ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಡೆಲ್ಟಾ ಪ್ಲಸ್' ರೂಪಾಂತರಿ ಬಗ್ಗೆ ಆತಂಕ ಬೇಡ ಎಂದ ತಜ್ಞರು

|
Google Oneindia Kannada News

ನವದೆಹಲಿ, ಜೂನ್ 16: ದೇಶದಲ್ಲಿ ಪತ್ತೆಯಾಗಿರುವ ಹೊಸ ಡೆಲ್ಟಾ ಪ್ಲಸ್ ರೂಪಂತರಿ ಬಗ್ಗೆ ಜನರು ಆತಂಕ ಪಡುವುದು ಬೇಡ ಎಂದು ತಜ್ಞರು ಹೇಳಿದ್ದಾರೆ.

''ಹೊಸ ರೂಪಾಂತರವು ಸಾರ್ಕ್-ಕೋವ್-2 ನ ಸ್ಪೈಕ್ ಪ್ರೋಟೀನ್‌ನಲ್ಲಿದೆ. ಇದು ವೈರಸ್ ಮಾನವ ಜೀವಕೋಶಗಳಿಗೆ ಪ್ರವೇಶಿಸಲು ಮತ್ತು ಸೋಂಕು ತಗಲುವಂತೆ ಮಾಡುತ್ತದೆ'' ಎಂದು ದೆಹಲಿ ಸಿಎಸ್ಐಆರ್ ಜೆನೋಮಿಕ್ ಇನ್ಸ್ ಟಿಟ್ಯೂಟ್ ನ ತಜ್ಞ ವಿನೋದ್ ಸ್ಕಾರಿಯಾ ಹೇಳಿದ್ದಾರೆ.

ಡೆಲ್ಟಾ ನಂತರ ಭಾರತದಲ್ಲಿ ಮತ್ತೊಂದು ಹೊಸ ರೂಪಾಂತರ ಪತ್ತೆಡೆಲ್ಟಾ ನಂತರ ಭಾರತದಲ್ಲಿ ಮತ್ತೊಂದು ಹೊಸ ರೂಪಾಂತರ ಪತ್ತೆ

ದೇಶದಲ್ಲಿ ಸಾಂಕ್ರಾಮಿಕ ರೋಗ ಕೋವಿಡ್ ಎರಡನೇ ಅಲೆಗೆ ಡೆಲ್ಟಾ ರೂಪಾಂತರಿ ಕಾರಣವಾಗಿತ್ತು. ಇದರ ಬೆನ್ನಲ್ಲೇ ಡೆಲ್ಟಾ ಪ್ಲಸ್ ಅಥವಾ ಎವೈ.1 ಎಂಬ ರೂಪಾಂತರಿ ತಳಿ ಪತ್ತೆಯಾಗಿದೆ. ಆದರೆ ಸದ್ಯದ ಮಟ್ಟಿಗೆ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

Delta Plus, New COVID Variant, Experts Say No Cause Of Concern For Now

ಮೊನೊಕ್ಲೋನಲ್ ಪ್ರತಿಕಾಯಗಳಾದ ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್ಗಳಿಗೆ ಪ್ರತಿರೋಧವನ್ನು ಸೂಚಿಸಿರುವ ನಿದರ್ಶನಗಳಿವೆ. ಈ ಕಾಕ್ಟೈಲ್ ಇತ್ತೀಚೆಗೆ ಭಾರತದಲ್ಲಿ ತುರ್ತು ಬಳಕೆಗಾಗಿ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಸಂಸ್ಥೆಯಿಂದ ಅನುಮೋದನೆ ಪಡೆದುಕೊಂಡಿದೆ. ಡ್ರಗ್ ಸಂಸ್ಥೆಗಳಾದ ರೋಚೆ ಇಂಡಿಯಾ ಮತ್ತು ಸಿಪ್ಲಾಸ್ ಆಂಟಿಬಾಡಿ ಕಾಕ್ಟೈಲ್‌ಗೆ ಪ್ರತಿ ಡೋಸ್‌ಗೆ 59,750 ರೂ. ನಿಗದಿ ಮಾಡಿದೆ.

ಡೆಲ್ಟಾ ಅಥವಾ ಬಿ .1.617.2 ರೂಪಾಂತರಿ ಭಾರತದಲ್ಲಿ ಮೊದಲು ಪತ್ತೆಯಾಗಿದ್ದು ಇದ ಕೊರೊನಾ ಎರಡನೇ ಅಲೆಗೆ ಕಾರಣವಾಗಿತ್ತು. ಹೊಸ ರೂಪಾಂತರದಿಂದಾಗಿ ರೋಗದ ತೀವ್ರತೆಯ ಬಗ್ಗೆ ಇನ್ನೂ ಯಾವುದೇ ಸೂಚನೆ ಇಲ್ಲವಾದರೂ ಭಾರತದಲ್ಲಿ ಇತ್ತೀಚೆಗೆ ಅನುಮೋದನೆ ಪಡೆದ ಆಂಟಿಬಾಡಿ ಕಾಕ್ಟೈಲ್ ಮೊನೊಕ್ಲೋನಲ್ ಕೊರೋನಾ ವೈರಸ್ ಡೆಲ್ಟಾ ಪ್ಲಸ್ ನಿರೋಧಕವಾಗಿದೆ.

63 ಜೆನೋಮ್(ಬಿ.1.617.2) ಹೊಸ ತಳಿ ಕೆ417ಎನ್ ಕಾಣಿಸಿಕೊಂಡಿರುವುದಾಗಿ ಬ್ರಿಟನ್ ಆರೋಗ್ಯ ಇಲಾಖೆ ಕೂಡ ತಿಳಿಸಿದೆ. ಇದು ಭಾರತದಲ್ಲಿ ಜೂನ್ 7ರಂದು ಕಾಣಿಸಿಕೊಂಡಿದ್ದು ಭಾರತದಲ್ಲಿ ಹೆಚ್ಚಾಗಿ ಸೋಂಕಿತರಲ್ಲಿ ಕಂಡುಬಂದಿಲ್ಲ. ಆದರೆ ಯುರೋಪ್, ಏಷ್ಯಾ ಹಾಗೂ ಅಮೆರಿಕಾದಲ್ಲಿ ಈ ರೂಪಾಂತರಿ ಪತ್ತೆಯಾಗಿದೆ.

English summary
The highly transmissible Delta variant of SARS-CoV-2 has mutated further to form the ‘Delta plus’ or ‘AY.1′ variant but there is no immediate cause for concern in India as its incidence in the country is still low, scientists here said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X