Get Updates
Get notified of breaking news, exclusive insights, and must-see stories!

Devendra Fadnavis: ಮೂರನೇ ಬಾರಿ ಸಿ.ಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದೇವೇಂದ್ರ ಫಡ್ನವಿಸ್, ಏಕನಾಥ್ ಶಿಂಧೆ ಡಿಸಿಎಂ

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರು ಗುರುವಾರ ಸಂಜೆ (ಡಿಸೆಂಬರ್‌ 5) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ದೇವೇಂದ್ರ ಫಡ್ನವಿಸ್ ಅವರು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ದೇವೇಂದ್ರ ಫಡ್ನವಿಸ್ ಅವರೊಂದಿಗೆ ಶಿವಸೇನೆ ಪಕ್ಷದ ನಾಯಕ ಏಕನಾಥ್‌ ಶಿಂಧೆ ಹಾಗೂ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿಯ (ಎನ್‌ಸಿಪಿ) ಅಧ್ಯಕ್ಷ ಅಜಿತ್ ಪವಾರ್ ಅವರು ಸಹ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಸಿಎಂ ಹುದ್ದೆಯ ಜಿದ್ದಾಜಿದ್ದಿನ ಪೈಪೋಟಿಗೆ ತೆರೆಬಿದ್ದಿದೆ. ಇನ್ನು ದೇವೇಂದ್ರ ಫಡ್ನವಿಸ್ ಅವರು ಇದೀಗ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಎರಡನೇ ಬಾರಿ ಕೇವಲ 3 ದಿನಗಳ ಅವಧಿಗೆ ಸಿ.ಎಂ ಆಗಿದ್ದರು!

ಮಹಾರಾಷ್ಟ್ರದ 21ನೇ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರು ಗುರುವಾರ ಸಂಜೆ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಮಹಾಯುತಿ ಮೈತ್ರಿ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಹೀಗಾಗಿ, ಈ ಸಮಾರಂಭಕ್ಕೆ ಎನ್‌ಡಿಎ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಸಾಕ್ಷಿಯಾದರು.

Devendra Fadnavis Sworn in as Maharashtra CM for the Third Time Eknath Shinde as DCM

ಸಮಾರಂಭಕ್ಕೆ ದೇವೇಂದ್ರ ಫಡ್ನವಿಸ್ ಅವರ ಕುಟುಂಬದವರು ಸಹ ಹಾಜರಿದ್ದರು. ಫಡ್ನವೀಸ್ ಅವರ ಪತ್ನಿ ಅಮೃತಾ ಮತ್ತು ಮಗಳು ದಿವಿಜಾ ಅವರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಅಲ್ಲದೇ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಏಕನಾಥ್ ಶಿಂಧೆ ಮತ್ತು ಅಜಿತ್‌ ಪವಾರ್ ಅವರ ಕುಟುಂಬ ಸದಸ್ಯರು ಸಭಿಕರ ನಡುವೆಯೇ ಕುಳಿತಿದ್ದು ವಿಶೇಷವಾಗಿತ್ತು. ಪ್ರತಿಪಕ್ಷದ ಮುಖಂಡರು ಸಮಾರಂಭದಿಂದ ಅಂತರ ಕಾಪಾಡಿಕೊಂಡಿದ್ದರು.

ದೇವೇಂದ್ರ ಫಡ್ನವಿಸ್ ಸಿ.ಎಂ: ದೇವೇಂದ್ರ ಫಡ್ನವಿಸ್ ಅವರು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಹೇರಿದ್ದಾರೆ. 2014 ರಿಂದ 2019 ರವರೆಗೆ ಅವರು ಮಹಾ ಮುಖ್ಯಮಂತ್ರಿಯಾಗಿದ್ದರು. ಮುಂದೆ 2019 ರಲ್ಲಿ ಮಹಾರಾಷ್ಟ್ರದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಶಿವಸೇನಾದೊಂದಿಗೆ ಕೈಜೋಡಿಸಿ ಕೇಲವ 72 ಮುಖ್ಯಮಂತ್ರಿಯಾಗಿದ್ದರು. ಅದಂರೆ ಮೂರೇ ದಿನ. ಇದೀಗ ಅವರು ಮೂರನೇ ಬಾರಿ ಅಧಿಕಾರಕ್ಕೆ ಹೇರಿದ್ದಾರೆ. ಬಹುಮತದ ಬೆಂಬಲದ ಕೊರತೆಯಿಂದಾಗಿ ಅವರ ಸರ್ಕಾರವು ಕೇವಲ 72 ಗಂಟೆಗಳ ಕಾಲ ಇತ್ತು.

