ಗೋವಾ ಬೈನಾ ಬೀಚ್ ನಲ್ಲಿ ಕನ್ನಡಿಗರ ಮನೆ ನೆಲಸಮ: ಕರವೇ ಪ್ರತಿಭಟನೆ

Recommended Video

      Goa kannadigas problem | karave protest against manohar parrikar | Oneindia Kannada

      ಯಾದಗಿರಿ, ಸೆಪ್ಟೆಂಬರ್ 27: ಗೋವಾದ ಬೈನಾ ಬೀಚ್'ನಲ್ಲಿ ವಾಸವಿರುವ ಕನ್ನಡಿಗರ ಮನೆಗಳ ತೆರವು ಖಂಡಿಸಿ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.

      ನಗರದ ಸುಭಾಷ್ ವೃತ್ತದಲ್ಲಿ ಟೈಯರ್ ಹಾಗೂ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಗೋವಾದಲ್ಲಿ ಸುಮಾರು ನಲವತ್ತು ವರ್ಷಗಳಿಂದ ಕನ್ನಡಿಗರು ವಾಸ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಗೋವಾ ಸರ್ಕಾರ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಾ ಬಂದಿದೆ.

      Demolition of homes of Kannadigas in Goa's Baina beach, Karave protests against Manohar Parrikar

      ಇದರ ಮುಂದುವರಿದ ಭಾಗವಾಗಿ ಇದೀಗ 55 ಮನೆಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಮನೋಹರ್ ಪರಿಕ್ಕರ್ ನೀತಿ ಖಂಡಿಸಿ ಗೋವಾ ಸರ್ಕಾದ ಹಾಗೂ ಜಿಲ್ಲಾಡಳಿತದ ವಿರುದ್ಧ ದಿಕ್ಕಾರ ಕೂಗಿದರು.

      ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಕನ್ನಡಿಗರ ರಕ್ಷಣೆಗೆ ಬರಬೇಕು. ಗೋವಾ ಸರ್ಕಾರದ ಜೊತೆ ಮಾತನಾಡಿ ನಿರಾಶ್ರಿತರಿಗೆ ಸೂರು ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದರು.

      ಪ್ರತಿಭಟನೆಯಲ್ಲಿ ಕರವೇ ಉತ್ತರ ಕರ್ನಾಟಕದ ಅಧ್ಯಕ್ಷ ಶರಣು ಗದ್ದುಗೆ, ಜಿಲ್ಲಾಧ್ಯಕ್ಷ ಸಿದ್ದುರೆಡ್ಡಿ ತಂಗಡಗಿ, ಅಮರೇಶ, ರವಿ ದೇವರಮನಿ, ಕಾಶಿಂ ಪಟೇಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+