Delhi Assembly Election 2025: ದೆಹಲಿ ಚುನಾವಣೆ ನಿರ್ವಹಣೆಗೆ ಬಂತು AI ಚಾಟ್‌ಬಾಟ್
ದೆಹಲಿ, ಜನವರಿ 23: ದೆಹಲಿ ಚುನಾವಣೆ ಕಣ ರಂಗೇರುತ್ತದೆ. ಮತ್ತೊಂದೆಡೆ ಚುನಾವಣೆ ಪ್ರಕ್ರಿಯೆಗೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಚುನಾವಣಾ ಸಂಬಂಧಿತ ಕರ್ತವ್ಯಕ್ಕಾಗಿ ದೆಹಲಿ ಪೊಲೀಸರು ಎಐ ಆಧಾರಿತ 'ಚುನವ್ ಮಿತ್ರ' ಮತ್ತು 'ಸೈಬರ್ ಸಾರಥಿ' ಎಂಬ ಎರಡು AI ಚಾಟ್‌ಬಾಟ್‌ಗಳನ್ನು ಪರಿಚಯಿಸಿದ್ದಾರೆ. ಇವುಗಳು ಚುನಾವಣೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ, ಅರೆಸೇನಾ ಪಡೆಗೆ ಸಹಾಯ ಮಾಡಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಉದ್ದೇಶದಿಂದ ಆರಂಭಿಸಲಾದ ಈ ಎರಡು AI ಚಾಲಿತ ಚಾಟ್‌ಬಾಟ್‌ಗಳು ಇಂಗ್ಲಿಷ್ ಮತ್ತು ಹಿಂದಿ ಎರಡು ಭಾಷೆಯಲ್ಲೂ ಲಭ್ಯ ಇವೆ. ದ್ವಿಭಾಷಾ ಚಾಟ್‌ಬಾಟ್‌ಗಳು ಮುಂಬರುವ ದೆಹಲಿ ಚುನಾವಣೆ 2025 ಯಲ್ಲಿ ಪರಿಣಾಮಕಾರಿ ಕೆಲಸ ಮಾಡಲಿವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಎರಡು AI ಚಾಲಿತ ಚಾಟ್ ಬಾಟ್ ಅಪ್ಲಿಕೇಷನ್‌ಗಳು ಕೇಂದ್ರ ಚುನಾವಣಾ ಆಯೋಗ (ECI) ಹಾಗೂ ರಾಜ್ಯ ಪೊಲೀಸರ ನೀಡುವ ಆದೇಶ, ನಿರ್ಣಾಯಕ ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಸಕಾಲಿಕ ಪ್ರಸರಣವನ್ನು ಖಚಿತಪಡಿಸುತ್ತವೆ. ಹೀಗಾಗಿ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗೆ ಸಕಾಲಕ್ಕೆ ಸಹಾಯಕ್ಕೆ ಬರುತ್ತವೆ ಎಂದು ಅಪ್ಲಿಕೇಷನ್‌ಗಳ ವಿಶೇಷತೆಗಳನ್ನು ಅವರು ತಿಳಿಸಿದರು.
'ಚುನವ್ ಮಿತ್ರ' ಚಾಟ್‌ಬಾಟ್ ಚುನಾವಣೆ ವೇಳೆ ಹೊರಡಿಸುವ ನಿಯಮಗಳು, ನಿರ್ದೇಶನಗಳನ್ನು ಒದಗಿಸುತ್ತದೆ. ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಸೂಚನೆಗಳಿಗೆ ರಿಯಲ್ ಟೈಮ್ ಪ್ರವೇಶ ಒದಗಿಸುತ್ತದೆ. ಇನ್ನೂ 'ಸೈಬರ್ ಸಾರಥಿ' ಸೈಬರ್ ಸುರಕ್ಷತೆಗೆ ಒತ್ತು ನೀಡುತ್ತದೆ. ಸೈಬರ್ ರಕ್ಷಣೆಗೆ ಕೇಂದ್ರೀಕರಿಯೇ ಈ ಸೈಬರ್ ಸಾರಥಿ ಸಿದ್ಧಪಡಿಸಲಾಗಿದೆ.
ಚುನಾವಣೆ ಸಂಬಂಧಿ ಅಗತ್ಯ ಮಾಹಿತಿಯನ್ನು ರಕ್ಷಿಸುತ್ತದೆ. ನಿಯೋಜಿತ ಸಿಬ್ಬಂದಿಯನ್ನು ಎಲ್ಲ ಕಾಲದಲ್ಲೂ ಸಜ್ಜುಗೊಳಿಸುತ್ತದೆ. ಯಾವುದೇ ಚುನಾವಣೆ ಮಾಹಿತಿ ಸೋರಿಕೆ ಆಗದಂತೆ ನೋಡಿಕೊಳ್ಳುತ್ತದೆ. ದೆಹಲಿಯ ಚುನಾವಣೆಯ ಪೂರ್ಣ ಡೇಟಾಬೇಸ್ ಇದರಲ್ಲಿರುತ್ತದೆ ಎಂದರೆ ತಪ್ಪಾಗಲಾರದು.
ಈ ಎರಡು ಅಪ್ಲಿಕೇಶನ್‌ಗಳನ್ನು ಕ್ಷೇತ್ರದ ಅಧಿಕಾರಿಗಳು ಸೂಕ್ತ ಲಿಂಕ್ ಅಥವಾ QR ಕೋಡ್ ಮೂಲಕ ಪ್ರವೇಶಿಸಬಹುದು. ಇವೆರಡು ಬಾಟ್‌ಬಾರ್ಟ್ ಬಳಕೆದಾರ ಸ್ನೇಹಿಯಾಗಿವೆ. ಸರಳ ವಿನ್ಯಾಸ ಹೊಂದಿವೆ. ಎಲ್ಲ ಶ್ರೇಣಿಯ ಅಧಿಕಾರಿ, ಸಿಬ್ಬಂದಿಗೆ ನೆರವು ಒದಗಿಸುತ್ತದೆ. ಇವೆರಡು ಈ ಬಾರಿ ಚುನಾವಣೆಯಲ್ಲಿ ವಿಶೇಷತೆ ಪಡೆಯಲಿವೆ. ಸಗಮ ಚುನಾವಣಾ ನಿರ್ವಹಣೆಗೆ ಸಹಯಾವಾಗಲಿವೆ ಎಂದು ರಾಜ್ಯ ಪೊಲೀಸ್ ಆಯುಕ್ತ ಸಂಜಯ್ ಅರೋರಾ ವಿವರಿಸಿದರು.
ದೆಹಲಿಯ ಎಲ್ಲ 70 ವಿಧಾನಸಭಾ ಚುನಾವಣೆಗಳಿಗೆ ಫೆಬ್ರವರಿ 05 ರಂದು ಮತದಾನ ನಡೆಯಲಿದೆ. ನಂತರ ಫೆಬ್ರವರಿ 08ರಂದು ಮತದಾನ ನಡೆಯಲಿದೆ.












Click it and Unblock the Notifications