ಅಬ್ಬಬ್ಬಾ.. ಈ ರಾಜ್ಯದ ಚುನಾವಣಾ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ನೋಡಿ ಹೇಗಿದೆ!
ಕರ್ನಾಟಕದಲ್ಲಿ ಚುನಾವಣೆ ನಡೆದರೆ ಕ್ರಿಮಿನಲ್ ಹಿನ್ನೆಲೆ ಅಥವಾ ಕ್ರಿಮಿನಲ್ ಕೇಸ್‌ಗಳನ್ನು ಎದುರಿಸುತ್ತಿರುವ ಎಷ್ಟು ಅಭ್ಯರ್ಥಿಗಳು ಸಿಗುತ್ತಾರೆ ಹೇಳಿ? ಅಲ್ಲೋ ಇಲ್ಲೋ ಒಬ್ರು, ಇಲ್ಲ ಇಬ್ಬರ ಬಗ್ಗೆ ಇಂತಹ ಆರೋಪ ಕೇಳಿಬರಬಹುದು. ಆದರೆ ಇಲ್ಲೊಂದು ರಾಜ್ಯವಿದೆ, ಇದೇ ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಆದ್ರೆ ಈ ರಾಜ್ಯದಲ್ಲಿ ಚುನಾವಣೆ ಅಖಾಡಕ್ಕೆ ಪ್ರವೇಶ ಮಾಡಿದ ಎಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಇರಬಹುದು ಹೇಳಿ? ಈ ಸ್ಟೋರಿ ಓದಿದರೆ ನಿಮಗೆ ಗೊತ್ತಾಗುತ್ತೆ!
ಹೌದು, ಕನ್ನಡಿಗರು ಶಿಕ್ಷಿತರು ಹಾಗೂ ಇಡೀ ದೇಶಕ್ಕೆ ತಮ್ಮ ಜ್ಞಾನದಿಂದ ಮಾದರಿಯಾಗಿ ಬೆಳೆದವರು. ಹೀಗಾಗಿ ಕರ್ನಾಟಕದಲ್ಲಿ ಚುನಾವಣೆ ನಡೆದರೆ ಬೇರೆ ರಾಜ್ಯಗಳ ರೀತಿ ರಕ್ತವೇ ಮೇಳೈಸುವುದಿಲ್ಲ. ಹಾಗೇ ರಕ್ತದ ರಾಜಕೀಯ ಮಾಡುವವನು ಯಾರೇ ಆಗಿದ್ದರೂ, ನಮ್ಮ ಕನ್ನಡಿಗರು ಮನೆಗೆ ಕಳಿಸುವುದು ಗ್ಯಾರಂಟಿ. ಹೀಗೆ ರಕ್ತ ರಾಜಕೀಯ ಮಾಡಲು ಬಂದಿದ್ದ, ಅದೆಷ್ಟೋ ಜನರು ಅಡ್ರೆಸ್ ಇಲ್ಲದಂತೆ ಹೋಗಿದ್ದಾರೆ. ಆದರೆ ಇಲ್ಲೊಂದು ರಾಜ್ಯವಿದೆ. ಈ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ ಮುಕ್ಕಾಲು ಭಾಗ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಇರುವವರು ಎಂಬ ಆರೋಪ ಕೇಳಿಬಂದಿದೆ.

ಎಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್?
ನಕ್ಸಲ್ ಪೀಡಿತ ಎಂಬ ಹಣೆಪಟ್ಟಿ ಕಟ್ಟಿಕೊಂಡ ಛತ್ತೀಸ್‌ಗಢ ರಾಜ್ಯದಲ್ಲಿ ಇನ್ನೇನು 2ನೇ & ಕೊನೇ ಹಂತದ ಮತದಾನ ನಡೆಯಲಿದೆ. ಆದರೆ ಚುನಾವಣೆ ಆರಂಭದಿಂದಲೂ ಒಂದಲ್ಲ ಒಂದು ರೀತಿ ಸುದ್ದಿಯಾಗ್ತಿರುವ ಈ ರಾಜ್ಯದಲ್ಲಿ, ಸ್ಪರ್ಧಿಸುತ್ತಿರುವ ಬಹುತೇಕ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಇದೆ ಎಂಬ ಆರೋಪ ಕೇಳಿಬಂದಿದೆ. ಛತ್ತೀಸ್‌ಗಢ ರಾಜ್ಯದಲ್ಲಿನ ಚುನಾವಣೆಗೆ ಈಗ ಸಿದ್ಧವಾದ 1,181 ಅಭ್ಯರ್ಥಿಗಳ ಪೈಕಿ 1,178 ಅಭ್ಯರ್ಥಿಗಳ ವಿರುದ್ಧವೇ ಕ್ರಿಮಿನಲ್ ಕೇಸ್ ಇದೆಯೆಂಬ ಆರೋಪ ಕೇಳಿಬಂದಿದೆ. ಈ ಮೂಲಕ, ಮೊದಲೇ ನಕ್ಸಲರ ಹಿಂಸಾಚಾರದಲ್ಲಿ ಬೆಚ್ಚಿದ ರಾಜ್ಯದಲ್ಲಿ ಅಭ್ಯರ್ಥಿಗಳು ಕೂಡ ಹೀಗಿದ್ದಾರೆ? ಅನ್ನೋ ಮಾತು ಕೇಳಿಬರುತ್ತಿದೆ.

2ನೇ ಹಂತದ ಮತದಾನಕ್ಕೆ ಸಿದ್ಧತೆ
ಈಗಾಗಲೇ ಮೊದಲ ಹಂತದ ಚುನಾವಣೆ ಮುಗಿಸಿರುವ ಛತ್ತೀಸ್‌ಗಢ ರಾಜ್ಯದಲ್ಲಿ ನಾಡಿದ್ದು ಅಂದ್ರೆ 17ರಂದು 2ನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದೆ. ಹೀಗಿದ್ದಾಗಲೇ ಛತ್ತೀಸ್‌ಗಢ ರಾಜ್ಯದ ಚುನಾವಣಾ ಅಭ್ಯರ್ಥಿಗಳ ಬಗ್ಗೆ ವರದಿ ವೈರಲ್ ಆಗ್ತಿದೆ. ಈ ಮಧ್ಯೆ 1,181 ಅಭ್ಯರ್ಥಿಗಳ ಪೈಕಿ 1,178 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಇರೋದಷ್ಟೇ ಅಲ್ಲ, ಇವರಲ್ಲೇ 72 ಅಭ್ಯರ್ಥಿಗಳು ಗಂಭೀರ ಪ್ರಕರಣ ಎದುರಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಛತ್ತೀಸ್‌ಗಢ ಚುನಾವಣಾ ಅಖಾಡ ಸೂಕ್ಷ್ಮವಾಗಿದ್ದು, ಭದ್ರತೆ ಕಾರಣಕ್ಕೆ ಈ ರಾಜ್ಯದಲ್ಲಿ 2 ಹಂತದಲ್ಲಿ ಮತದಾನ ನಡೆಯುತ್ತಿದೆ.












Click it and Unblock the Notifications