• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೆಹಲಿ ಮಾಲಿನ್ಯ ಸುಧಾರಣೆ: ಕಟ್ಟಡ ಕಾಮಗಾರಿಗೆ ಅನುಮತಿ, ಶಾಲೆ ಪುನರಾರಂಭಕ್ಕೆ ಚಿಂತನೆ

|
Google Oneindia Kannada News

ನವದೆಹಲಿ, ನವೆಂಬರ್ 23: ಸೋಮವಾರ ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸಿದ್ದು, ಗಾಳಿಯ ಗುಣಮಟ್ಟವನ್ನು ಕೊಂಚ ಸುಧಾರಿಸಿದೆ. ನಗರದಲ್ಲಿ ಕಳೆದ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) 311ಕ್ಕೆ ಇಳಿಕೆಯಾಗಿದೆ. ಭಾನುವಾರ ಇದೇ ಸೂಚ್ಯಂಕ 349ಕ್ಕಿಂತ ಹೆಚ್ಚಾಗಿತ್ತು. ದೆಹಲಿ ನೆರೆಯ ಫರಿದಾಬಾದ್ (330), ಘಾಜಿಯಾಬಾದ್ (254), ಗ್ರೇಟರ್ ನೋಯ್ಡಾ (202), ಗುರ್ಗಾಂವ್ (310), ಮತ್ತು ನೋಯ್ಡಾ (270) ಸಹ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿದೆ.

ನವದೆಹಲಿಯ ಗಾಳಿ ಗುಣಮಟ್ಟದಲ್ಲಿ ಸುಧಾರಣೆ ಕಂಡು ಬಂದಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕಾರ್ಮಿಕರು ಎದುರಿಸುತ್ತಿರುವ ಅನನುಕೂಲತೆ ಹಿನ್ನೆಲೆಯಲ್ಲಿ ರಿಯಲ್‌ ಎಸ್ಟೇಟ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿರ್ಮಾಣ ಕಾಮಗಾರಿಗಳು ಹಾಗೂ ಕಟ್ಟಡ ತಾಜ್ಯ ತೆರವು ಚಟುವಟಿಕೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದೆ.

ದೆಹಲಿ ವಾಯುಮಾಲಿನ್ಯ: ನ.26ರವರೆಗೂ ಟ್ರಕ್‌ಗಳಿಗೆ ನಿರ್ಬಂಧ, WFH ವಿಸ್ತರಣೆ ದೆಹಲಿ ವಾಯುಮಾಲಿನ್ಯ: ನ.26ರವರೆಗೂ ಟ್ರಕ್‌ಗಳಿಗೆ ನಿರ್ಬಂಧ, WFH ವಿಸ್ತರಣೆ

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪರಿಸರ ಸಚಿವ ಗೋಪಾಲ್ ರೈ, ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಬುಧವಾರ ಪುನರಾರಂಭಿಸುವ ಕುರಿತು ಸರ್ಕಾರವು ಕರೆ ನೀಡಲಿದೆ ಎಂದು ಹೇಳಿದ್ದಾರೆ. "ಪರಿಸ್ಥಿತಿ ಸುಧಾರಿಸಿದರೆ ಅಗತ್ಯವಲ್ಲದ ವಸ್ತುಗಳನ್ನು ಸಾಗಿಸುವ ಸಿಎನ್‌ಜಿ-ಚಾಲಿತ ಟ್ರಕ್‌ಗಳು ದೆಹಲಿಗೆ ಪ್ರವೇಶಿಸಲು ಅನುಮತಿಸಬಹುದೇ ಎಂದು ನಾವು ಚರ್ಚಿಸುತ್ತೇವೆ" ಎಂದು ತಿಳಿಸಿದ್ದಾರೆ.

ನವೆಂಬರ್ 26ರವರೆಗೂ ವರ್ಕ್ ಫ್ರಮ್ ಹೋಮ್ ವಿಸ್ತರಣೆ

ನವೆಂಬರ್ 26ರವರೆಗೂ ವರ್ಕ್ ಫ್ರಮ್ ಹೋಮ್ ವಿಸ್ತರಣೆ

"ದೆಹಲಿಯಲ್ಲಿ ಅಗತ್ಯ ಮತ್ತು ತುರ್ತು ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಜಿಎನ್‌ಸಿಟಿಯ ಎಲ್ಲಾ ಕಚೇರಿಗಳು/ಸ್ವಾಯತ್ತ ಸಂಸ್ಥೆಗಳು/ಕಾರ್ಪೊರೇಷನ್‌ಗಳು ನವೆಂಬರ್ 26ರವರೆಗೆ ಬಂದ್ ಆಗಿರುತ್ತವೆ. ಆದಾಗ್ಯೂ, ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಮನೆಯಿಂದಲೇ ಕೆಲಸ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಗಾಳಿ ವೇಗದಿಂದಾಗಿ ಗೋಚರತೆಯಲ್ಲಿ ಸುಧಾರಣೆ

