ರೋಗಿಯ ಸಂಬಂಧಿಗಳು ಮಾಡಿದ ಹಲ್ಲೆಯಿಂದ ಆ ವೈದ್ಯನ ಕಣ್ಣೇ ಹೋಯ್ತು!

Posted By:
Subscribe to Oneindia Kannada

ಧುಲೆ (ಮಹಾರಾಷ್ಟ್ರ), ಮಾರ್ಚ್ 14: ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬನಿಗೆ ತಕ್ಷಣವೇ ಚಿಕಿತ್ಸೆ ನೀಡಲಿಲ್ಲ ಎಂಬ ಕಾರಣ ನೀಡಿದ ವ್ಯಕ್ತಿಯ ಸಂಬಂಧಿಗಳು ವೈದ್ಯರೊಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಧುಲೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಭೀಕರ ಹಲ್ಲೆಗೊಳಗಾದ ವೈದ್ಯರ ಎಡಗಣ್ಣಿನ ದೃಷ್ಟಿಯೇ ಹೊರಟು ಹೋಗಿದೆ.

ಹಲ್ಲೆಗೊಳಗಾದ ವ್ಯಕ್ತಿಯ ಹೆಸರು ಡಾ. ರೋಹನ್ ಮೊಮೊರ್ಕರ್ ಎಂದು ಹೇಳಲಾಗಿದೆ.

ಆಸ್ಪತ್ರೆಯ ಮೂಲಗಳ ಪ್ರಕಾರ, ತಲೆಗೆ ಪೆಟ್ಟುಬಿದ್ದಿದ್ದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ನೀಡಿದ ನಂತರ, ಆ ವ್ಯಕ್ತಿಗೆ ನರತಜ್ಞರ ಸಲಹೆ ಅವಶ್ಯಕತೆಯೆಂದು ಭಾವಿಸಿದ ವೈದ್ಯರು ಆತನನ್ನು ಬೇರೊಂದು ಆಸ್ಪತ್ರೆಗೆ ಕೊಂಡೊಯ್ಯಲು ಸೂಚಿಸಿದರು.

ಆದರೆ, ಇದರಿಂದ ರೊಚ್ಚಿಗೆದ್ದ ವ್ಯಕ್ತಿಯ ಸಂಬಂಧಿಗಳು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಭೀಕರ ಹಲ್ಲೆಯಿಂದಾಗಿ, ರೋಹನ್ ಅವರ ಎಡಗಣ್ಣಿನ ದೃಷ್ಟಿ ಹೊರಟುಹೋಗಿದ್ದು, ಅವರ ಎದೆ, ಹೊಟ್ಟೆಯ ಭಾಗಗಳಿಗೆ ತೀವ್ರವಾದ ಪೆಟ್ಟು ಬಿದ್ದಿರುವುದಾಗಿ ರೋಹನ್ ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Orthopedic doctor of Dhule Civil hospital in Maharashtra, was thrashed by his patient’s relatives on Tuesday after a quarrel over alleged medical negligence.
Please Wait while comments are loading...