Breaking: ಧಾರಾವಿ ಪುನಾಭಿವೃದ್ಧಿ ಯೋಜನೆ ಬಿಡ್ ಗೆದ್ದುಕೊಂಡ ಅದಾನಿ ಗ್ರೂಪ್!
ಮುಂಬೈ, ನವೆಂಬರ್ 29: ಏಷ್ಯಾದ ಅತಿದೊಡ್ಡ ಕೊಳೆಗೇರಿ ಪ್ರದೇಶ ಎನಿಸಿರುವ ಮುಂಬೈನ ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು 5,069 ಕೋಟಿ ರೂಪಾಯಿ ಅನ್ನು ಬಿಡ್ ಮಾಡುವ ಮೂಲಕ ಅದಾನಿ ಸಂಸ್ಥೆಯು ಗೆದ್ದುಕೊಂಡಿತು.
ನವೆಂಬರ್ 29ರಂದು ಅದಾನಿ ಗ್ರೂಪ್ ಧಾರವಿ ಪುನರಾಭಿವೃದ್ಧಿ ಯೋಜನೆಯನ್ನು 5,069 ಕೋಟಿ ಬಿಡ್ ಮೂಲಕ ಗೆದ್ದುಕೊಂಡಿದೆ. ಮುಂಬೈನ ಹೃದಯಭಾಗದಲ್ಲಿರುವ ಧಾರವಿ ಏಷ್ಯಾದ ಅತಿದೊಡ್ಡ ಕೊಳೆಗೇರಿಯಾಗಿದೆ.
ಇದೇ ಧಾರಾವಿ ಕೊಳಗೇರಿ ಪ್ರದೇಶದಲ್ಲಿ 58,000 ಕುಟುಂಬಗಳು ಮತ್ತು ಸುಮಾರು 12,000 ವಾಣಿಜ್ಯ ಸಂಸ್ಥೆಗಳಿವೆ. ಇದು ವಿಶ್ವದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ.

ಧಾರಾವಿ ಅಭಿವೃದ್ಧಿ ಬಗ್ಗೆ ಮಾತು:
ಮಹಾರಾಷ್ಟ್ರದಲ್ಲಿ ಕಳೆದ 18 ವರ್ಷಗಳ ಅವಧಿಯಲ್ಲಿ ಸತತವಾಗಿ ಸರ್ಕಾರಗಳು ಧಾರವಿ ಪ್ರದೇಶವನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಮಾತನಾಡುತ್ತಿವೆ. ಅಕ್ಟೋಬರ್ 18ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಉದ್ದೇಶಕ್ಕಾಗಿ 'ಖಚಿತವಾದ ಒಪ್ಪಂದ'ಕ್ಕೆ ಸಹಿ ಹಾಕಿದರು.
ಇದೇ ಒಪ್ಪಂದದ ಅಡಿಯಲ್ಲಿ ಮುಂಬೈನ ಮಧ್ಯ ಭಾಗದಲ್ಲಿ ಇರುವ ದಾದರ್‌ನಲ್ಲಿ 47.5 ಎಕರೆ ರೈಲ್ವೆ ಭೂಮಿಯನ್ನು ಧಾರವಿ ಪುನರಾಭಿವೃದ್ಧಿ ಯೋಜನೆಗಾಗಿ ಹಸ್ತಾಂತರ ಮಾಡಸಲಾಗಿದೆ.












Click it and Unblock the Notifications