ಗಾಳಿ ವೇಗದಿಂದಾಗಿ ಗೋಚರತೆಯಲ್ಲಿ ಸುಧಾರಣೆ

ಸೋಮವಾರ ಪಶ್ಚಿಮ ದಿಕ್ಕಿನ ಮಾರುತಗಳು ಗಂಟೆಗೆ 25 ಕಿಮೀ ವೇಗದಲ್ಲಿ 3,200 ಮೀಟರ್‌ಗೆ ಗೋಚರತೆಯನ್ನು ಸುಧಾರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಹಿರಿಯ ವಿಜ್ಞಾನಿ ಆರ್ ಕೆ ಜೆನಮಣಿ ಹೇಳಿದ್ದಾರೆ. ಪಾಲಂ ವೀಕ್ಷಣಾಲಯದ ಪ್ರಕಾರ, ನವೆಂಬರ್ ತಿಂಗಳಿನಲ್ಲೇ ಮೊದಲ ಬಾರಿಗೆ "3,000 ಮೀ ಗಿಂತ ಹೆಚ್ಚು ಗೋಚರತೆ ಮತ್ತು ಅಂತಹ ಬಲವಾದ ಗಾಳಿ" ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿ ವಾಯು ಗುಣಮಟ್ಟದಲ್ಲಿ ಸುಧಾರಣೆ

ರಾಷ್ಟ್ರ ರಾಜಧಾನಿ ವಾಯು ಗುಣಮಟ್ಟದಲ್ಲಿ ಸುಧಾರಣೆ

ಭೂ ವಿಜ್ಞಾನ ಸಚಿವಾಲಯದ ವಾಯು ಗುಣಮಟ್ಟದ ಮಾನಿಟರ್ SAFAR ಸೋಮವಾರದಂದು "ಅತ್ಯಂತ ಕಳಪೆ" ವರ್ಗದ ಕೆಳ ತುದಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ ಎಂದು ಹೇಳಿದೆ. ಕಡಿಮೆ ಬೆಂಕಿಯ ಹೊಗೆ ಮತ್ತು ಬಲವಾದ ಗಾಳಿಯ ವೇಗದಿಂದಾಗಿ ವಾಯು ಗುಣಮಟ್ಟದಲ್ಲಿ "ಗಮನಾರ್ಹ" ಸುಧಾರಣೆ ಕಂಡು ಬಂದಿದೆ. ಈ ಮಾರುತಗಳು ಮಂಗಳವಾರವೂ ಮುಂದುವರಿಯುವ ಸಾಧ್ಯತೆಯಿದ್ದು, ಬೆಂಕಿಯ ಹೊಗೆ ಹೆಚ್ಚಾಗದಿದ್ದರೆ ಗಾಳಿಯ ಗುಣಮಟ್ಟವನ್ನು 'ಕಳಪೆ' ವರ್ಗಕ್ಕೆ ತರಲಿದೆ. ಆ ಮೂಲಕ ವಾಯು ಗುಣಮಟ್ಟವು ಮತ್ತಷ್ಟು ಸುಧಾರಿಸಲಿದೆ ಎಂದು ಹೇಳಿದೆ.

ಸ್ಥಳೀಯ ಮೇಲ್ಮೈ ಗಾಳಿಯ ವೇಗವು ಸೋಮವಾರ ಹೆಚ್ಚಾಗಿದ್ದು, ಮಂಗಳವಾರವೂ ಹಾಗೆ ಇರುತ್ತದೆ. ಸ್ಥಳೀಯ ಮತ್ತು ಸಾರಿಗೆ ಮಟ್ಟದ ಗಾಳಿಯು ಬುಧವಾರದಿಂದ ನಿಧಾನಗೊಳ್ಳುವ ಸಾಧ್ಯತೆಯಿದೆ ಮತ್ತು ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಕ್ಷೀಣಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಶೇ.6ರಷ್ಟು ಮಾಲಿನ್ಯಕ್ಕೆ ಕಸ ಸುಡುವುದೇ ಕಾರಣ

ಶೇ.6ರಷ್ಟು ಮಾಲಿನ್ಯಕ್ಕೆ ಕಸ ಸುಡುವುದೇ ಕಾರಣ

ಸೋಮವಾರದಂದು ದೆಹಲಿಯ PM2.5 ಮಾಲಿನ್ಯದ ಶೇಕಡಾ 6ರಷ್ಟು ಹೆಚ್ಚಾಗುವುದಕ್ಕೆ 909 ಕೃಷಿ ಬೆಳೆಯ ನಂತರದ ಕಸ ಸುಡುವುದೇ ಕಾರಣವೆಂದು SAFAR ಹೇಳಿದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನವು 27.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಪ್ರತಿವರ್ಷ ಈ ಸಮಯದಲ್ಲಿ ಈ ಋತುವಿನ ಸರಾಸರಿ p ಮತ್ತು 11.4 ಡಿಗ್ರಿ ಸೆಲ್ಸಿಯಸ್‌ಗಿಂತ ಒಂದು ಹಂತ ಸಾಮಾನ್ಯವಾಗಿದೆ. ಮಂಗಳವಾರ ಮುಖ್ಯವಾಗಿ ಸ್ಪಷ್ಟವಾಗಿ ಆಕಾಶ ಗೋಚರಿಸಲಿದ್ದು, ಮುಂಜಾನೆ ಮಂಜಿನಿಂದ ಕೂಡಿರಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಅಲ್ಲದೇ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನವು 11 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

English summary
Delhi: Strong Winds Gives Temporary Relief From Air Pollution, Govt's Ban on Construction Lifted, WFH Extended Till Nov 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X