ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ವಿಶೇಷ: ಗೋರಖ್‌ಪುರ- ಕೊಯಮತ್ತೂರು ನಡುವೆ 2 ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ

|
Google Oneindia Kannada News

ಭಾರತೀಯ ರೈಲ್ವೆಯು ಗೋರಖ್‌ಪುರ- ಚೆನ್ನೈನ ಕೊಯಮತ್ತೂರು ನಡುವೆ 5 ಭಾರಿ ಟ್ರಿಪ್ 2 ವಿಶೇಷ ರೈಲುಗಳನ್ನು ಓಡಿಸಲು ಘೋಷಿಸಿದೆ. ಇದರಿಂದ ಪ್ರಯಾಣಿಕರು ಹಬ್ಬದ ಸೀಸನ್‌ನಲ್ಲಿ ಕಾಯುವುದರಿಂದ ನಿರಾಳರಾಗುತ್ತಾರೆ. ದೀಪಾವಳಿ ಮತ್ತು ಛತ್ ಪೂಜೆಗೆ ಮನೆಗೆ ತೆರಳುವ ಪ್ರಯಾಣಿಕರಿಗೆ ರೈಲ್ವೆ ಶುಭ ಸುದ್ದಿ ನೀಡಿದೆ. ಭಾರತೀಯ ರೈಲ್ವೇಯು ಗೋರಖ್‌ಪುರ-ಕೊಯಮತ್ತೂರು-ಗೋರಖ್‌ಪುರ ನಡುವೆ ಐದು-ಟ್ರಿಪ್ ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಿಸಿದೆ.

ಇದರಿಂದ ಪ್ರಯಾಣಿಕರು ಹಬ್ಬದ ಸೀಸನ್‌ನಲ್ಲಿ ಕಾಯುವುದರಿಂದ ನಿರಾಳರಾಗುತ್ತಾರೆ. ಈ ವಿಶೇಷ ರೈಲಿನ ಓಡಾಟದಿಂದಾಗಿ ತಮಿಳುನಾಡು, ಯುಪಿ ಮತ್ತು ಮಧ್ಯಪ್ರದೇಶದ ಪ್ರಯಾಣಿಕರಿಗೂ ಪರಿಹಾರ ಸಿಗಲಿದೆ. ಈ ವಿಶೇಷ ರೈಲು ಭೋಪಾಲ್ ಮತ್ತು ಇಟಾರ್ಸಿ ನಿಲ್ದಾಣಗಳಲ್ಲಿಯೂ ನಿಲ್ಲುತ್ತದೆ. ಹಬ್ಬದ ಸೀಜನನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ನಿರಂತರ ಹೆಚ್ಚಳದಿಂದಾಗಿ ರೈಲ್ವೆ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ವಿಶೇಷ ರೈಲಿನ ವೇಳಾಪಟ್ಟಿ
ಈ ಸೇವೆಯು ಉತ್ತರ ಪ್ರದೇಶದ ಕೊಯಮತ್ತೂರು ಜಂಕ್ಷನ್ ಮತ್ತು ಗೋರಖ್‌ಪುರ ನಡುವೆ ಸೇಲಂ, ಈರೋಡ್ ಮತ್ತು ತಿರುಪ್ಪೂರ್ ಮೂಲಕ ಚಲಿಸುತ್ತದೆ ಹಾಗೂ ದೀಪವಾಳಿಗಾಗಿ ಜೋಡಿ ರೈಲುಗಳು ಸಂಚರಿಸಲಿವೆ. ಈ ವಿಶೇಷ ರೈಲು (05303) ಗೋರಖ್‌ಪುರದಿಂದ ಬೆಳಗ್ಗೆ 8.30ಕ್ಕೆ ಹೊರಡಲಿದೆ. ಅಕ್ಟೋಬರ್ 8ರಿಂದ ನವೆಂಬರ್ 5ರವರೆಗೆ ಶನಿವಾರದವರಿಗೆ ಸತತ ಐದು ಟ್ರಿಪ್‌ ಸಂಚರಿಸುತ್ತದೆ.

