ಬಿಜೆಪಿ VS ಕಾಂಗ್ರೆಸ್: ಬ್ರೇಕಿಂಗ್ ನ್ಯೂಸ್.. ದಿಢೀರ್ ಈ ರಾಜ್ಯದಲ್ಲಿ ಚುನಾವಣೆ ಫಲಿತಾಂಶದ ದಿನ ಮುಂದೂಡಿಕೆ!
ಪಂಚರಾಜ್ಯ ಚುನಾವಣೆ ಮುಕ್ತಾಯವಾಗಿದ್ದು, ಇದೇ ಭಾನುವಾರ ಅಂದರೆ ಡಿಸೆಂಬರ್ 3ಕ್ಕೆ ಮೋಸ್ಟ್ ವೆಯ್ಟೆಡ್ ರಿಸಲ್ಟ್ ರಿವೀಲ್ ಆಗಲಿದೆ. ಬಿಜೆಪಿ & ಕಾಂಗ್ರೆಸ್ ಮಧ್ಯೆ ರಣರಂಗ ರಂಗು ರಂಗಾಗಿದೆ. ಇದೇ ಸಮಯದಲ್ಲಿ ದಿಢೀರ್ ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದ್ದು, ಈ ರಣಕಾಳಗದ ಚುನಾವಣಾ ಫಲಿತಾಂಶದ ದಿನ ಇದ್ದಕ್ಕಿದ್ದಂತೆ ಮುಂದೂಡಿಕೆಯಾಗಿದೆ. ಅದು ಯಾಕೆ ಗೊತ್ತಾ?
ಹೌದು, ಲೋಕಸಭೆ ಚುನಾವಣೆ ಹಣೆಬರಹ ನಿರ್ಧರಿಸಲು ಪಂಚರಾಜ್ಯ ಫಲಿತಾಂಶಕ್ಕೆ ಈಗ ಕೌಂಟ್‌ಡೌನ್ ಶುರುವಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಬಿಜೆಪಿ VS ಕಾಂಗ್ರೆಸ್ ಮಧ್ಯೆ ಅಖಾಡ ರಂಗೇರಿದೆ. ಡಿಸೆಂಬರ್ 3ರ ಭಾನುವಾರ, ಅಂತಿಮ ಫಲಿತಾಂಶ ಸಿಗಲಿದೆ. ಇದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಅದೊಂದು ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ದಿಢೀರ್ ಚುನಾವಣಾ ಫಲಿತಾಂಶದ ದಿನವೇ ಮುಂದೂಡಿಕೆ ಆಗಿದೆ.

ಫಲಿತಾಂಶದ ದಿನದಲ್ಲಿ ಅಲ್ಲೋಲ ಕಲ್ಲೋಲ!
ಅಷ್ಟಕ್ಕೂ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಸೇರಿದಂತೆ ಮಿಜೋರಾಂ ರಾಜ್ಯಗಳಿಗೆ ಇತ್ತೀಚೆಗೆ ಮತದಾನ ನಡೆದಿತ್ತು. ಈ ಪೈಕಿ 5 ರಾಜ್ಯದ ಫಲಿತಾಂಶ ಭಾನುವಾರ ಹೊರಬೀಳಬೇಕಿತ್ತು. ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ಸಮದಯಲ್ಲೇ ದಿಢೀರ್ ಮಿಜೋರಾಂ ರಾಜ್ಯದ ಚುನಾವಣೆ ಫಲಿತಾಂಶದ ದಿನ ಮುಂದೂಡಿಕೆ ಆಗಿದೆ. ಒಂದು ದಿನ ಅಂದರೆ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನಾಂಕವನ್ನು, ಡಿಸೆಂಬರ್ 3ರ ಭಾನುವಾರದ ಬದಲಾಗಿ ಡಿಸೆಂಬರ್ 4ಕ್ಕೆ ಮುಂದೂಡಲಾಗಿದೆ. ಹಾಗಾದ್ರೆ ಈ ನಿರ್ಧಾರ ಯಾಕೆ?
ಕ್ರಿಶ್ಚಿಯನ್ ಸಮುದಾಯಕ್ಕೆ ಬಹುಮುಖ್ಯ ದಿನ
ಅಂದಹಾಗೆ ಮಿಜೋರಾಂ ರಾಜ್ಯದಲ್ಲಿ ಅತಿಹೆಚ್ಚಾಗಿ ಕ್ರಿಶ್ಚಿಯನ್ ಸಮುದಾಯದ ಜನ ವಾಸ ಇದ್ದಾರೆ. ಹೀಗಾಗಿ ಅಲ್ಲಿ ಕ್ರಿಶ್ಚಿಯನ್ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದ್ರೆ ಡಿಸೆಂಬರ್ 3ರ ಭಾನುವಾರ ಮಿಜೋರಾಂನ ಕ್ರಿಶ್ಚಿಯನ್ ಸಮುದಾಯಕ್ಕೆ ಬಹುಮುಖ್ಯ ದಿನ ಎನ್ನಲಾಗಿದೆ. ಹೀಗಾಗಿಯೇ ಸಾಕಷ್ಟು ಮನವಿ ಪತ್ರ ಸಲ್ಲಿಸಲಾಗಿತ್ತು. ಮತ ಎಣಿಕೆ ಅಂದರೆ ಫಲಿತಾಂಶದ ದಿನ ಮುಂದೂಡಲು ಹಲವು ಸಂಘಟನೆಗಳು ಮನವಿ ಮಾಡಿದ್ದವು. ಹೀಗಾಗಿ ಈಗ ಚುನಾವಣಾ ಫಲಿತಾಂಶದ ದಿನವನ್ನ ಮುದೂಡಲಾಗಿದೆ ಅಂತಾ ಹೇಳಲಾಗುತ್ತಿದೆ.

