ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಿಯವಾಗಿ 5ಜಿ ತಂತ್ರಜ್ಞಾನ ವಿತರಣೆ; ಮೊದಲ ದೇಶವಾಗಲಿದೆ ಭಾರತ

|
Google Oneindia Kannada News

ನವದೆಹಲಿ, ಆಗಸ್ಟ್‌. 3: "ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾದ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದ್ದು, ಭಾರತವು ಈಗ ದೇಶೀಯ 5ಜಿ ತಂತ್ರಜ್ಞಾನವನ್ನು ಒದಗಿಸುವ ಮೊದಲ ದೇಶಗಳಲ್ಲಿ ಒಂದಾಗಿದೆ" ಎಂದು ಮಾಹಿತಿ ತಂತ್ರಜ್ಞಾನ ಖಾತೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

"ದೇಶೀಯ 5ಜಿ ತಂತ್ರಜ್ಞಾನವನ್ನು ಒದಗಿಸುವ ಮೊದಲ ದೇಶ ಭಾರತವಾಗಲಿದ್ದು, ಇದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಭಾರತದಲ್ಲಿ ವಿನ್ಯಾಸಗೊಳಿಸಲಾದ ಮತ್ತು ನಿರ್ಮಿಸಲಾದ 5ಜಿ ಪೀಳಿಗೆಯಲ್ಲಿ ಭಾರತವು ಮುಂದೆ ಸಾಗಲಿದೆ" ಎಂದರು.

ಅಕ್ಟೋಬರ್‌ನಿಂದಲೇ ಭಾರತದಲ್ಲಿ 5ಜಿ; ಇಲ್ಲಿದೆ ಬಿಡ್ಡಿಂಗ್ ವಿವರಅಕ್ಟೋಬರ್‌ನಿಂದಲೇ ಭಾರತದಲ್ಲಿ 5ಜಿ; ಇಲ್ಲಿದೆ ಬಿಡ್ಡಿಂಗ್ ವಿವರ

"ನಾವು ಈಗ 5ಜಿಗಾಗಿ ಬಳಸುತ್ತಿರುವ ಉಪಕರಣಗಳನ್ನು ಹಿಂದೆಂದೂ ಬಳಸಿಲ್ಲ. ದೇಶದಲ್ಲಿ 2ಜಿ, 3ಜಿ, ಮತ್ತು 4ಜಿ ನೆಟ್‌ವರ್ಕ್ ಯಾವಾಗಲೂ ಹೊರಗಿನಿಂದ ಆಮದು ಮಾಡಿಕೊಳ್ಳುತ್ತಿತ್ತು. ಇಂದು ಪ್ರಧಾನಿಯವರ ನಾಯಕತ್ವದಿಂದಾಗಿ ನಾವು ಸರ್ಕಾರದಿಂದ 1.5 ಲಕ್ಷ ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದೇವೆ. ಸ್ಪೆಕ್ಟ್ರಮ್‌ನ ಇತ್ತೀಚಿನ ಪೀಳಿಗೆಯ 5ಜಿ ನೆಟ್‌ವರ್ಕ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಿದ ಉಪಕರಣಗಳೊಂದಿಗೆ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವುದು ಭಾರತಕ್ಕೆ ಇದು ಪ್ರಮುಖ ಮೈಲಿಗಲ್ಲು" ಎಂದು ಸಚಿವರು ವಿವರಿಸಿದರು.

