ನೋಟು ನಿಷೇಧ ಪರಿಣಾಮ: ರೂ.500ರಲ್ಲಿ ಮುಗಿದ ಮದುವೆ!

Posted By:
Subscribe to Oneindia Kannada

ಸೂರತ್, ನವೆಂಬರ್, 25: ನೋಟು ನಿಷೇಧದಿಂದಾಗಿ ದೇಶದಾದ್ಯಂತ ಸಾರ್ವಜನಿಕರು ನಗದು ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮದುವೆ ಮತ್ತಿತರ ಸಮಾರಂಭಗಳನ್ನು ಹಮ್ಮಿಕೊಂಡಿರುವವರು ಮತ್ತಷ್ಟು ಪರದಾಡುತ್ತಿದ್ದಾರೆ. ಇನ್ನು ಸಾಮಾನ್ಯ ಜನರು ಅದ್ದೂರಿ ಮದುವೆ ಮಾಡಬೇಕು ಎಂದರೆ ಅದು ಕನಸಿನ ಮಾತಾಗಿಬಿಟ್ಟಿದೆ.

ಇರುವುದರಲ್ಲೇ ಅಚ್ಚುಕಟ್ಟಾಗಿ ಮದುವೆ ಮಾಡಿ ಮುಗಿಸಬೇಕು ಎಂದುಕೊಳ್ಳುವ ವಧು-ವರರ ಪೋಷಕರು ಹಣಕ್ಕಾಗಿ ದಿನಪೂರ್ತಿ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ.[ನಗದು ಅಪಮೌಲ್ಯ : ಒನ್ಇಂಡಿಯಾ ಜನ-ಗಣ-ಮನ ದರ್ಪಣ]

Demonetisation effect: couple in Gujarat got married in just Rs 500

ಈ ಎಲ್ಲಾ ಕಾರಣಗಳಿಂದಾಗಿ ಕೇವಲ ರೂ.500ರಲ್ಲಿ ಮದುವೆ ಮಾಡಿ ಮುಗಿಸಿರುವ ಘಟನೆ ಗುಜರಾತ್ ಸೂರತ್ ನಲ್ಲಿ ನಡೆದಿದೆ. ವಧು ವರರನ್ನು ಆಶೀರ್ವದಿಸಲು ಬಂದಿದ್ದ ಅತಿಥಿಗಳಿಗೆ ಕೇವಲ ಟೀ ಮತ್ತು ನೀರನ್ನು ಕೊಟ್ಟು ಉಪಚರಿಸಿದ್ದಾರೆ.

"ಪ್ರಧಾನಿ ಮೋದಿ ಅವರು ನೋಟು ನಿಷೇಧ ನಿರ್ಧಾರ ಪ್ರಕಟಿಸುವುದಕ್ಕೂ ಮೊದಲೇ ನಮ್ಮ ಮದುವೆ ದಿನಾಂಕ ನಿಗದಿಯಾಗಿತ್ತು. ಆನಂತರ ನಿಗದಿಯಾದ ದಿನಾಂಕದಂತೆ ತೀರಾ ಸರಳವಾಗಿ ಮದುವೆ ಮಾಡಿ ಮುಗಿಸಿದೆವು. ಅತಿಥಿಗಳಿಗೆ ಕೇವಲ ನೀರು ಮತ್ತು ಟೀ ಕೊಟ್ಟು ಉಪಚರಿಸಿದೆವು" ಎಂದು ವಧು ತಿಳಿಸಿದ್ದಾರೆ.

ಇಷ್ಟೊಂದು ಸರಳ ಮದುವೆ ಮಾಡಲು ನಮ್ಮ ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು. ಇದರಿಂದ ನಮ್ಮ ಮದುವೆ ಚಾಯ್, ಪಾನಿಯಲ್ಲೇ ಮುಗಿದು ಹೋಯಿತು ಎಂದು ವಧು ತಿಳಿಸಿದ್ದಾರೆ.

ಇಷ್ಟೊಂದು ಸರಳವಾಗಿ ಮದುವೆ ಮಾಡಿರುವ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರೆಲ್ಲಾ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ. ಈ ರೀತಿಯ ಮದುವೆ ಎಲ್ಲರಿಗೂ ಮಾದರಿ ಎಂದು ಹೇಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Demonetisation has impacted the country and people in more ways than one. There have been reports on how brides and grooms have spent days prior to the wedding standing in queues than preparing for the wedding.
Please Wait while comments are loading...