ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿಯಲ್ಲಿ ಆಪ್ V/s ಬಿಜೆಪಿ ನಡುವೆ 'ಕಸ'ದ ಕಿತ್ತಾಟ!

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ಗುಜರಾತ್‌ನಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೂ ಪೂರ್ವದಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಪಾಲಿಕೆ ಚುನಾವಣೆಯ ಬಗ್ಗೆ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ತೆಲೆ ಕೆಡಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ನವದೆಹಲಿ ಮುನ್ಸಿಪಲ್ ಚುನಾವಣೆಯ ಹಿನ್ನೆಲೆ ಬಿಜೆಪಿ ಮತ್ತು ಆಪ್ ನಡುವೆ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಫ್ಲ್ಯಾಶ್‌ಪಾಯಿಂಟ್ ದೆಹಲಿಯ ಸಂಸ್ಕರಿಸದ ತ್ಯಾಜ್ಯವಾಗಿದೆ, ಇದನ್ನು ಪ್ರಸ್ತುತ ಗಾಜಿಪುರ, ಭಾಲ್ಸ್ವಾ ಮತ್ತು ಓಖ್ಲಾದಲ್ಲಿ ಸುರಿಯಲಾಗುತ್ತಿದೆ. ಚುನಾವಣಾ ಕಣದಲ್ಲಿರುವ ರಾಜ್ಯಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತನ್ನ ಕೆಲಸವನ್ನು ಪ್ರದರ್ಶಿಸುತ್ತಿರುವ ಎಎಪಿ, ಕಸ ವಿಲೇವಾರಿ ವಿಷಯದಲ್ಲಿ ಸಾಧನೆಯನ್ನು ಪುನರಾವರ್ತಿಸಬಹುದು ಎಂದು ಘೋಷಿಸಿದೆ.

ಸಮಾಜವಾದಿ ಸಿದ್ಧಾಂತಗಳನ್ನು ಗಾಳಿಗೆ ತೂರಿದ ನಿತೀಶ್, ಲಾಲೂ: ಅಮಿತ್ ಶಾಸಮಾಜವಾದಿ ಸಿದ್ಧಾಂತಗಳನ್ನು ಗಾಳಿಗೆ ತೂರಿದ ನಿತೀಶ್, ಲಾಲೂ: ಅಮಿತ್ ಶಾ

ಇದರ ಬೆನ್ನಲ್ಲೇ ತುಘಲಕಾಬಾದ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ ನಗರದ ನಾಲ್ಕನೇ ತ್ಯಾಜ್ಯದಿಂದ ಇಂಧನ ಯೋಜನೆಯು ಮತ್ತೊಂದು ಮಾತಿನ ಸಮರಕ್ಕೆ ನಾಂದಿ ಹಾಡಿದೆ. 2025 ರ ವೇಳೆಗೆ ಕಸ ಮುಕ್ತ ದೆಹಲಿಯ ಭರವಸೆಯನ್ನು ನೀಡಿದ ಸಚಿವ ಅಮಿತ್ ಶಾ, ದೆಹಲಿಯನ್ನು "ಎಎಪಿ ನಿರ್ಭರ್" ಮತ್ತು "ಆತ್ಮನಿರ್ಭರ್ (ಸ್ವಾವಲಂಬಿ)" ಎಂದು ಆಯ್ಕೆ ಮಾಡಿಕೊಳ್ಳಲು ಉತ್ತೇಜಿಸಿದ್ದಾರೆ.

Delhi people will choose between being AAP Nirbhar or Aatmanirbhar, Says Minister Amit Shah

ನಮ್ಮ ದೆಹಲಿ ಸುಂದರ ಎಂದ ಅಮಿತ್ ಶಾ:

ಕೇಜ್ರಿವಾಲ್ ಜೀ ನಡೆದುಕೊಂಡ ರೀತಿ, ಪ್ರಜಾಪ್ರಭುತ್ವದ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸುವ ಸಮಯ ಬಂದಿದೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ ಅವರು, "ಇಂದು ದೆಹಲಿಯನ್ನು ಸ್ವಚ್ಛಗೊಳಿಸಲು ಒಂದು ದೊಡ್ಡ ಹೆಜ್ಜೆ ಇಡಲಾಗಿದೆ. 2025ರ ಮೊದಲು ದೆಹಲಿಯ ಎಲ್ಲಾ ದಿನನಿತ್ಯದ ಕಸವನ್ನು ವಿಲೇವಾರಿ ಮಾಡಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೇವೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ಭವಿಷ್ಯದಲ್ಲಿ, ಈ ಬೃಹತ್ ಕಸದ ತೊಟ್ಟಿಗಳು, ಕಸದ ಪರ್ವತಗಳು ಇನ್ನು ಮುಂದೆ ಕಾಣಿಸುವುದಿಲ್ಲ. ನಮ್ಮ ದೆಹಲಿ ಸುಂದರವಾಗಿರುತ್ತದೆ,".