ಜಿಯೋ, ಏರ್‌ಟೆಲ್‌ನಿಂದಲೂ 5ಜಿ ನೆಟ್‌ವರ್ಕ್‌

ಜಿಯೋ, ಏರ್‌ಟೆಲ್‌ನಿಂದಲೂ 5ಜಿ ನೆಟ್‌ವರ್ಕ್‌

"ನಾವು 5ಜಿ ನೆಟ್‌ವರ್ಕ್‌ ಹೊಂದುವುದು ಬಹಳ ಮುಖ್ಯ. ಕಳೆದ ವಾರದಿಂದಲೇ ದೇಶದಲ್ಲಿ 5ಜಿ ಸ್ಪೆಕ್ಟ್ರಮ್‌ನ ಹರಾಜು ನಡೆಯುತ್ತಿದೆ. ಸ್ಪೆಕ್ಟ್ರಮ್‌ನಲ್ಲಿ ಆಯ್ಕೆಗಳಿವೆ. ಇನ್ನೊಂದು ಪ್ರಮುಖ ಮೈಲಿಗಲ್ಲು ಎಂದರೆ ನಾವು ಜಿಯೋ, ಏರ್‌ಟೆಲ್ ಮತ್ತು ಇತರ ಕಂಪನಿಗಳಿಂದಲೂ ಭಾರತದಲ್ಲಿ ಐದನೇ ತಲೆಮಾರಿನ ವೈರ್‌ಲೆಸ್ ತಂತ್ರಜ್ಞಾನವಾದ 5ಜಿ ತಂತ್ರಜ್ಞಾನವನ್ನು ಕಾರ್ಯಗತಗೊಳಿಸುತ್ತೇವೆ. ಇದು ಜನರಿಗೆ ಹೊಸ ಇಂಟರ್ನೆಟ್ ಸೇವೆಯನ್ನು ನೀಡುತ್ತದೆ" ಎಂದು ಸಚಿವರು ಹೇಳಿದರು.

5G : ಸ್ಪೆಕ್ಟ್ರಂ ಎಂದರೇನು? 5ಜಿ ವಿಶೇಷತೆ ಏನು?5G : ಸ್ಪೆಕ್ಟ್ರಂ ಎಂದರೇನು? 5ಜಿ ವಿಶೇಷತೆ ಏನು?

5ಜಿ ನೆಟ್‌ವರ್ಕ್ ನನಗೆ ಗೊತ್ತಿರಲಿಲ್ಲ

5ಜಿ ನೆಟ್‌ವರ್ಕ್ ನನಗೆ ಗೊತ್ತಿರಲಿಲ್ಲ

"2015ರಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾವನ್ನು ಪ್ರಾರಂಭಿಸಿದಾಗ, ನಾನು ಸಹ ಪ್ರೇಕ್ಷಕರಲ್ಲಿ ಒಬ್ಬನಾಗಿದ್ದೆ. ನಾನು ಅವರ ಮಾತುಗಳನ್ನು ಕೇಳಿ ನಮ್ಮ ದೇಶವು ಇಷ್ಟು ಮಟ್ಟಿಗೆ ಪ್ರಗತಿಯಾಗುತ್ತದೆ ಹಾಗೂ 5- 6 ವರ್ಷಗಳಲ್ಲಿ ನಾವು ನಮ್ಮ ದೇಶದಲ್ಲಿ ವಿನ್ಯಾಸಗೊಳಿಸಲಾದ 5ಜಿ ನೆಟ್‌ವರ್ಕ್ ಅನ್ನು ಬಳಸುವ ಸ್ಥಾನವನ್ನು ತಲುಪುತ್ತೇವೆ ಎಂಬುದು ನನಗೆ ಗೊತ್ತಿರಲಿಲ್ಲ" ಎಂದರು.

