ಬಯ್ಯಾಜಿ ಮಹಾರಾಜ್ ಆತ್ಮಹತ್ಯೆಗೆ ಬಿಜೆಪಿಯನ್ನು ದೂರಿದ ದಿಗ್ವಿಜಯ್
ವಿದಿಶಾ(ಮಧ್ಯಪ್ರದೇಶ), ಜೂನ್ 13: ಮಧ್ಯಪ್ರದೇಶದ ಅಧ್ಯಾತ್ಮ ಗುರು ಬಯ್ಯುಜಿ ಮಹಾರಾಜ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಬಯ್ಯುಜಿ ಮಹಾರಾಜ್ ಅವರು ನರ್ಮದಾ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯ ಬಗ್ಗೆ ಕಳವಳ ಹೊಂದಿದ್ದರು. ಇದರ ವಿರುದ್ಧ ಅವರು ಧ್ವನಿ ಎತ್ತಬಾರದು ಎಂಬ ಕಾರಣಕ್ಕೇ ಅವರಿಗೆ ಮಂತ್ರಿಸ್ಥಾನವನ್ನು ನೀಡಲೂ ಬಿಜೆಪಿ ಮುಂದೆಬಂದಿತ್ತು. ಆದರೆ ಅದನ್ನು ಆವರು ನಿರಾಕರಿಸಿದ್ದರು" ಎಂದು ದಿಗ್ವಿಜಯ ಸಿಂಗ್ ಹೇಳಿದರು.
'ಅಕ್ರಮ ಮರಳುಗಾರಿಕೆಯ ಬಗ್ಗೆ ಅವರು ಆತಂಕ ಹೊಂದಿರುವುದೇ ಅವರ ಆತ್ಮಹತ್ಯೆಗೆ ಕಾರಣ' ಎಂದು ಸಿಂಗ್ ದೂರಿದರು.

ಉದಯಸಿಂಗ್ ದೇಶ್ ಮುಖ್ ಎಂಬುದು ಬಯ್ಯುಜಿ ಅವರ ನಿಜವಾದ ಹೆಸರು. ಮಧ್ಯಪ್ರದೇಶದ ಪ್ರಭಾವಿ ಅಧ್ಯಾತ್ಮ ಮುಖಂಡರಾಗಿದ್ದ ಬಯ್ಯುಜಿ ನಿನ್ನೆ(ಜೂನ್ 12) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಖಿನ್ನತೆಯೇ ಅವರ ಸಾವಿಗೆ ಕಾರಣ ಎನ್ನಲಾಗಿತ್ತು. 2016 ರಲ್ಲಿ ಅವರು ಸಾರ್ವಜನಿಕ ಬದುಕಿನಿಂದ ನಿವೃತ್ತಿ ಪಡೆದಿದ್ದರು.












Click it and Unblock the Notifications