Cauvery Dispute: ಕಾವೇರಿ ನೀರಿಗಾಗಿ ಹೋರಾಟ, 40 ಸಾವಿರ ಅಂಗಡಿ ಬಂದ್!
ಕಾವೇರಿ ಕಾವು ಇನ್ನೂ ತಣ್ಣಗಾಗಿಲ್ಲ ಅತ್ತ ಮತ್ತಷ್ಟು ನೀರು ಬೇಕು ಅಂತಾ ತಮಿಳುನಾಡು ಸರ್ಕಾರ ಕಿರಿಕ್ ಮಾಡುತ್ತಿದೆ. ಮತ್ತೊಂದ್ಕಡೆ ನೀರು ಬಿಡಲು ಆಗಲ್ಲ ಎಂಬ ಗಟ್ಟಿ ನಿಲುವು ತೆಗೆದುಕೊಂಡಿದೆ ಕರ್ನಾಟಕ ಸರ್ಕಾರ. ಹೀಗೆ ಎರಡೂ ರಾಜ್ಯಗಳ ನಡುವೆ ಕಾವೇರಿ ಕದನ ಜೋರಾಗಿರುವ ಸಮಯಕ್ಕೆ ಮತ್ತೊಮ್ಮೆ ಬಂದ್ ಮಾಡಲಾಗಿದೆ, 40 ಸಾವಿರ ಅಂಗಡಿಗಳು ಒಂದೇ ಜಿಲ್ಲೆಯಲ್ಲಿ ಬಾಗಿಲು ಹಾಕಿವೆ.
ಹೌದು, ಕಾವೇರಿ ನೀರಿನ ಹೋರಾಟ ಶುರುವಾದರೆ ದೊಡ್ಡ ದೊಡ್ಡ ಗಲಾಟೆಯೇ ನಡೆದು ಹೋಗುತ್ತದೆ. ಅದರಲ್ಲೂ ಕರ್ನಾಟಕದಲ್ಲಿ ಕನ್ನಡಿಗರು ಈಗಾಗಲೇ ಇದೇ ವರ್ಷ 2 ಬಾರಿ ಕಾವೇರಿ ನೀರಿಗಾಗಿ ಬಂದ್ ಬಿಸಿ ಎದುರಿಸಿದ್ದಾರೆ. ಇದೇ ಸಮಯದಲ್ಲಿ ಮತ್ತೊಮ್ಮೆ ಬಂದ್ ಎದುರಾಗಿದೆ. ಆದರೆ ಅದು ಕರ್ನಾಟಕದಲ್ಲಿ ಅಲ್ಲ, ಬದಲಾಗಿ ನೆರೆ ರಾಜ್ಯ ತಮಿಳುನಾಡಿನ ನೆಲದಲ್ಲಿ. ಕರ್ನಾಟಕ ಕಾವೇರಿ ನೀರು ಸರಿಯಾಗಿ ಬಿಡುತ್ತಿಲ್ಲ ಎಂದು ಆರೋಪಿಸಿ ನೆರೆಯ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಹಾಗಾದ್ರೆ ಹೇಗಿದೆ ತಮಿಳುನಾಡು ಕಾವೇರಿ ಹೋರಾಟ?

