಹೆಣ್ಣು ಮಗು ಜನಿಸಿದ್ದು, ಅದರ ತೂಕ ಸ್ವಲ್ಪ ಕಡಿಮೆಯಿದೆ. ಆ ಬಾಲಕಿ ಗರ್ಭ ಧರಿಸಿದ್ದಾಳೆ ಎಂದು ತಿಳಿಯುವ ಹೊತ್ತಿಗೆ ಇಪ್ಪತ್ತಾರು ವಾರ ಕಳೆದು ಹೋಗಿತ್ತು.

ಹತ್ತು ವರ್ಷದ ಅತ್ಯಾಚಾರ ಸಂತ್ರಸ್ತೆ ಗರ್ಭಪಾತ ಮಾಡಿಸುವಂತಿಲ್ಲ: ಸುಪ್ರೀಂ

ಆ ನಂತರ ಸುಪ್ರೀಂ ಕೋರ್ಟ್ ಮೊರೆ ಹೋಗಿ ಗರ್ಭ ಪಾತಕ್ಕೆ ಅನುಮತಿ ಕೋರಲಾಗಿತ್ತು. ಅದರಿಂದ ಬಾಲಕಿಗೆ ಹಾಗೂ ಆಕೆಯ ಗರ್ಭಕ್ಕೆ ತೊಂದರೆ ಆಗುತ್ತದೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರಿಂದ ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Police have reopened 10 year old girl rape case, after DNA tests proved that the man accused of raping her — her uncle — was not the baby's father, leading to questions about whether the girl had been raped by multiple men, and if so, who could they be.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