ಬಿಜೆಪಿ ಸೂಚನೆ ಮೇರೆಗೆ ಎಎಪಿ ನಾಯಕರ ಮೇಲೆ ದಾಳಿ: ಅರವಿಂದ್ ಕೇಜ್ರಿವಾಲ್

ನವದೆಹಲಿ, ಜನವರಿ 24: ದೆಹಲಿಯಲ್ಲಿ ಚುನಾವಣೆ ಕಾವು ಹೆಚ್ಚಾಗಿದ್ದು, ಆಡಳಿತ ಪಕ್ಷ ಆಮ್ ಆದ್ಮಿ ಪಕ್ಷ (ಎಎಪಿ) ಬಿಜೆಪಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಚುನಾವಣೆ ಪ್ರಚಾರದಲ್ಲಿ ನಡೆದ ಒಂದಷ್ಟು ಬೆಳವಣಿಗೆ, ದಾಳಿ ಸಂಬಂಧ ಕೇಂದ್ರ ಚುನಾವಣೆ ಆಯೋಗಕ್ಕೆ ಎಎಪಿ ದೂರು ನೀಡಿದೆ ಎಂದು ಶುಕ್ರವಾರ ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ದೆಹಲಿಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಸಂಬಂಧ ಭರ್ಜರಿಯಾಗಿ ನಡೆಯುತ್ತಿರುವ ಪ್ರಚಾರ ವೇಳೆ ಎಎಪಿ ನಾಯಕರ ಮೇಲೆ ದಾಳಿ ನಡೆಸಿವೆ ಎಂದು ಪಕ್ಷ ನೇರವಾಗಿ ಬಿಜೆಪಿ ಮೇಲೆ ಆರೋಪಿಸಿದೆ. ಮಾಜಿ ಸಿಎಂ ಅರವಿಂದ್ ಕೇಜ್ರವಾಲ್ ಅವರ ಮೇಲೆ ದಾಳಿ ನಡೆದಿದೆ ಎಂದು ಸ್ವತಃ ಅವರು ದೂರಿದ್ದಾರೆ.

Delhi Polls 2025 Attacked on AAP leaders as per Central BJP Instruction Arvind Kejriwal Alleges

ವಿರೋಧ ಪಕ್ಷದ ಅಭ್ಯರ್ಥಿಯ ಕೆಲವು ಕಾರ್ಯಕರ್ತರು ಗುರುವಾರ ದೆಹಲಿಯ ಹರಿ ನಗರದಲ್ಲಿ ಅವರ ಸಾರ್ವಜನಿಕ ಸಭೆ ನಡೆಸುತ್ತಿದ್ದರು. ಈ ವೇಳೆ ಸಭೆಯಗೆ ನುಗ್ಗಿ ಅವರ ಕಾರಿನ ಮೇಲೆ ದಾಳಿ ಮಾಡಲಾಗಿದೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಹರಿನಗರದ ಸಭೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು.

ಇತ್ತೀಚೆಗೆ ನನ್ನ ಕಾರಿನ ಮೇಲೆಯೂ ದಾಳಿ ಮಾಡಲಾಗಿದೆ. ಇದು ದುರುದ್ದೇಶದಿಂದಲೇ ಮಾಡಲಾಗಿದೆ. ಅಮಿತ್ ಶಾ ಅವರ ಆದೇಶದ ಇಂತಹ ಘಟನೆಗಳು, ದಾಳಿಗಳು ನಡೆಯುತ್ತದೆ. ದೆಹಲಿ ಪೊಲೀಸರನ್ನು ಅಮಿತ್ ಶಾ ಅವರು ಬಿಜೆಪಿಯ ವೈಯಕ್ತಿಕ ಸೈನ್ಯವನ್ನಾಗಿ ಮಾಡಿಕೊಂಡಿದ್ದಾರೆ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

ಒಂದು ವಾರದ ಹಿಂದಷ್ಟೇ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರು, ತಾವು ಪ್ರಚಾರ ಮಾಡುವಾಗ ರ್ಯಾಲಿಯಲ್ಲಿ ಬಿಜೆಪಿ ಕಾರ್ಯಕತರ ಹೆಸರಿನಲ್ಲಿ ಒಂದಷ್ಟು ಜನರು ಬಂದು ದಾಳಿ ಮಾಡಿದ್ದಾರೆ. ಈ ಕುರಿತು ಅವರು ಭಾರೀ ಬೇಸರ ವ್ಯಕ್ತಪಡಿಸಿಕೊಂಡರು.

ಭಾರತ ಚುನಾವಣಾ ಆಯೋಗ ಹಾಗೂ ದೆಹಲಿ ಪೊಲೀಸರ ನಿರ್ದೇಶನ ಬಳಿಕ ಅರವಿಂದ್ ಕೇಜ್ರವಾಲ್ ಅವರಿಗೆ ನೀಡಿದ್ದ ಭದ್ರತೆಯನ್ನು ಪಂಜಾಬ್ ಪೊಲೀಸರು ಹಿಂಪಡೆದಿದ್ದಾರೆ. ಈ ಕುರಿತು ಪಂಜಾಬ್ ಡಿಜಿಪಿ ಗೌರವ್ ಯಾದವ್ ಗುರುವಾರ ಅಧಿಕೃತ ಮಾಹಿತಿ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್‌ರ ಭದ್ರತೆ ಹಿಂಪಡೆದ ನಿರ್ಧಾರವನ್ನು ದೆಹಲಿ ಮುಖ್ಯಮಂತ್ರಿ ಅತಿಶಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಎಎಪಿ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜೀವನದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಆಟವಾಡುತ್ತಿದ್ದಾರೆ ಎಂದು ಅತಿಶಿ ಅವರು ದೂರರಿದ್ದಾರೆ. ಇಂತಹ ನಡೆ ಸಹಿಸಲು ಸಾಧ್ಯವಿಲ್ಲ. ಇವರಿಗೆ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಮುಂದಿನ ಫೆಬ್ರವರಿ 5 ರಂದು 70 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ. ದೆಹಲಿಯ 70 ವಿಧಾನಸಭಾ ಸೀಟುಗಳಿಗೆ ಒಟ್ಟು 699 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+