Diwali Special: Two special trains between Uttar Pradesh and Coimbatore to clear festival rush

ಈ ರೈಲು ಸೋಮವಾರದಂದು ಬೆಳಿಗ್ಗೆ 7.25ಕ್ಕೆ ಕೊಯಮತ್ತೂರು ಜಂಕ್ಷನ್‌ಗೆ ತಲುಪುತ್ತದೆ. ಹಾಗೂ ಇನ್ನೊಂದು ವಿಶೇಷ ರೈಲು (05304) ಅಕ್ಟೋಬರ್ 11ರಿಂದ ನವೆಂಬರ್ 8ರವರಿಗೆ ಕೊಯಮತ್ತೂರು ಜಂಕ್ಷನ್‌ನಿಂದ ಮುಂಜಾನೆ 4.40 ಗಂಟೆಗೆ ಹೊರಡಲಿದೆ. ಈ ರೈಲು ಕೂಡ ವಾರದಲ್ಲಿ 5 ಟ್ರಿಪ್‌ ಸಂಚಿರಿಸಲಿದ್ದು, ಉತ್ತರ ಪ್ರದೇಶದ ಗೋರಖ್‌ಪುರವನ್ನು ಬೆಳಗ್ಗೆ 8.35 ಗಂಟೆಗೆ ತಲುಪುತ್ತದೆ. ರೈಲಿನಲ್ಲಿ ಒಂದು ಎಸಿ 2-ಟೈರ್ ಕೋಚ್ ಮತ್ತು ಎರಡು ಎಸಿ 3-ಟೈರ್ ಸೇರಿದಂತೆ 22 ಕೋಚ್‌ಗಳಿವೆ ಮತ್ತು ರೈಲಿನ ಬುಕಿಂಗ್ ಪ್ರಾರಂಭವಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

179 ಹಬ್ಬದ ರೈಲುಗಳನ್ನು ಓಡಿಸಲು ರೈಲ್ವೆ ಘೋಷಣೆ
ದೀಪಾವಳಿ ಮತ್ತು ಛತ್ ಪೂಜೆಯಲ್ಲಿ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು 179 ಹಬ್ಬದ ರೈಲುಗಳನ್ನು ಓಡಿಸಲು ರೈಲ್ವೆ ಘೋಷಿಸಿದೆ. ರೈಲ್ವೆ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ಸೆಂಟ್ರಲ್ ರೈಲ್ವೇ (CR) ನವೆಂಬರ್ 3, 2022ರವರೆಗೆ ಏಳು ಜೋಡಿ ವಿಶೇಷ ರೈಲುಗಳನ್ನು ಓಡಿಸಲು ಘೋಷಿಸಿದೆ. ಅದೇ ರೀತಿ, ಪೂರ್ವ ಮಧ್ಯ ರೈಲ್ವೆ, 9 ಜೋಡಿ ವಿಶೇಷ ರೈಲುಗಳು, ಪೂರ್ವ ಕರಾವಳಿ ರೈಲ್ವೆ (ECOR) 6 ಜೋಡಿ ವಿಶೇಷ ರೈಲುಗಳನ್ನು ಓಡಿಸಲು ಘೋಷಿಸಿದೆ.

Diwali Special: Two special trains between Uttar Pradesh and Coimbatore to clear festival rush

ಇದಲ್ಲದೆ, ಪೂರ್ವ ರೈಲ್ವೆಯು 14 ಜೋಡಿ ವಿಶೇಷ ರೈಲುಗಳನ್ನು, ಉತ್ತರ ರೈಲ್ವೆ 35 ಜೋಡಿ ವಿಶೇಷ ರೈಲುಗಳನ್ನು ಮತ್ತು ಉತ್ತರ ಮಧ್ಯ ರೈಲ್ವೆ (NCR) 8 ಜೋಡಿ ವಿಶೇಷ ರೈಲುಗಳನ್ನು ಓಡಿಸಲು ಘೋಷಿಸಿದೆ. ನೈಋತ್ಯ ರೈಲ್ವೆ 22, ಪಶ್ಚಿಮ ಕೇಂದ್ರ ರೈಲ್ವೆ (WCR) 6 ಜೋಡಿ ವಿಶೇಷ ರೈಲುಗಳು ಮತ್ತು ಪಶ್ಚಿಮ ರೈಲ್ವೆ (WR) 18 ಜೋಡಿ ವಿಶೇಷ ರೈಲುಗಳನ್ನು ಓಡಿಸಲು ಘೋಷಿಸಿವೆ. h

English summary
Diwali Special: Two special trains between Uttar Pradesh and Coimbatore to clear festival rush Here Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X