ಇಂದು ದೆಹಲಿ ಮುಖ್ಯಮಂತ್ರಿ ಆಯ್ಕೆ, ನಾಳೆ ಪ್ರಮಾಣ ವಚನ, ಯಾರಾಗ್ತಾರೆ ಹೊಸ ಸಿಎಂ?

ನವದೆಹಲಿ, ಫೆಬ್ರವರಿ 19: ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಇಂದು ಎರಡೂವರೆಗೆ ದಶಕಗಳ ಬಳಿಕ ಬಿಜೆಪಿಯು ದೆಹಲಿಯಲ್ಲಿ ಅಸ್ತಿತ್ವಕ್ಕೆ ಬರಲಿದೆ. ಇಂದು ಬುಧವಾರ (ಜನವರಿ 19) ಬಿಜೆಪಿಯಿಂದ ಮಹತ್ವದ ಸುದ್ದಿಗೋಷ್ಠಿ ನಡೆಯಲಿದೆ. ಇಂದೇ ನೂತನ ಮುಖ್ಯಮಂತ್ರಿ ಯಾರೆಂಬುದು ತೀರ್ಮಾನವಾಗಲಿದೆ. ನಾಳೆ ಜನವರಿ 20ರಂದು ಹೊಸ ಸಿಎಂ ಪ್ರಮಾಣ ವಚನ ನಡೆಯಲಿದೆ. ಜೊತೆಗೆ ಇಬ್ಬರು ಉಪಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಹೌದು, ಬಹುದಿನಗಳ ದೆಹಲಿ ಸಿಎಂ ಯಾರೆಂಬ ನಿರೀಕ್ಷೆಗೆ ಇಂದು ತೆರೆ ಬೀಳಲಿದೆ. ದೆಹಲಿ ಬಿಜೆಪಿಯಲ್ಲಿ ಅನೇಕರು ಸಿಎಂ ರೇಸಿನಲ್ಲಿದ್ದರು. ಸಿಎಂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಇದೀಗ ಒಬ್ಬರನ್ನು ಸಿಎಂ ಮಾಡುವ ನಿಟ್ಟಿನಲ್ಲಿ ವರಿಷ್ಠರು ಯಶಸ್ವಿಯಾಗಲಿದ್ದಾರೆ. ಇಂದು ಬಿಜೆಪಿಯ ವಿವಿಧ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧವಾಗಲಿದ್ದಾರೆ. ಆದರೆ ಈವರೆಗೆ ಮುಖ್ಯಮಂತ್ರಿಯಾಗಿ ಪಕ್ಷ ಯಾರನ್ನು ಆಯ್ಕೆ ಮಾಡಲಿದೆ ಎಂಬ ಸಣ್ಣ ಗುಟ್ಟನ್ನು, ಸುಳಿವನ್ನು ಬಹಿರಂಗಪಡಿಸಿಲ್ಲ. ಬದಲಾಗಿ ಸಿಎಂ ಆಯ್ಕೆ ವರೆಗೂ ಸಸ್ಪೆನ್ಸ್ ಕಾದುಕೊಂಡು ಬರಲಾಗುತ್ತಿದೆ.

Delhi New Govt Form Today BJP Candidate Taking Oath as A New CM

ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಪಕ್ಷ ಮಾತ್ರವಲ್ಲದೇ ಬಿಜೆಪಿಯ ಕೆಲವು ಕಾರ್ಯಕರ್ತರಲ್ಲೂ ದೆಹಲಿ ಮುಂದಿನ ಸಿಎಂ ಯಾರು, ದೆಹಲಿಯ ಆಡಳಿತ ನೊಗ ಯಾರ ಹೆಗಲಿಗೆ ಬೀಳಿದೆ ಎಂಬುದನ್ನು ಕಾತರರಿಂದ ಕಾಯುತ್ತಿದ್ದಾರೆ. ಎಎಪಿಯು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ವಿಪಕ್ಷ ಸ್ಥಾನ ಅಲಂಕರಿಸಲಿದೆ.

ಬಿಜೆಪಿಯು 27 ವರ್ಷಗಳ ಬಳಿಕ ಅಧಿಕಾರ ಬಂದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನೂ ಸಿಎಂ ರೇಸಿನಲ್ಲಿ ಯಾರೆಲ್ಲ ಇದ್ದಾರೆ ಎಂದು ನೋಡುವುದಾದರೆ, ದೆಹಲಿ ಕ್ಷೇತ್ರದಲ್ಲಿ ಎಎಪಿ ಅರವಿಂದ್ ಕೇಜ್ರಿವಾಲ್ ರನ್ನು ಸೋಲಿಸಿದ ಬಿಜೆಪಿ ಪರ್ವೇಶ್ ಶರ್ಮಾ ಅವರು ಸೇರಿದಂತೆ ಅನೇಕರ ಹೆಸರು ಸಿಎಂ ರೇಸಿನಲ್ಲಿ ಮುಂಚೂಣಿಯಲ್ಲಿವೆ.

ನೂತನ ಶಾಸಕರು, ಪ್ರಭಾವಿಗಳು ಆದ ರೇಖಾ ಗುಪ್ತಾ, ಶಿಖಾ ರಾಯ್, ಆಶಿಷ್ ಸೂದ್, ಬಿಜೆಪಿ ರಾಜ್ಯಾಧ್ಯಕ್ಷ ವಿರೇಂದ್ರ ಸಚ್ ದೇವಾ ಸೇರಿ ಹಲವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಎನ್ನಲಾಗಿದೆ. ಇಂದು ಯಾರು ಮುಖ್ಯಮಂತ್ರಿ ಎಂಬುದಕ್ಕೆ ತೆರೆ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+