Exit Poll: ಮಹಾರಾಷ್ಟ್ರ ಚುನಾವಣೆ ಮೇಲೂ ಹರಿಯಾಣ & ಜಮ್ಮು ಕಾಶ್ಮೀರ ಎಲೆಕ್ಷನ್ ಎಫೆಕ್ಟ್?

ಭಾರತೀಯ ರಾಜಕೀಯ ಅಖಾಡದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗುತ್ತಿದೆ. ಯಾಕೆ? ಅಂದ್ರೆ ಇಂದು ಹೊರಬಿದ್ದಿರುವ ಹರಿಯಾಣ & ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಬಿಜೆಪಿ ನಾಯಕರಿಗೆ ಆಘಾತ ನೀಡಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಗೆ ಚುನಾವಣೆಗಳು ಮತ್ತಷ್ಟು ಸವಾಲು ನಿರ್ಮಿಸುವ ಮುನ್ಸೂಚನೆ ನೀಡುತ್ತಿದೆ. ಅರೆ ಹಾಗಿದ್ರೆ, ಮಹಾರಾಷ್ಟ್ರ ಚುನಾವಣೆ ಮೇಲೂ ಹರಿಯಾಣ & ಜಮ್ಮು ಕಾಶ್ಮೀರ ಎಲೆಕ್ಷನ್ ಎಫೆಕ್ಟ್ ವರ್ಕ್ ಆಗುತ್ತಾ? ಬಿಜೆಪಿ ನಾಯಕರು ಈ ಬೆಳವಣಿಗೆಯಿಂದ ದೊಡ್ಡ ಬದಲಾವಣೆ ತರ್ತಾರಾ?

ಭಾರತದ ಚುನಾವಣಾ ಅಖಾಡ ಮತ್ತೆ ರಂಗೇರಿದೆ, ಅದರಲ್ಲೂ ಹರಿಯಾಣ & ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಭಾರತದಲ್ಲಿ ಹೊಸ ತಲ್ಲಣಕ್ಕೆ ಕಾರಣವಾಗಿದೆ. ಯಾಕಂದ್ರೆ ಇಲ್ಲಿ, ಬಿಜೆಪಿ ಪಕ್ಷವು ದೊಡ್ಡ ಮಟ್ಟದ ಗೆಲುವು ಕಾಣುವ ನಿರೀಕ್ಷೆಯಲ್ಲಿ ಚುನಾವಣೆ ಅಖಾಡವನ್ನ ಪ್ರವೇಶ ಮಾಡಿತ್ತು. ಆದರೆ ಇದೀಗ ನೋಡಿದರೆ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಯ ನಾಯಕರಿಗೆ ಶಾಕ್ ಕೊಟ್ಟಂತೆ ಆಗಿದೆ. ಮತ್ತೊಂದು ಕಡೆ, ಹರಿಯಾಣ & ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತು ಹೋದರೆ ಮುಂದೆ ಮಹಾರಾಷ್ಟ್ರ ರಾಜ್ಯದ ಪರಿಸ್ಥಿತಿ ಕೂಡ ಹೀಗೆ ಆಗಲಿದೆಯಾ? ಜಾರ್ಖಂಡ್ ವಿಧಾನಸಭೆ ಚುನಾವಣೆ ಕಥೆ ಏನು?

Discover How Can Haryana And Jammu Kashmir Assembly Election Results Effect On Upcoming Elections

ಬಿಜೆಪಿಗೆ ಸಾಲು ಸಾಲು ಸೋಲು?

ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಸಾಕಷ್ಟು ದೊಡ್ಡ ಹಿನ್ನಡೆ ದಾಖಲಿಸಿ ಬೇಸರಗೊಂಡಿದೆ. ಪರಿಸ್ಥಿತಿ ಹೀಗಿದ್ದಾಗಲೇ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲೂ ಈಗ ಹಿನ್ನಡೆ ಆಗುತ್ತಿರುವುದು ಹೊಸ ಪ್ರಶ್ನೆ ಹುಟ್ಟು ಹಾಕಿದೆ. ಅಲ್ಲದೆ ಇನ್ನೇನು ಕೆಲವೇ ದಿನಗಳ ಅಂತರದಲ್ಲಿ ಎದುರಾಗಲಿರುವ ಮಹಾರಾಷ್ಟ್ರ & ಜಾರ್ಖಂಡ್ ವಿಧಾನಸಭೆ ಚುನಾವಣೆ ಮೇಲೆ ಈ ಫಲಿತಾಂಶ ಹೇಗೆಲ್ಲಾ ಎಫೆಕ್ಟ್ ಕೊಡಬಹುದು? ಎಂಬ ಚರ್ಚೆ ಶುರುವಾಗಿದೆ. ಯಾಕಂದ್ರೆ ಈಗಾಗಲೇ ಮಹಾರಾಷ್ಟ್ರ ಚುನಾವಣೆಗೆ ಕೌಂಟ್‌ಡೌನ್ ಆರಂಭವಾಗಿದೆ.

ಬಿಜೆಪಿ ನಾಯಕರ ಐಡಿಯಾ ಏನು?

ಹರಿಯಾಣ & ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ನಿಜವಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಅಕಸ್ಮಾತ್ ಹರಿಯಾಣ & ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ ಕೂಡ ಬಿಜೆಪಿ ಪಕ್ಷಕ್ಕೆ ಆಘಾತ ನೀಡಿದರೆ ಮುಂದಿನ ಮಹಾರಾಷ್ಟ್ರ ಚುನಾವಣೆ & ಜಾರ್ಖಂಡ್ ಚುನಾವಣೆ ಎದುರಿಸುವುದು ಕಷ್ಟವಾಗಲಿದೆ. ಹೀಗಾಗಿ ಏನು ಮಾಡುವುದು? ಎಂಬ ಚರ್ಚೆ ಇದೀಗ ಶುರುವಾಗಿದೆ. ಅದರಲ್ಲೂ ಬಿಜೆಪಿ ನಾಯಕರಿಗೆ ಇದು ಯಕ್ಷಪ್ರಶ್ನೆ ಆಗಿದ್ದು, ಮತ್ತೊಮ್ಮೆ ಸೋಲಿನ ಸುಳಿಯಿಂದ ಎದ್ದು ಬರಲು ರಣತಂತ್ರಗಳನ್ನ ಹೆಣೆಯಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+