ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಪಡೆದವರನ್ನೂ ಬಿಡುತ್ತಿಲ್ಲ ಡೆಲ್ಟಾ ರೂಪಾಂತರ; AIIMS ಅಧ್ಯಯನ

|
Google Oneindia Kannada News

ನವದೆಹಲಿ, ಜೂನ್ 10: ಕೊರೊನಾ ಸೋಂಕಿನ ಹರಡುವಿಕೆ ತಡೆಗೆ ದೇಶದೆಲ್ಲೆಡೆ ಲಸಿಕೆ ಅಭಿಯಾನ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ತೆಗೆದುಕೊಳ್ಳಲು ಸೂಚಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೂಡ ಲಸಿಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ.

ಆದರೆ ಲಸಿಕೆ ಪಡೆದ ಮಾತ್ರಕ್ಕೆ ಸೋಂಕಿನಿಂದ ತಪ್ಪಿಸಿಕೊಂಡೆವು ಅಂದುಕೊಳ್ಳಬೇಡಿ. ಲಸಿಕೆಗಳು, ಕೊರೊನಾ ಸೋಂಕು ಗಂಭೀರ ಸ್ವರೂಪ ಪಡೆಯುವುದನ್ನು ತಡೆಯುತ್ತದೆಯೇ ಹೊರತು ಸೋಂಕಿನಿಂದ ಸಂಪೂರ್ಣ ರಕ್ಷಣೆಯ ಖಾತ್ರಿ ಕೊಡುವುದಿಲ್ಲ ಎಂದು ಕೆಲವು ತಜ್ಞರು ಸಲಹೆ ನೀಡಿದ್ದರು. ಇದೀಗ ಅದೇ ಮಾತನ್ನು ಪುನರುಚ್ಚರಿಸುವಂತೆ ಆಗಿದೆ.

ಡೆಲ್ಟಾ, ಬೀಟಾ ರೂಪಾಂತರಿಗಳಿಂದ ಕೋವಾಕ್ಸಿನ್ ಲಸಿಕೆ ರಕ್ಷಣೆ: ಅಧ್ಯಯನ ವರದಿಡೆಲ್ಟಾ, ಬೀಟಾ ರೂಪಾಂತರಿಗಳಿಂದ ಕೋವಾಕ್ಸಿನ್ ಲಸಿಕೆ ರಕ್ಷಣೆ: ಅಧ್ಯಯನ ವರದಿ

ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್- AIIMS ಈ ಕುರಿತು ಪ್ರಾಥಮಿಕ ಅಧ್ಯಯನ ನಡೆಸಿದ್ದು, ಲಸಿಕೆ ಪಡೆದ ಮಂದಿಗೂ ಡೆಲ್ಟಾ ರೂಪಾಂತರ ಸೋಂಕು ತಗುಲುತ್ತಿದೆ ಎಂದು ಹೇಳಿದೆ.

Delta Corona variant Infecting Vaccinated People Says AIIMS Study

63 ಮಂದಿಯನ್ನು ಬಳಸಿಕೊಂಡು ಏಮ್ಸ್ ಸಣ್ಣ ಅಧ್ಯಯನ ಕೈಗೊಂಡಿದ್ದು, ಅದರಲ್ಲಿ 36 ಮಂದಿಯ ವಿಶ್ಲೇಷಣೆ ನಡೆಸಿತ್ತು. ಅದರಲ್ಲಿ 19 ಮಂದಿ ಒಂದು ಡೋಸ್ ಕೊರೊನಾ ಲಸಿಕೆ ಪಡೆದುಕೊಂಡಿದ್ದರೆ, 17 ಮಂದಿ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದರು. ಆದರೆ ಈ ಎಲ್ಲರಿಗೂ ಲಸಿಕೆ ಪಡೆದುಕೊಂಡ ನಂತರ ಸೋಂಕು ತಗುಲಿರುವುದು ಕಂಡುಬಂದಿದೆ. ಸೋಂಕಿನ ಜೆನೋಮ್ ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ ಡೆಲ್ಟಾ ರೂಪಾಂತರ ಸೋಂಕು ಪತ್ತೆಯಾಗಿದೆ.

36 ಮಾದರಿಗಳಲ್ಲಿ 23 ಮಾದರಿಗಳು (B.1.617.2) ಡೆಲ್ಟಾ ಮಾದರಿ ಇರುವುದು ಕಂಡುಬಂದಿದೆ. 63 ಮಂದಿಯಲ್ಲಿ 53 ಮಂದಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದು, 10 ಮಂದಿ ಕೋವ್ಯಾಕ್ಸಿನ್ ಪಡೆದುಕೊಂಡಿದ್ದರು. 41 ಮಂದಿ ಪುರುಷರಾಗಿದದ್ದು, 22 ಮಹಿಳೆಯರಾಗಿದ್ದರು.

ಆದರೆ ಇವರಲ್ಲಿ ಸಾವಿನ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಲಸಿಕೆಯು, ಸೋಂಕು ಗಂಭೀರ ಸ್ವರೂಪ ಪಡೆಯುವುದನ್ನು ತಡೆದಿರುವುದು ಕಂಡುಬಂದಿದೆ ಎಂದು ಏಮ್ಸ್‌ ತಿಳಿಸಿದೆ. ಆದರೆ ಡೆಲ್ಟಾ ರೂಪಾಂತರ ಸೋಂಕು ಲಸಿಕೆ ಪಡೆದ ನಂತರವೂ ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದೆ.

English summary
Preliminary study conducted by the All India Institute of Medical Sciences saying that delta corona variant is infecting vaccinated people also,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X