Diwali Bonus:ಟೀ ಎಸ್ಟೇಟ್ ಉದ್ಯೋಗಿಗಳಿಗೆ ರಾಯಲ್ ಎನ್‌ಫೀಲ್ಡ್ ಉಡುಗೊರೆ ನೀಡಿದ ಮಾಲೀಕ!
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋತಗಿರಿಯಲ್ಲಿ ಎಸ್ಟೇಟ್ ಮಾಲೀಕರೊಬ್ಬರು 15 ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ ಹೊಸ ಬುಲೆಟ್ ಬೈಕ್ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಬೋನಸ್, ಓಚರ್ ಅಥವಾ ಇನ್ನಿತರ ಉಡುಗೊರೆಗಳನ್ನು ನೀಡಿ ಸಿಹಿಗಳನ್ನು ಹಂಚಲಾಗುತ್ತದೆ. ಆದರೆ ಇಲ್ಲೊಬ್ಬ ಟೀ ಎಸ್ಟೇಟ್ ಮಾಲೀಕ ತನ್ನ ಉದ್ಯೋಗಿಗಳಿಗೆ ರಾಯಲ್ ಎನ್‌ಫೀಲ್ಡ್ ಉಡುಗೊರೆಯಾಗಿ ನೀಡಿದ್ದಾನೆ.

ಅದು ಒಂದಲ್ಲಾ ಎರಡಲ್ಲ ಬರೋಬ್ಬರಿ 15 ಉದ್ಯೋಗಿಗಳಿಗೆ ದುಬಾರಿ ಬೈಕ್ ಅನ್ನು ಬೋನಸ್ ಆಗಿ ನೀಡಿದ್ದಾನೆ. ಇದರಿಂದ ಖುಷಿಯಾದ ಉದ್ಯೋಗಿಗಳು ಮಾಲೀಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ತಿರುಪುರ್‌ನ ವಣಜಿಪಾಳಯಂ ಮೂಲದ ಪಿ ಶಿವಕುಮಾರ್ ಅವರು 190 ಎಕರೆ ಟೀ ಎಸ್ಟೇಟಿನ ಮಾಲಕರಾಗಿದ್ದಾರೆ ಜೊತೆಗೆ ಅವರು ತರಕಾರಿ ಮತ್ತು ಹೂವಿನ ತೋಟಗಳನ್ನೂ ಹೊಂದಿದ್ದಾರೆ. ಅವರ ಟೀ ಎಸ್ಟೇಟಿನ ಮಾಲಕರಾಗಿದ್ದಾರೆ. ಜೊತೆಗೆ ಅವರು ತರಕಾರಿ ಮತ್ತು ಹೂವಿನ ತೀಟಗಳನ್ನೂ ಹೊಂದಿದ್ದಾರೆ. ಅವರ ಟೀ ಎಸ್ಟೇಟಿನಲ್ಲಿ ಕಳೆದೆರೆಡು ದಶಕಗಳಿಂದ ಸುಮಾರು 627 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
VIDEO | With only 10 days left until Diwali, companies have initiated the tradition of offering bonuses to their employees. Many firms are providing incentives, sweets, fireworks, and clothing to their staff to celebrate the festive season.
— Press Trust of India (@PTI_News) November 2, 2023
However, a tea estate in Kotagiri… pic.twitter.com/J8uPGmczn9
ಶಿವಕುಮಾರ್ ತಮ್ಮ ಉದ್ಯೋಗಿಗಳಿಗೆ ಉಡುಗೊರೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಹಿಂದಿನ ವರ್ಷಗಳಲ್ಲಿ ದೀಪಾವಳಿ ಕೊಡುಗೆಯಾಗಿ ಅವರು ಗೃಹಬಳಕೆ ಉತ್ಪನ್ನಗಳು ಹಾಗೂ ನಗದು ಬೋನಸ್ ನೀಡುತ್ತಿದ್ದರೆ ಈ ಬಾರು ಎರಡು ಲಕ್ಷ ಅಧಿಕ ಮೌಲ್ಯದ ರಾಯಲ್ ಎನ್‌ಫೀಲ್ಡ್ ನೀಡಿದ್ದಾರೆ. ತಮ್ಮ ಮ್ಯಾನೇಜರ್, ಸುಪರ್‌ವೈಸರ್, ಸ್ಟೋರ್ ಕೀಪರ್, ಕ್ಯಾಶಿಯರ್, ಇತರ ಸಿಬ್ಬಂದಿ ಮತ್ತು ಚಾಲಕರಿಗೆ ಬೈಕ್ ನೀಡಿದ್ದಾರೆ. ಇತರ ಕೆಲ ಉದ್ಯೋಗಿಗಳಿಗೆ ಎಲ್‌ಸಿಡಿ ಟಿವಿ ನೀಡಿ ಶೀ.18 ಬೋನಸ್ ನೀಡಿದ್ದಾರೆ.