Devendra Fadnavis Sworn in as Maharashtra CM for the Third Time Eknath Shinde as DCM

ಚಳಿಗಾಲಕ್ಕೂ ಮುನ್ನ ಸಚಿವ ಸಂಪುಟ: ಇನ್ನು ಮಹಾರಾಷ್ಟ್ರದ ನೂತನ ಸಚಿವರ ಪ್ರಮಾಣ ವಚನ ಸಮಾರಂಭವು ಮಹಾರಾಷ್ಟ್ರದ ಚಳಿಗಾಲದ ಅಧಿವೇಶನಕ್ಕೂ ಮುಂಚೆ ಆಗುವ ಸಾಧ್ಯತೆ ಇದೆ. ಈಗಾಗಲೇ ಸಚಿವರ ಆಯ್ಕೆಯಲ್ಲೂ ಹಲವು ಸುತ್ತಿನ ಕಸರತ್ತುಗಳು ನಡೆದಿವೆ. ಏಕನಾಥ್‌ ಶಿಂಧೆ ಅವರು ಹಲವು ಡಿಮ್ಯಾಂಡ್‌ಗಳನ್ನು ಬಿಜೆಪಿ ಹೈಕಮಾಂಡ್‌ನ ಮುಂದೆ ಇರಿಸಿದ್ದರು. ಈ ಬಾರಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದಿದೆ. ಅಲ್ಲದೇ ಅಜಿತ್‌ ಪವಾರ್‌ ಬಣಕ್ಕೂ ಸಚಿವರ ಹುದ್ದೆಗಳನ್ನು (ಶಾಸಕರಿಗೆ ಸಚಿವರ ಹುದ್ದೆ) ನೀಡಬೇಕಿದೆ. ಹೀಗಾಗಿ, ಇನ್ನೊಂದು ಸುತ್ತಿನ ಚೌಕಾಸಿ ಇದರಲ್ಲಿ ನಡೆಯುವ ಸಾಧ್ಯತೆ ಇದೆ

ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನವು ಮುಂಬೈನಲ್ಲಿ ಡಿಸೆಂಬರ್ 7 ರಿಂದ 9 ರವರೆಗೆ ನಡೆಯಲಿದೆ. ಇದರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡಿಸೆಂಬರ್ 16 ರಿಂದ 23 ರವರೆಗೆ ನಾಗ್ಪುರದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ವರದಿಯಾಗಿದೆ.

ಒಂದಾಗಿ ಸಾಗಲಿದ್ದೇವೆ: ಫಡ್ನವಿಸ್ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಎನ್ನುವುದು ರಾಜಕೀಯ ಹಾಗೂ ತಾಂತ್ರಿಕ ರಚನೆ. ಆದರೆ, ನಾವು ಮೂರು ಜನ (ಫಡ್ನವಿಸ್‌, ಶಿಂಧೆ ಹಾಗೂ ಅಜಿತ್‌ ಪವಾರ್) ಅವರು ಒಟ್ಟಾಗಿ ಸಾಗಲಿದ್ದೇವೆ. ಒಟ್ಟಿಗೆ ಕೆಲಸ ಮಾಡುತ್ತೇವೆ ಎಲ್ಲರೂ ಸೇರಿಯೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಿದ್ದೇವೆ ಎಂದು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+