ಅಮಿತ್ ಶಾಗೆ ಸಿಎಂ ಕೇಜ್ರಿವಾಲ್ ತಿರುಗೇಟು:

ಕೇಂದ್ರ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿರುಗೇಟು ಕೊಟ್ಟಿದ್ದಾರೆ. "15 ವರ್ಷಗಳಲ್ಲಿ ನೀವು ಮಾಡಲು ಸಾಧ್ಯವಾಗದ ಕೆಲಸವನ್ನು ಮಾಡಲು ನಿಮಗೆ ಇನ್ನೂ ಮೂರು ವರ್ಷಗಳ ಅಗತ್ಯವಿದೆಯೇ? ನೀವು ಅದನ್ನು ಬಿಡಿ. ದೆಹಲಿಯನ್ನು ಕಸ ಮುಕ್ತ ಮಾಡುವುದು ಹೇಗೆ ಎಂದು ನಾವು ನಿಮಗೆ ತೋರಿಸುತ್ತೇವೆ," ಎಂದು ಹೇಳಿದ್ದಾರೆ.

ಗೆಲುವಿನ ನಿರೀಕ್ಷೆಯಲ್ಲಿ ಆಪ್:

ಕಸದ ದುರುಪಯೋಗವನ್ನು ಖಂಡಿಸಿ ಕೇಜ್ರಿವಾಲ್ ನೇತೃತ್ವದ ಪಕ್ಷವು ಭಲ್ಸ್ವಾ ಲ್ಯಾಂಡ್ಫಿಲ್ ಸೈಟ್ ಬಳಿ ಪ್ರತಿಭಟನೆ ನಡೆಸಿತು. ತಾವು ಅಧಿಕಾರಕ್ಕೆ ಬಂದ ನಂತರ ಕಸದ ಸಮಸ್ಯೆಯನ್ನು ನಿಭಾಯಿಸಲು ವಿವರವಾದ ಯೋಜನೆಯನ್ನು ಹೊಂದಿದೆ ಎಂದು ಎಎಪಿ ಹೇಳಿಕೊಂಡಿದೆ. ದೆಹಲಿಯ ನಾಗರಿಕ ಸಂಸ್ಥೆಗಳನ್ನು ಸತತ ಮೂರು ಅವಧಿಗೆ ಬಿಜೆಪಿ ನಿರ್ವಹಿಸುತ್ತಿದೆ. ದೆಹಲಿಯಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಭಾರಿ ಜನಾದೇಶದಿಂದ ಗೆದ್ದಿರುವ ಎಎಪಿ, ಈ ಬಾರಿಯ ನಾಗರಿಕ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ.

ದೆಹಲಿಯಲ್ಲಿ ಆಪ್ V/s ಬಿಜೆಪಿ ಫೈಟ್:

ಬಿಜೆಪಿಯ ದೊಡ್ಡ ಸವಾಲಾಗಿ ಎಎಪಿ ಹೊರಹೊಮ್ಮಿರುವ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಯೊಂದಿಗೆ ದೆಹಲಿ ನಾಗರಿಕ ಚುನಾವಣೆಗಳು ಹೊಂದಿಕೆಯಾಗಬಹುದು ಎಂಬ ಗುಸುಗುಸು ಶುರುವಾಗಿದೆ. ಮಾರ್ಚ್‌ನಲ್ಲಿ ನಿಗದಿಯಾಗಿದ್ದ ದೆಹಲಿಯ ನಾಗರಿಕ ಚುನಾವಣೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಕೇಂದ್ರವು ಮೂರು ನಾಗರಿಕ ಸಂಸ್ಥೆಗಳನ್ನು ವಿಲೀನಗೊಳಿಸಲು ಬಯಸುತ್ತದೆ ಎಂದು ಹೇಳಿತು.

English summary
Delhi people will choose between being AAP Nirbhar or Aatmanirbhar, Says Minister Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X