40 ಸಾವಿರ ಅಂಗಡಿ ಬಂದ್!
ಅಂದಹಾಗೆ ವಿವಿಧ ರೈತಪರ ಸಂಘಟನೆಗಳು ಮತ್ತು ಡಿಎಂಕೆ ರೈತ ಘಟಕ ಸದಸ್ಯರು ಸೇರಿ ಕಾವೇರಿಗಾಗಿ ತಮಿಳುನಾಡು ಬಂದ್ ನಡೆಸಿದ್ದಾರೆ. ಅದ್ರಲ್ಲೂ ಕಾವೇರಿ ಹರಿಯುವ ಜಿಲ್ಲೆಗಳ ವ್ಯಾಪಾರಸ್ಥರು ಇಂದು ಸಂಪೂರ್ಣ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಈ ಪೈಕಿ ತಿರುಚ್ಚಿ, ತಂಜಾವೂರ್, ನಾಗಾಪಟ್ಟಿಣಂ ಸೇರಿದಂತೆ ಜೀವನದಿ ಕಾವೇರಿ ಹರಿಯುವ ಪ್ರತಿ ಜಿಲ್ಲೆಯಲ್ಲೂ ಹೋರಾಟ ಜೋರಾಗಿದೆ. ಹೋರಾಟದಲ್ಲಿ ರೈತರು ಕೇಂದ್ರದ ಮಧ್ಯಪ್ರವೇಶ & ಕಾವೇರಿ ಸಮಸ್ಯೆ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
VIDEO | More than 40,000 shops are closed in Tamil Nadu's Thanjavur district today as a sign of protest over Cauvery water dispute today. The full blockade protest is being held on behalf of the Cauvery Basin Protection Coalition against the Karnataka government for refusing to… pic.twitter.com/9o9EFbBFwi
— Press Trust of India (@PTI_News) October 11, 2023
ಕರ್ನಾಟಕ ಸರ್ಕಾರದ ವಿರುದ್ಧವೂ ಆಕ್ರೋಶ
ಅಷ್ಟಕ್ಕೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ & ಸುಪ್ರೀಂ ಆದೇಶ ನಂತರವೂ ಕರ್ನಾಟಕ ಕಾವೇರಿ ನೀರು ಬಿಡ್ತಿಲ್ಲ ಎಂದು ತಮಿಳುನಾಡು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಿಜೆಪಿ ಮತ್ತು ಮೈತ್ರಿ ಪಕ್ಷಗಳು ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಚಾರ ಪ್ರಸ್ತಾಪಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ತಮಿಳುನಾಡು ಕೂಡ ಈ ಬಾರಿ ಬರದ ಬೇಗೆಯಲ್ಲಿ ನರಳಾಡುವ ಸ್ಥಿತಿ ಇದ್ದು ಮಳೆ ಕೊರತೆ ಕಾರಣ ತಮಿಳುನಾಡು ಡ್ಯಾಂಗಳು ಒಣಗಿವೆ. ಅದ್ರಲ್ಲೂ ನೆರೆ ರಾಜ್ಯದ ಜೀವನಾಡಿ ಮೆಟ್ಟೂರು ಡ್ಯಾಂ ಭಾಗಶಃ ಖಾಲಿಯಾಗಿ ಹೋಗಿದೆ. ಈ ಕಾರಣಕ್ಕೆ ಕುಡಿವ ನೀರಿಗೂ ಸಮಸ್ಯೆ ಎದುರಾಗುವ ಆತಂಕ ಆವರಿಸಿದೆ.

ಕಾವೇರಿ ನೀರು ಅವಲಂಬಿಸಿದೆ ತಮಿಳುನಾಡು
ಇಷ್ಟೆಲ್ಲದರ ನಡುವೆ ಮತ್ತೊಂದು ಆತಂಕದ ಸಂಗತಿ ಏನೆಂದರೆ ತಮಿಳುನಾಡಿನ ಸುಮಾರು 24 ಜಿಲ್ಲೆಗಳು ಅವಲಂಬಿಸಿರುವುದು ಕಾವಾರಿ ನೀರನ್ನು. ಹೀಗಾಗಿ ಕಾವೇರಿ ನೀರು ಇಲ್ಲದೆ ನೆರೆ ರಾಜ್ಯಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ. ಈಗ ಮೆಟ್ಟೂರು ಜಲಾಶಯ ನೀರಿನ ಮಟ್ಟ 30.89 ಅಡಿಗೆ ಕುಸಿದಿದೆ. ಮೆಟ್ಟೂರು ಡ್ಯಾಂ ಗರಿಷ್ಠ ಮಟ್ಟ 120 ಅಡಿ ಆಗಿದ್ರೂ, ಈಗ ಕನಿಷ್ಠ ಹಂತ ತಲುಪಿದೆ. 500 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದ್ದು, ಕೇವಲ 435 ಕ್ಯುಸೆಕ್ ಒಳಹರಿವು ಮೆಟ್ಟೂರು ಡ್ಯಾಂನಲ್ಲಿ ದಾಖಲಾಗಿದೆ.
ಒಟ್ನಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಕಾವೇರಿ ನೀರಿನ ಕಿರಿಕ್‌ಗೆ ಒಂದು ಅಂತ್ಯವನ್ನ ಕಾಣಿಸಬೇಕಿದೆ. ಎರಡೂ ರಾಜ್ಯಗಳು ಸೂಕ್ತವಾಗಿ ನೀರಿನ ಬಳಕೆ ಬಗ್ಗೆ ಒಪ್ಪಂದಕ್ಕೆ ಬಂದು, ಕಿತ್ತಾಟ ನಿಲ್ಲಿಸಬೇಕು ಎಂಬ ಆಗ್ರಹ ಜನರದ್ದು. ಹಾಗೇ ತಜ್ಞರು ಕೂಡ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಕೆಲವು ಸಲಹೆ ನೀಡಿದ್ದಾರೆ. ಈ ಪೈಕಿ ಮೇಕೆದಾಟು ಡ್ಯಾಂ ಕೂಡ ಒಂದು ಪರಿಹಾರವಾಗಿದ್ದು, ಈ ವಿಚಾರದಲ್ಲೂ ತಮಿಳುನಾಡು ತನ್ನ ಕಿರಿಕ್ ಮುಂದುವರಿಸಿದೆ. ಹೀಗಾಗಿ ಭವಿಷ್ಯದಲ್ಲಿ ಈ ವಿವಾದ ಎಲ್ಲಿಗೆ ಬಂದು ನಿಲ್ಲುತ್ತೋ ಕಾದು ನೋಡಬೇಕಿದೆ.












Click it and Unblock the Notifications