ಮಾಜಿ ಪ್ರಧಾನಿಗಳನ್ನು ಟ್ವಿಟ್ಟರ್ ನಲ್ಲಿ ಟೀಕಿಸಿದ ವರ್ಮಾ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್, 30: ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ವಾ ಅವರು ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ, ಪಿ.ವಿ.ನರಸಿಂಹರಾವ್ ಮತ್ತು ಚಂದ್ರಶೇಖರ್ ಸಿಂಗ್ ವಿರುದ್ಧ ಅಮಾನವೀಯವಾಗಿ ಟೀಕಿಸಿ ಟ್ವೀಟ್ ಮಾಡಿದ್ದಾರೆ.

Director Ram Gopal varma insults former prime ministers in Tweet

ಸಂಸತ್ ಭವನದಲ್ಲಿ ಚರ್ಚೆ ಮಾಡುತ್ತಿರುವ ವಾಜಪೇಯಿ, ನರಸಿಂಹರಾವ್, ಚಂದ್ರಶೇಖರ್ ಸಿಂಗ್ ಮತ್ತು ಮುಂದಿನ ಸಾಲಿನಲ್ಲಿ ಕುಳಿತಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಕಪ್ಪು-ಬಿಳುಪಿನ ಛಾಯಾಚಿತ್ರವೊಂದನ್ನು ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಆ ಚಿತ್ರದ ಕುರಿತು ಟೀಕಾಪ್ರಹಾರ ಮಾಡಿದ್ದಾರೆ.

ಚಿತ್ರದಲ್ಲಿ ಮಾಜಿ ಪ್ರಧಾನಿಗಳು ಹಿಂದಿನ ಸಾಲಿನಲ್ಲಿ ನಡೆಸುತ್ತಿದ್ದು ಅವರನ್ನು ವರ್ಮಾ ಅವರು 'ಬ್ಯಾಕ್ ಬೆಂಚರ್ಸ್ ಎಂದು ಕರೆದು ಹೀಯಾಳಿಸಿದ್ದಾರೆ.

ದೇಶಕ್ಕೆ ಅಪಾರ ಸೇವೆ ಸಲ್ಲಿಸಿದ ಆ ಮೂವರು ಪ್ರಧಾನಿಗಳ ಕುರಿತ ಸ್ವಲ್ಪವೂ ನನಗೆ ಜ್ಞಾನವಿಲ್ಲ ಎಂಬಂತೆ " ಶಾಲೆ ಆಗಲಿ ಸಂಸತ್ತಿನಲ್ಲಾಗಲಿ ಹಿಂದಿನ ಬೆಂಚ್ ನಲ್ಲಿ ಕುಳಿತವರು ಮುಂದಿನವನ್ನು ಹೀಯಾಳಿಸುವುದು ಉಂಟು ಈ ಮೂವರು ಅದೇ ಕೆಲಸವನ್ನೇ ಮಾಡುತ್ತಿರುವಂತೆ ಕಾಣುತ್ತಿದೆ". ಎಂದು ಟ್ವೀಟಿಸಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ನಮ್ಮ ವಿವಾದಿತ ನಿರ್ದೇಶಕ ವರ್ಮಾ ಅವರು "ಮಹಿಳೆಯರ ಬಗ್ಗೆ ಭಾರತೀಯ ಪುರಷರು ಹೊಂದಿರುವ ಅಗೌರವ ಆ ಚಿತ್ರದಲ್ಲಿ ಎದ್ದು ಕಾಣಿಸುತ್ತಿದೆ. ಹಿಂದಿನ ಸಾಲಿನಲ್ಲಿ ಕುಳಿತಿರುವ ಆ ಮೂವರು ಯಾರು ಎಂದು ಪೊಲೀಸರು ತನಿಖೆ ನಡೆಸಬೇಕು" ಎಂದು ಮಾಜಿ ಪ್ರಧಾನಿಗಳ ಮೇಲೆ ತನಿಖೆಗೆ ಆಗ್ರಹಿಸಿದ್ದಾರೆ.

"ನನ್ನ ಅನಿಸಿಕೆ ಪ್ರಕಾರ ಮುಂದೆ ಕುಳಿತಿರುವ ಆ ಮಹಿಳೆ ಬಗ್ಗೆ ಆ ಮೂವರು ವ್ಯಕ್ತಿಗಳು ಬೇಕಂತಲೇ ಮುಂದೆ ಕುಳಿತಿರುವ ಮಹಿಳೆ ಮೇಲೆ ಪೋಲಿ ಜೋಕ್ ಗಳನ್ನು ಹರಿಯಬಿಡುತ್ತಿರುವಂತೆ ಕಾಣುತ್ತಿದೆ" ಎಂದು ಅಸಂಬಂದ್ಧವಾಗಿ ಹೇಳಿಕೆ ಪ್ರಕಟಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Famous Bollywood director Ram Gopal Varama has insults former prime ministers of India A.B. Vajapeyi, P.V. Narasimha Rao and Chandrashekhar sinhgh in tweet.
Please Wait while comments are loading...