ನಂತರ ಬೈಕ್‌ಗಳನ್ನು ಕೀಗಳನ್ನು ಪಡೆದ ನೌಕರರು ಜಾಲಿರೈಡ್‌ಗೆ ತೆರಳುತ್ತಾರೆ. ಅವರಿಗೆ 42 ವರ್ಷದ ಎಸ್ಟೇಟ್ ಮಾಲೀಕರು ಸಹ ಸಾಥ್ ನೀಡಿದ್ದಾರೆ. ಉದ್ಯೋಗದಾತರು ನೀಡಿರುವ ಅನಿರೀಕ್ಷಿತ ಉಡುಗೊರೆಯಿಂದ ಹರ್ಷಗೊಂಡ ನೌಕರರು ದೀಪಾವಳಿಯನ್ನು ತಮಗೆ ಸ್ಮರಣೀಯವಾಗಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇತ್ತೀಚೆಗೆ ಹರಿಯಾಣದ ಪಂಚಕುಲದ ಫಾರ್ಮಾ ಕಂಪನಿ ಮಾಲೀಕರು ದೀಪಾವಳಿ ಉಡುಗೊರೆಯಾಗಿ ಹೊಚ್ಚ ಹೊಸ ಕಾರುಗಳನ್ನು ನೀಡುವ ಮೂಲಕ ತಮ್ಮ ಉದ್ಯೋಗಿಗಳಿಗೆ ಅಚ್ಚರಿ ಮೂಡಿಸಿದ್ದರು. ಮಿಟ್ಸ್‌ಕಾರ್ಟ್ ಅಧ್ಯಕ್ಷ ಎಂಕೆ ಭಾಟಿಯಾ ಅವರು ಕಚೇರಿ ಸಹಾಯಕ ಸೇರಿದಂತೆ 12 ಉದ್ಯೋಗಿಗಳಿಗೆ ಹೊಚ್ಚಹೊಸ ಟಾಟಾ ಪಂಚ್ ಕಾರುಗಳ ಕೀಗಳನ್ನು ನೀಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು.
ಮಾಧ್ಯಮಗಳೊಂದಿಗೆ ಮಾತನಾಡಿದ ಭಾಟಿಯಾ, ತಮ್ಮ ತಂಡದ ಅಚಲ ಬದ್ಧತೆ ಮತ್ತು ಶ್ರದ್ಧೆಯ ಪ್ರಯತ್ನಗಳಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮಾತ್ರವಲ್ಲದೆ ಅವರು ಮುಂಬರುವ ಋತುವಿನಲ್ಲಿ ಅವರಿಗೆ ವಿಶೇಷ ಉಡುಗೊರೆಯನ್ನು ನೀಡುವ ನಿರ್ಧಾರವನ್ನು ಅವರು ಪ್ರಕಟಿಸಿದರು. ಭಾಟಿಯಾ ಅವರು ಹಲವಾರು ವರ್ಷಗಳ ಹಿಂದೆ ಕಂಪನಿಯನ್ನು ಪ್ರಾರಂಭಿಸಿದರು, ಮತ್ತು ಈ ಸಮರ್ಪಿತ ಉದ್ಯೋಗಿಗಳು ಅಂದಿನಿಂದ ಅವರ ಪಕ್ಕದಲ್ಲಿಯೇ ಉಳಿದಿದ್ದಾರೆ.
-
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications