ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯುಷ್ಮಾನ್ ಭಾರತ್ ನಕಲಿ ವೆಬ್ ಸೈಟ್ ಬಗ್ಗೆ ಎಚ್ಚರ!

|
Google Oneindia Kannada News

ನವದೆಹಲಿ, ಜೂನ್ 2: ಆಯುಷ್ಮಾನ್ ಯೋಜನೆ ಕುರಿತಂತೆ ಫಲಾನುಭವಿಗಳು ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಪಾಲಿನ ಮೊತ್ತ ಪಡೆಯಿರಿ ಎಂಬ ವಾಟ್ಸಾಪ್ ಲಿಂಕ್ ಗಳು, ನಕಲಿ ವೆಬ್ ಸೈಟ್ ಜಾಲವನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ದೆಹಲಿ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು, ನಕಲಿ ಆಯುಷ್ಮಾನ್ ಯೋಜನಾ ವೆಬ್ ತಾಣದ ಮೂಲಕ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ್ದು, ಸಂಬಂಧಪಟ್ಟವರನ್ನು ಬಂಧಿಸಿದ್ದಾರೆ.

ಆಯುಷ್ಮಾನ್ ಭಾರತ್ ಅಥವಾ ಮೋದಿಕೇರ್ ಎಂದರೇನು?ಆಯುಷ್ಮಾನ್ ಭಾರತ್ ಅಥವಾ ಮೋದಿಕೇರ್ ಎಂದರೇನು?

ವಾಟ್ಸಾಪ್ ನಲ್ಲಿ ಬಂದಿರುವ ಆಯುಷ್ಮಾನ್ ಯೋಜನಾ ವೆಬ್ ಸೈಟ್ ಲಿಂಕ್ ನಕಲಿಯಾಗಿದೆ. ಈ ರೀತಿ ಯಾವುದೇ ವೈಯಕ್ತಿಕ ಸಂದೇಶವನ್ನು ಇಲಾಖೆಯಿಂದ ಕಳಿಸಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Delhi Police bust fake Ayushman Yojana website

Ayushman-yojana ಡಾಟ್ ಆರ್ಗ್ ಎಂಬ ಹೆಸರಿನ ವೆಬ್ ಸೈಟ್ ಲಿಂಕ್ ಜೊತೆಗೆ ಸಂದೇಶ ಕಳಿಸಲಾಗುತ್ತಿದೆ. ಆದರೆ, ಇದು ನಕಲಿ ವೆಬ್ ತಾಣವಾಗಿದೆ. ಆಯುಷ್ಮಾನ್ ಯೋಜನೆ ಬಗ್ಗೆ ಯಾವುದೇ ಅಪ್ಡೇಟ್ ಇದ್ದರೆ pmjay.gov.in ಮಾತ್ರ ಅಧಿಕೃತ ವೆಬ್ ಸೈಟ್ ಆಗಿದ್ದು, ಬೇರೆ ಯಾವುದೇ ಸೈಟ್ ಯುಆರ್ ಎಲ್ ಬಳಸಬೇಡಿ ಎಂದು ಎಚ್ಚರಿಸಲಾಗಿದೆ.

ಸರ್ಕಾರಿ ವೆಬ್ ತಾಣಗಳನ್ನು ದುಷ್ಕೃತ್ಯಕ್ಕಾಗಿ ಬಳಸುತ್ತಿರುವುದು ಇದು ಎರಡನೆ ಬಾರಿಯಾಗಿದೆ. ಅಧಿಕೃತ ವೆಬ್ ತಾಣ ಬಿಟ್ಟರೆ ಬೇರೆ ಯಾವುದೇ ಮೂಲದಿಂದ ಬರುವ ಯಾವ ಸಂದೇಶವನ್ನು ನಂಬಬೇಡಿ ಹಾಗೂ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ ಎಂದು ಇಲಾಖೆ ಹೇಳಿದೆ.

English summary
The cyber cell of the Delhi Police has busted a fraud by a fake website relating to Ayushman Yojana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X