ನೋಟು ನಿಷೇಧ: ಜನಧನ ಖಾತೆಗಳಲ್ಲಿ ಹಣ ಜಮೆ ಆಗಿದ್ದೆಷ್ಟು ಗೊತ್ತೆ?

Written By: Ramesh
Subscribe to Oneindia Kannada

ನವದೆಹಲಿ, ನವೆಂಬರ್. 26 : ಐನೂರು-ಸಾವಿರ ಮುಖ ಬೆಲೆಯ ನೋಟುಗಳ ನಿಷೇಧದ ಬಳಿಕ ಜನಧನ ಖಾತೆಗಳಿಗೆ ಕೋಟಿ-ಕೋಟಿ ಹಣ ಜಮೆಯಾಗುತ್ತಿದೆ.

ನ.8ರಂದು ನೋಟು ನಿಷೇಧದ ಬಳಿಕ ಒಟ್ಟು 64,252.15 ಸಾವಿರ ಕೋಟಿ ರೂ. ಹಣ ಜಮಾವಣೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಹಣಕಾಸು ಖಾತೆಯ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗಾವಾರ್ ಲೋಕಸಭೆಗೆ ಶುಕ್ರವಾರ ಈ ಕುರಿತು ಮಾಹಿತಿ ನೀಡಿದರು.

'ದೇಶಾದ್ಯಂತ 25.58 ಕೋಟಿ ಪ್ರಧಾನ ಮಂತ್ರಿ ಜನಧನ ಖಾತೆಗಳಲ್ಲಿ ನ.16ರ ವರೆಗೆ ಒಟ್ಟು 64,252.15 ಕೋಟಿ ರೂ. ಜಮಾ ಆಗಿದೆ' ಎಂದರು. ಜನಧನ ಖಾತೆಗೆ ಹಣ ಜಮಾವಣೆಯಾಗಿರುವುದರಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.

Deposits in Jan Dhan accounts rise to Rs 64,250 crore

ಉತ್ತರ ಪ್ರದೇಶದಲ್ಲಿ 3.79 ಕೋಟಿ ಖಾತೆಗಳಲ್ಲಿ 10,670.62 ಕೋಟಿ ಜಮಾ ಆಗಿದೆ. ಪಶ್ಚಿಮ ಬಂಗಾಳದಲ್ಲಿ 2.44 ಕೋಟಿ ಖಾತೆಯಲ್ಲಿ 7,826.44 ಕೋಟಿ, ರಾಜಸ್ಥಾನದ 1.89 ಕೋಟಿ ಖಾತೆಗಳಲ್ಲಿ 4,912.79 ಕೋಟಿ ಹಣ ಜಮಾವಣೆಯಾಗಿದೆ.

ದೇಶದಲ್ಲಿ ಒಟ್ಟು 25.58 ಕೋಟಿ ಜನಧನ ಖಾತೆಗಳಿವೆ. ಇವುಗಳಲ್ಲಿ 5.98 ಕೋಟಿ ಖಾತೆಗಳು 0 ಬ್ಯಾಲೆನ್ಸ್ ಹೊಂದಿವೆ.

ಕೇಂದ್ರ ಸರ್ಕಾರ ನ.8ರಂದು 500 ಮತ್ತು 1000 ರೂ. ನೋಟುಗಳನ್ನು ನಿಷೇಧಗೊಳಿಸಿದ ಬಳಿಕ ಬಡವರಿಗೆ ಕಮೀಷನ್ ಆಮಿಷವೊಡ್ಡಿ ಜನಧನ ಖಾತೆಗಳಿಗೆ ಹಣ ಜಮಾವಣೆ ಮಾಡಲಾಗುತ್ತಿದೆ ಎಂಬ -ಆರೋಪಗಳು ಕೇಳಿಬರುತ್ತಿವೆ.ಇನ್ನು ಕಂತೆ-ಕಂತೆ ಹಳೆ ನೋಟುಗಳು ಅಲ್ಲಲ್ಲಿ ಸಿಕ್ಕಿಬೀಳುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Total deposits in Jan Dhan accounts have increased to Rs 64,252.15 crore, with Uttar Pradesh leading the chart with Rs 10,670.62 crore deposits followed by West Bengal and Rajasthan, the government said on Friday.
Please Wait while comments are loading...