ದೆಹಲಿ ಪಾಲಿಕೆ ಚುನಾವಣೆ: ಮತದಾರರಿಗೆ ಕೇಜ್ರಿವಾಲ್ ಕೊಟ್ಟ 10 ಆಫರ್

ನವದೆಹಲಿ, ನವೆಂಬರ್ 11: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಮೂರು ದಿನಗಳು ಬಾಕಿ ಇರುವಂತೆ ಪಾಲಿಕೆ ವ್ಯಾಪ್ತಿಯ ಮತದಾರರ ಸೆಳೆಯುವುದಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ.

ನಾಗರಿಕ ಸಂಸ್ಥೆಗಳಲ್ಲಿ ಭ್ರಷ್ಟಾಚಾರಕ್ಕೆ ತಿಲಾಂಜಲಿ ಇಡುವುದು ಸೇರಿದಂತೆ 10 ಭರವಸೆಗಳನ್ನು ನೀಡಿದ್ದಾರೆ. "ನಾವು ಏನು ಹೇಳುತ್ತೇವೆಯೋ ಅದನ್ನು ಮಾಡುತ್ತೇವೆ, ಇತರರು ಕೇವಲ ವಚನ ಪತ್ರವನ್ನು ನೀಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಅವರು ಅದನ್ನು ಸಂಕಲ್ಪ ಪತ್ರ ಎಂದು ಕರೆಯುತ್ತಾರೆ. ಚುನಾವಣೆಯ ನಂತರ ಅವರು ತಮ್ಮ ಭರವಸೆಗಳು ಮತ್ತು ಪ್ರಣಾಳಿಕೆಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ," ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, "ಎಂಸಿಡಿಗೆ ಹಣ ನೀಡುತ್ತಿಲ್ಲ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಕೇಂದ್ರವು ರಾಜ್ಯ ಸರ್ಕಾರ ಹಣ ನೀಡುತ್ತಿಲ್ಲ ಎಂದು ಆರೋಪಿಸಿದೆ," ಎಂದು ಲೇವಡಿ ಮಾಡಿದರು. ಅರವಿಂದ್ ಕೇಜ್ರಿವಾಲ್ ನೀಡಿರುವ ಭರವಸೆಗಳೇನು?, ದೆಹಲಿ ಮತದಾರರಿಗಾಗಿ ಅವರು ನೀಡಿರುವ ಆಫರ್ ಏನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ರಾಜಧಾನಿಯ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ

ರಾಜಧಾನಿಯ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ

ಭಾರತೀಯ ಜನತಾ ಪಕ್ಷವು ಈ ಮೊದಲು ದೆಹಲಿಯನ್ನು ಕಸಮುಕ್ತಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರದಿಂದ ಹಣವನ್ನು ತರುವುದಾಗಿ ಭರವಸೆ ನೀಡಿತ್ತು. ಆದರೆ ಆ ರೀತಿಯ ಯಾವುದೇ ಕೆಲಸವನ್ನು ಮಾಡಲಿಲ್ಲ. ಬಿಜೆಪಿಯು ದೆಹಲಿಯ ಪಾಲಿಕೆ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕೆ ಆಗುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು. ಇದರ ಮಧ್ಯೆ ಆಪ್ ಪಕ್ಷವು ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ, ರಸ್ತೆಗಳ ದುರಸ್ತಿ ಮತ್ತು ಎಂಸಿಡಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಸುಧಾರಿಸುವುದಾಗಿ ಕೇಜ್ರಿವಾಲ್ ಭರವಸೆ ನೀಡಿದರು.

ಮತದಾರರಿಗೆ ಆಪ್ ಮುಖ್ಯಸ್ಥನ 10 ಭರವಸೆಗಳು

ಮತದಾರರಿಗೆ ಆಪ್ ಮುಖ್ಯಸ್ಥನ 10 ಭರವಸೆಗಳು

ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೆಯ ಅಖಾಡಕ್ಕೆ ಧುಮುಕಿರುವ ಆಮ್ ಆದ್ಮಿ ಪಕ್ಷವು ಬಿಜೆಪಿಗೆ ಸೆಡ್ಡು ಹೊಡೆಯಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಇದರ ಮಧ್ಯೆ ರಾಜಧಾನಿ ಮತದಾರರಿಗೆ ಅರವಿಂದ್ ಕೇಜ್ರಿವಾಲ್ 10 ಭರವಸೆಗಳನ್ನು ನೀಡಿದ್ದಾರೆ. ಆ ಭರವಸೆಗಳು ಯಾವುವು ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಅರವಿಂದ್ ಕೇಜ್ರಿವಾಲ್ ನೀಡಿದ 10 ಭರವಸೆ:

* ನಗರವನ್ನು ಸುಂದರಗೊಳಿಸುವುದು

* ಭೂಕುಸಿತಗಳನ್ನು ತೆಗೆದುಹಾಕುವುದು

* ಪಾರ್ಕಿಂಗ್ ಸಮಸ್ಯೆಗೆ ಪರಿಹಾರ

* ದೆಹಲಿಯನ್ನು ಬೀದಿ ಪ್ರಾಣಿಗಳಿಂದ ