Breaking; ರಾಜಮಂಡ್ರಿಯಲ್ಲಿ ಹಳಿ ತಪ್ಪಿದ ರೈಲು, ಸಂಚಾರ ರದ್ದು
ಅಮರಾವತಿ, ನವೆಂಬರ್ 09; ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿನ ಯಾರ್ಡ್‌ನಲ್ಲಿ ರೈಲು ಹಳಿ ತಪ್ಪಿದೆ. ಹಳಿಗಳಿಂದ ಬೋಗಿಗಳನ್ನು ತೆರವು ಮಾಡಬೇಕಿರುವ ಕಾರಣ, ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಬುಧವಾರ ರಾಜಮಂಡ್ರಿ ಯಾರ್ಡ್‌ನ ಎನ್‌ಎಂಜಿ ಬೋಗಿಗಳು ಹಳಿ ತಪ್ಪಿವೆ. ಇದರಿಂದಾಗಿ ದಕ್ಷಿಣ ಮಧ್ಯ ರೈಲ್ವೆ ಹಲವಾರು ರೈಲುಗಳ ಸಂಚಾರ ರದ್ದುಗೊಳಿಸಿದೆ. ಕೆಲವು ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ.

ಒಟ್ಟು ಮೂರು ಬೋಗಿಗಳು ಹಳಿ ತಪ್ಪಿವೆ. ರೈಲ್ವೆ ಇಲಾಖೆಯ ಸಿಬ್ಬಂದಿಗಳು ಬೋಗಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಸಿವೆ. ಕಾರ್ಯಾಚರಣೆ ಹಲವು ಗಂಟೆಗಳ ಕಾಲ ನಡೆಯುವ ನಿರೀಕ್ಷೆ ಇದೆ.
ಬೋಗಿಗಳ ತೆರವು ಕಾರ್ಯಾಚರಣೆ ಪೂರ್ಣಗೊಳ್ಳುವ ತನಕ ರೈಲು ಸಂಚಾರಕ್ಕೆ ತೊಂದರೆ ಉಂಟಾಗಲಿದೆ. ಆದ್ದರಿಂದ ರೈಲುಗಳು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಯಾವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ.
ವೇಳಾಪಟ್ಟಿ ಬದಲಾವಣೆ ಮಾಹಿತಿ
Andhra Pradesh | Due to the derailment of the NMG rake on Down main line at Rajahmundry Yard, several trains are Cancelled/Partially cancelled/Rescheduled on November 9th: South Central Railway pic.twitter.com/gYjrtYxDAZ
— ANI (@ANI) November 9, 2022












Click it and Unblock the Notifications