88,078 ಕೋಟಿ ರೂ. ಮೊತ್ತಕ್ಕೆ ಖರೀದಿ

88,078 ಕೋಟಿ ರೂ. ಮೊತ್ತಕ್ಕೆ ಖರೀದಿ

ಜಿಯೋದ 4ಜಿ ನೆಟ್‌ವರ್ಕ್‌ನ ವೇಗ, ಪ್ರಮಾಣ ಮತ್ತು ಸಾಮಾಜಿಕ ಪರಿಣಾಮವು ಜಗತ್ತಿನಲ್ಲಿ ಸಾಟಿಯಿಲ್ಲದ್ದಾಗಿದೆ. ಈಗ ಜಿಯೋ ಭಾರತದಲ್ಲಿ 5ಜಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕತ್ವದ ಪಾತ್ರವನ್ನು ವಹಿಸಲು ಸಿದ್ಧವಾಗಿದೆ. ಇದನ್ನು ಈಗಾಗಲೇ ಜಿಯೋ ಘೋಷಿಸಿದೆ. ರಿಲಯನ್ಸ್ ಜಿಯೋ 5ಜಿ ಸ್ಪೆಕ್ಟ್ರಮ್‌ನ ಪಾಲನ್ನು ಅತಿದೊಡ್ಡ ಮೊತ್ತ 88,078 ಕೋಟಿ ರೂ.ಗೆ ಖರೀದಿಸಿದೆ. ಒಟ್ಟು ಸ್ಪೆಕ್ಟ್ರಮ್ ಹರಾಜಿನಲ್ಲಿ ಜಿಯೋದ ಪಾಲು ಶೇಕಡಾ 50ಕ್ಕಿಂತ ಹೆಚ್ಚು ಇದೆ. ಹರಾಜು ಪ್ರಕ್ರಿಯೆಯು ಪೂರ್ಣಗೊಂಡ ನಂತರ ಕಂಪನಿಯು ಶೀಘ್ರದಲ್ಲೇ 5ಜಿ ನೆಟ್‌ವರ್ಕ್ ಅನ್ನು ಒದಗಿಸಲಿದೆ ಎಂದು ಜಿಯೋ ಹೇಳಿದೆ. ಇದು ಸಂಪೂರ್ಣವಾಗಿ ಭಾರತದ 5ಜಿ ನೆಟ್‌ವರ್ಕ್ ಆಗಿರುತ್ತದೆ.

ಸಾರ್ವಜನಿಕ ನೆಟ್‌ವರ್ಕ್‌ ಸ್ಥಾಪಿಸಲು ಬಳಕೆಯಾಗಲ್ಲ

ಸಾರ್ವಜನಿಕ ನೆಟ್‌ವರ್ಕ್‌ ಸ್ಥಾಪಿಸಲು ಬಳಕೆಯಾಗಲ್ಲ

ದೇಶದ ಶ್ರೀಮಂತ್ರ ಉದ್ಯಮಿ ಗೌತಮ್‌ ಅದಾನಿ ಮಾಲೀಕತ್ವದ ಕಂಪನಿಯು ಒಟ್ಟು 212 ಕೋಟಿ ಮೌಲ್ಯದ ತರಂಗಾಂತರಗಳಿಗೆ ಬಿಡ್‌ ಸಲ್ಲಸಿದೆ. ಅದಾನಿ ಅವರ ಕಂಪನಿಯು ಪಡೆಯಲಿರುವ ತರಂಗಾಂತರಗಳು ಸಾರ್ವಜನಿಕ ನೆಟ್‌ವರ್ಕ್‌ ಸ್ಥಾಪಿಸಲು ಬಳಕೆಯಾಗುವುದಿಲ್ಲ ಎನ್ನಲಾಗಿದೆ. ಸುನೀಲ್‌ ಭಾರ್ತಿ ಮಿತ್ತಲ್‌ ಮಾಲೀಕತ್ವದ ಭಾರ್ತಿ ಏರ್‌ಟೆಲ್‌ ಕಂಪೆನಿಯು ಒಟ್ಟು 43,084 ಕೋಟಿ ಮೌಲ್ಯದ ಬಿಡ್‌ ಸಲ್ಲಿಸಿದೆ. ವೋಡಫೋನ್‌ ಐಡಿಯಾ ಕಂಪನಿಯು 18,799 ಕೋಟಿ ಮೌಲ್ಯದ ಬಿಡ್‌ ಸಲ್ಲಿಸಿದೆ.

Recommended Video

ಸಿದ್ದರಾಮೋತ್ಸವ: ಇದು ಸಿದ್ದು ಪಕ್ಷಾನಾ? Or ಕಾಂಗ್ರೆಸ್ ಪಕ್ಷಾನಾ? | Oneindia Kannada

English summary
Prime Minister Narendra Modi has boosted his confidence in Digital India and India is now one of the first countries to provide domestic 5G technology, Union Minister for Information Technology Rajiv Chandrasekhar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X