• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರರನ್ನು ಬೆಂಬಲಿಸದಂತೆ ಯುದ್ಧಸನ್ನದ್ಧ ಪಾಕಿಸ್ತಾನಕ್ಕೆ ಚೀನಾ ಎಚ್ಚರಿಕೆ

|

ನವದೆಹಲಿ, ಫೆಬ್ರವರಿ 27 : ರಾಜತಾಂತ್ರಿಕ ಮಟ್ಟದಲ್ಲಿ ಭಾರತ ಮತ್ತೊಂದು ಯಶಸ್ಸು ಸಾಧಿಸಿದೆ. ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಕೂಡಲೆ ಸ್ಥಳಿತಗೊಳಿಸಬೇಕೆಂದು ಹೇಳಿದೆ.

ಭಾರತದ ವಿರುದ್ಧ ಯುದ್ಧ ಹೂಡಲು ಸನ್ನದ್ಧವಾಗಿರುವ ಪಾಕಿಸ್ತಾನಕ್ಕೆ ಚೀನಾ ಖಡಕ್ ಎಚ್ಚರಿಕೆ ನೀಡಿದ್ದು, ಪಾಕಿಸ್ತಾನದಲ್ಲಿ ಕೂಡಲೆ ಭಯೋತ್ಪಾದಕ ಸಂಘಟನೆಗೆ ನೀಡುತ್ತಿರುವ ಬೆಂಬಲ ನಿಲ್ಲಿಸಬೇಕೆಂದು ಹೇಳಿದೆ.

ವಿದೇಶಿ ಪತ್ರಿಕೆಗಳು ಕಂಡಂತೆ ಭಾರತದ ಸರ್ಜಿಕಲ್ ಸ್ಟ್ರೈಕ್ 2.0

ಇದಕ್ಕೂ ಮೊದಲು, ದೊಡ್ಡಣ ಅಮೆರಿಕ ಕೂಡ ಭಾರತದ ವಿರುದ್ಧ ಪ್ರತಿದಾಳಿ ನಡೆಸದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿರುವ ಪಾಕಿಸ್ತಾನ, ಬುಧವಾರ ಭಾರತದ ಮೇಲೆ ಬಾಂಬ್ ಹಾಕಿದೆ.

ರಾಜಕೀಯ ಮತ್ತು ರಾಜತಾಂತ್ರಿಕ ಹೆಗ್ಗುರಿಯನ್ನು ಸಾಧಿಸಲಿಕ್ಕಾಗಿ ಭಯೋತ್ಪಾದನೆಯನ್ನು ಮಾಡುವುದು ಮತ್ತು ಭಯೋತ್ಪಾದಕಾ ಸಂಘಟನೆಗಳನ್ನು ಬೆಂಬಲಿಸುವುದು ಸರ್ವಥಾ ಸಲ್ಲದು ಎಂದು ಚೀನಾ ಕಟು ಮಾತುಗಳಲ್ಲಿ ಪಾಕಿಸ್ತಾನಕ್ಕೆ ಹೇಳಿದೆ.

ಉರುಳಿದ ಎಫ್-16 ಬಗ್ಗೆ ಸುದ್ದಿ ಬಿತ್ತರಿಸದಂತೆ ಪಾಕ್ ಮಾಧ್ಯಮಗಳಿಗೆ ಸೂಚನೆ

ಚೀನಾದ ಸ್ನೇಹ ಸಂಪಾದಿಸಿರುವ ಪಾಕಿಸ್ತಾನಕ್ಕೆ ಕನಿಷ್ಠಪಕ್ಷ ಚೀನಾ ಬೆಂಬಲ ನೀಡಬಹುದು ಎಂಬ ಹವಣಿಕೆಯಲ್ಲಿತ್ತು. ಆದರೆ, ಚೀನಾ ಕೂಡ ಪಾಕಿಸ್ತಾನದೊಡನೆ ದೂರ ಕಾಪಾಡಿಕೊಳ್ಳಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಭಾರತದ ಯಾವುದೇ ಯುದ್ಧ ವಿಮಾನಗಳ ತಂಟೆಗೆ ಹೋಗದಂತೆ ವಾಯು ಸೇನೆಗೆ ನಿರ್ದೇಶನ ನೀಡಿದೆ ಎಂಬ ಸುದ್ದಿ ಬರುತ್ತಿದೆ. ಅಲ್ಲದೆ, ಪರಿಸ್ಥಿತಿಯನ್ನು ಸಡಿಲಗೊಳಿಸಿ ಶಾಂತಿಗೆ ಮುಂದೆ ಬರುವಂತೆ ಪಾಕಿಸ್ತಾನ ಕೋರಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬರುತ್ತಿದೆ.

ಉಗ್ರರ ಬೇಟೆಗೆ ವಾಯುಪಡೆ ಬಳಸಿದ್ದು 1.7 ಕೋಟಿ ಮೌಲ್ಯದ ಬಾಂಬ್!

ಭಾರತ, ರಷ್ಯಾ ಮತ್ತು ಚೀನಾದ ವಿದೇಶಾಂಗ ಸಚಿವರ ಸಭೆಯಲ್ಲಿ ಎಲ್ಲ ರೀತಿಯ ಭಯೋತ್ಪಾದನೆಯನ್ನು ನಿಗ್ರಹಿಸಬೇಕೆಂದು ಒಕ್ಕೊರಲ ನಿರ್ಣಯ ತೆಗೆದುಕೊಳ್ಳಲಾಗಿದೆ. ಭಯೋತ್ಪಾದನೆ ಮಾಡುವುದಾಗಲಿ, ಅದಕ್ಕೆ ಉತ್ತೇಜನ ನೀಡುವುದಾಗಲಿ, ಬೆಂಬಲಿಸುವುದಾಗಲಿ ಮಾಡಿದರೆ, ಅಂಥ ರಾಷ್ಟ್ರದ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಟ್ಟೆಚ್ಚರಿಕೆ ನೀಡಲಾಗಿದೆ.

English summary
Big diplomatic victory for India : China has backs India and told Pakistan to stop backing terror. Before China, USA also warned Pakistan not to retaliate after Indian Air Force destroyed terror groups in PoK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X