ಕಣ್ಣೀರಲ್ಲಿ ತಾರಿಷಿ ಕುಟುಂಬ, ಇಂಥ ನೋವಿಗೆ ಕೊನೆ ಯಾವಾಗ?

Written By:
Subscribe to Oneindia Kannada

ನವದೆಹಲಿ, ಜುಲೈ, 05: ಢಾಕಾದಲ್ಲಿ ನಡೆದ ಉಗ್ರರ ದಾಳಿಗೆ ಇಡೀ ಪ್ರಪಂಚವೆ ಮರುಗಿದೆ. ಭಾರತದ ತಾರಿಷಿ ಜೈನ್ ಪಾರ್ಥೀವ ಶರೀರ ದೆಹಲಿಗೆ ಆಗಮಿಸಿದ ವೇಳೆ ಕುಟುಂಬದವರ ರೋದನ ಹೇಳ ತೀರದಾಗಿತ್ತು.

ದಾಳಿಯಲ್ಲಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡವರಿಗೆ ಇಡೀ ಜಗತ್ತು ಶ್ರದ್ಧಾಂಜಲಿ ಸಲ್ಲಿಕೆ ಮಾಡಿದೆ. ದಾಳಿಯಲ್ಲಿ ಮೃತಪಟ್ಟ ಭಾರತೀಯ ಯುವತಿ ತಾರಿಷಿ ಜೈನ್ ಅವರ ಪಾರ್ಥಿವ ಶರೀರ ಸೋಮವಾರ ಭಾರತಕ್ಕೆ ಬಂದಿದ್ದು ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಿದೆ.[ಬಾಂಗ್ಲಾ ದಾಳಿ: ಸ್ನೇಹಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುಸೇನ್]

dhaka

ತಾರಿಷಿ ಜೈನ್ ಕುಟುಂಬದವರ ನೋವನ್ನು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಜೈನ್ ಹತ್ಯೆಗೆ ಭೋಪಾಲ್ ನಲ್ಲಿ ಮುಸ್ಲಿಂ ಸಮುದಾಯದವರು ಶ್ರದ್ಧಾಂಜಲಿ ಸಲ್ಲಿಕೆ ಮಾಡಿದರು.[ಐಎಸ್ಐಎಸ್ ಅಟ್ಟಹಾಸ: ಕತ್ತು ಕೊಯ್ದು 20 ವಿದೇಶಿಗರ ಹತ್ಯೆ]

dhaka

ಢಾಕಾದ ಆರ್ಟಿಸನ್ ಬೇಕರಿ ರೆಸ್ಟೋರೆಂಟ್ ಮೇಲೆ ಜುಲೈ 1 ರ ರಾತ್ರಿ ಏಕಾಏಕಿ ದಾಳಿ ಮಾಡಿದ ಉಗ್ರರು ಅನೇಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು.

dhaka

ತಕ್ಷಣ ಕಾರ್ಯಾಚರಣೆ ಕೈಗೊಂಡಿದ್ದ ಭದ್ರತಾ ಪಡೆ ಯೋಧರು ಜುಲೈ ಮಧ್ಯಾಹ್ನದವರೆಗೂ ಹರಸಹಾಸ ಮಾಡಿ ಉಗ್ರರ ಅಟ್ಟಹಾಸ ಅಡಗಿಸಿದ್ದವು. ಆದರೆ ಇಷ್ಟರಲ್ಲಿಯೇ ಉಗ್ರರು ಅಮಾಯಕರನ್ನು ಹತ್ಯೆ ಮಾಡಿದ್ದರು.[ಸೌದಿ ಅರೆಬೀಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ]

dhaka


ರಂಜಾನ್ ತಿಂಗಳಲ್ಲಿಯೇ ಉಗ್ರರ ಅಟ್ಟಹಾಸ ಮಿತಿಮೀರಿದೆ. ಢಾಕಾದಲ್ಲಿ ದಾಳಿ ಮಾಡಿ 20 ಜನರ ಹತ್ಯೆ, ಬಾಗ್ದಾದ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ, ಅಮೆರಿಕ ನೈಟ್ ಕ್ಲಬ್ ಮೇಲೆ ದಾಳಿ.. ಮತ್ತೆ ನೋವಿನ ಸರಣಿಯನ್ನು ನೆನಪು ಮಾಡಿಕೊಳ್ಳುವುದರಲ್ಲಿ ಅರ್ಥ ಇಲ್ಲ.

dhaka


ಉಗ್ರರ ದಮನಕ್ಕೆ ಎಲ್ಲ ದೇಶಗಳು ಒಂದಾಗಿದ್ದರೂ ಹುಟ್ಟು ಅಡಗಿಸಲು ಸಾಧ್ಯವಾಗಿಲ್ಲ. ಇಡೀ ಪ್ರಪಂಚ ಕೇಳುತ್ತಿರುವ ಪ್ರಶ್ನೆ ಮಾತ್ರ ಒಂದೆ, ಇಂಥ ಅಟ್ಟಹಾಸಕ್ಕೆ ಕೊನೆ ಯಾವಾಗ?

dhaka

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Amidst an outpour of grief, Tarishi Jain, the 19-year-old Indian girl who was killed along with 19 others in the Dhaka terror attack, was cremated here today. Tarishi's brother Sanchit performed the last rites at around 4:15 pm in a cremation ground at Sukhrali village near IFFCO Chowk as family members suffered in silence.
Please Wait while comments are loading...