ಕ್ಯೂನಲ್ಲಿ ಸಾವು: 50 ಲಕ್ಷ ಪರಿಹಾರಕ್ಕೆ ಸುಪ್ರೀಂ ಮೊರೆ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 21: ಹಿರಿಯ ನಾಗರಿಕರೊಬ್ಬರು ನೋಟು ಬದಲಾಯಿಸಿಕೊಳ್ಳಲು ಹೋಗಿ ಬ್ಯಾಂಕ್ ಬಳಿ ಮೃತಪಟ್ಟಿದ್ದು, ಅವರ ಪರಿವಾದವರು ತಮಗೆ 50 ಲಕ್ಷ ಪರಿಹಾರ ಕೊಡಿಸಬೇಕೆಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಮೃತರಾದವರು ಸಿಯಾ ರಾಮ್ (70) ದಿನಗೂಲಿ ಕಾರ್ಮಿಕರು. ಇವರು ನವೆಂಬರ್ 17 ನೋಟು ಬದಲಾವಣೆ ಮಾಡಿಸಿಕೊಳ್ಳಲು ಬ್ಯಾಂಕಿನ ಮುಂದೆ ನಿಂತಿದ್ದಾಗ ಪಾಶ್ವವಾಯುವಿನಿಂದ ಮೃತರಾಗಿದ್ದರು.

ಇವರ ಪುತ್ರರಾದ ಕನ್ಹಯ್ಯಾ ಲಾಲ್ ತನ್ನ ತಂದೆ ಸಾವಿಗೆ ಮುಖ್ಯ ಕಾರಣ ಕರೆನ್ಸಿ ಬದಲಾವಣೆಗಾಗಿ ಸರತಿಯಲ್ಲಿ ನಿಂತದ್ದೇ ಎಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

supreme

ಈ ಅರ್ಜಿಯಲ್ಲಿ 40ಕ್ಕೂ ಹೆಚ್ಚು ಎಟಿಎಂಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಸಾಮಾನ್ಯರು ಹಣ ತೆಗೆದುಕೊಳ್ಳುತ್ತಿದ್ದಾರೆ ಈ ಸಾಲಿನಲ್ಲಿ ವೃದ್ಧರು ಹೇಗೆ ಬದುಕಿ ಬರಲು ಸಾಧ್ಯ ಎಂದು ತಿಳಿಸಿದ್ದಾರೆ.

ಕ್ಯೂನಲ್ಲಿ ನಿಂತು ಮೃತರಾದವರ ವಿಚಾರವಾಗಿ ದೆಹಲಿಯ ಸಂಸತ್ ಸದನದಲ್ಲಿಯೂ ವಿರೋಧ ಪಕ್ಷಗಳು ಯಾರು ಹೊಣೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಲೋಕಸಭೆಯ ಸದಸ್ಯ ವಿಪಕ್ಷ ನಾಯಕ ಗುಲಾಬ್ ನಬಿ ಆಜಾದ್ ಹೇಳುವಂತೆ ಇಲ್ಲಿಯವರೆಗೆ ಸರತಿಯಲ್ಲಿ ನಿಂತು ಸಾವಿಗೀಡಾದ ಎಪತ್ತು ಜನರೆಲ್ಲರಿಗೂ ಗೌರವ ಸಲ್ಲಿಸಬೇಕಾಗಿದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The family a deceased senior citizen, Who allegeedly died due to standing in aqueue for replacing old currency note after the demonetisation move, has moved the supreme court seeking acompensation of rs.50 lakh from the centre
Please Wait while comments are loading...