ಗೋವಾ : ಕನ್ನಡಿಗರ ರಕ್ಷಣೆಗೆ ನೆರವಿಗೆ ಧಾವಿಸಿದ ರಾಜ್ಯ

ಬೆಂಗಳೂರು, ಅಕ್ಟೋಬರ್ 01 : ಗೋವಾದ ಬೈನಾ ಬೀಚ್‍ನಲ್ಲಿ ಮನೆಗಳನ್ನು ಕಳೆದುಕೊಂಡಿರುವ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ದಕ್ಷಿಣ ಗೋವಾದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಭಾಶ್ ಎಸ್ ಛಾಯಾಗೋಳ್ ಅವರು ಬುಧವಾರ ಗೋವಾದ ಬೈನಾ ಬೀಚ್‍ನಲ್ಲಿ ಮನೆ ಕಳೆದುಕೊಂಡಿರುವ ಕನ್ನಡಿಗರನ್ನು ಭೇಟಿ ಮಾಡಿ ಸಂತ್ರಸ್ತರ ಅಹವಾಲುಗಳನ್ನು ಆಲಿಸಿದರು. [ಗೋವಾದಲ್ಲಿ ಕನ್ನಡಿಗರ ಮನೆ ನೆಲಸಮ]

goa

ಕನ್ನಡಿಗರ 157 ಮನೆಗಳನ್ನು ಗೋವಾ ಸರ್ಕಾರ ಕೆಡವಿ ಹಾಕಿದ್ದು, ಪುನರ್ವಸತಿ ಕಲ್ಪಿಸುವಂತೆ ಸಂತ್ರಸ್ತರು ಈ ಸಂದರ್ಭದಲ್ಲಿ ಮನವಿ ಮಾಡಿದರು. ಗೋವಾ ಸರ್ಕಾರದ ಜೊತೆ ಈ ಕುರಿತು ಮಾತನಾಡುವುದಾಗಿ ಸುಭಾಶ್ ಎಸ್ ಛಾಯಾಗೋಳ್ ಅವರು ಸಂತ್ರಸ್ತರಿಗೆ ಭರವಸೆ ನೀಡಿದರು. [ಗೋವಾ ಬೀಜ್ ಕನ್ನಡಿಗರಿಗೆ ಆತಂಕ]

ನಂತರ ಅವರು ದಕ್ಷಿಣ ಗೋವಾ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನಿರಾಶ್ರಿತ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಮನವಿ ಮಾಡಿದರು. ಪ್ರವಾಸೋದ್ಯಮ ಸಚಿವ ಆರ್‌.ವಿ.ದೇಶಪಾಂಡೆ ಅವರು ಸಹ ಕನ್ನಡಿಗರ ನೆರವಿಗೆ ಧಾವಿಸುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

house

ಮನೆ ಕೆಡವಲಾಗಿತ್ತು : ಸೆ.26ರ ಶನಿವಾರ ಗೋವಾ ಸರ್ಕಾರ ಬೈನಾ ಬೀಚ್‌ನಲ್ಲಿ ನೆಲೆಸಿರುವ ಕನ್ನಡಿಗರ ಮನೆಗಳನ್ನು ಕೆಡವಿ ಹಾಕಿತ್ತು. ಮನೆಗಳನ್ನು ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸದಿದ್ದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+