ಯಾವ ಪಕ್ಷಕ್ಕೆ ಮಿಜೋರಾಂ ಅಧಿಕಾರ?
ಪೂರ್ವ ಭಾರತದಲ್ಲಿ ಮ್ಯಾನ್ಮಾರ್ ಗಡಿಯಲ್ಲಿ ಹರಡಿರುವ, ಈಶಾನ್ಯ ಭಾರತದ ಪುಟಾಣಿ ರಾಜ್ಯ ಮಿಜೋರಾಂ ಅಧಿಕಾರ ರಾಷ್ಟ್ರೀಯ ಪಕ್ಷಗಳಿಗೆ ಪ್ರಮುಖ ಅಂತಾ ಏನಿಲ್ಲ. ಆದರೂ ಇಲ್ಲಿ ಗೆದ್ದೇ ಗೆಲ್ಲಬೇಕು ಅಂತಾ ಬಿಜೆಪಿ & ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ರು. ಹೀಗಾಗಿಯೇ ಸಿಕ್ಕಾಪಟ್ಟೆ ಫೈಟ್ ಇತ್ತು. ನವೆಂಬರ್ 7ರಂದು ಮತ ಹಾಕಿದ್ದರು ಮತದಾರರು ಹೀಗಾಗಿ ಭಾರಿ ಕುತೂಹಲ ಕೆರಳಿಸಿತ್ತು ಮಿಜೋರಾಂ ಚುನಾವಣೆ. ಆದ್ರೆ ದಿಢೀರ್ ಫಲಿತಾಂಶದ ದಿನವೇ ಮುಂದೂಡಿಕೆ ಆಗಿದೆ.
ವಿಧಾನಸಭೆಗೆ ಅತಂತ್ರ ಫಲಿತಾಂಶ?
ಮಿಜೋರಾಂನ ರಾಜಕಾರಣದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (MNF) & ಜೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ಸ್ಥಳೀಯ ಪ್ರಬಲ ಪಕ್ಷಗಳು. ಪ್ರತಿ ಬಾರಿಯು ಇಲ್ಲಿ ಎಲೆಕ್ಷನ್ ನಡೆದಾಗ ಈ 2 ಪಕ್ಷಗಳೇ ಶಕ್ತಿ ತೋರಿಸಿವೆ. ಈ ಬಾರಿ ಕೂಡ, ಮಿಜೋರಾಂ ರಾಜಕಾರಣದಲ್ಲಿ ಸ್ಥಳೀಯ ಪಕ್ಷ ಆರ್ಭಟ ತೋರಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಆಗಿದ್ದು ಏನು ಗೊತ್ತಾ? ಚುನಾವಣೆ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದು ಏನು?
ಯಾರಿಗೂ ಸಿಗುವುದಿಲ್ಲ ಬಹುಮತ?
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಮಿಜೋರಾಂ ಚುನಾವಣೆಯಲ್ಲಿ ಜೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಪ್ರಮುಖ ಪಾತ್ರ ವಹಿಸಲಿದೆಯಂತೆ. 'ಜನ್ ಕಿ ಬಾತ್' ಮತದಾನೋತ್ತರ ಸಮೀಕ್ಷೆ ಪ್ರಕಾರ, ಜೋರಾಂ ಪೀಪಲ್ಸ್ ಮೂವ್ಮೆಂಟ್ ಪಕ್ಷ 15 ರಿಂದ 25 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಮಿಜೋ ನ್ಯಾಷನಲ್ ಫ್ರಂಟ್ (MNF) 10ರಿಂದ 14 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮಿಜೋರಾಂ ಅಖಾಡದಲ್ಲಿ 05 ರಿಂದ 09 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಬಿಜೆಪಿ 00 ರಿಂದ 02 ಸ್ಥಾನ ಪಡೆಯಬಹುದು ಅಂತಿದೆ 'ಜನ್ ಕಿ ಬಾತ್' ಮತದಾನೋತ್ತರ ಸಮೀಕ್ಷೆ ವರದಿ. ಹೀಗಾಗಿ ಎಲ್ಲ ಪ್ರಶ್ನೆಗಳಿಗೆ ಡಿಸೆಂಬರ್ 4ರಂದು ಉತ್ತರ ಸಿಗಲಿದೆ.












Click it and Unblock the Notifications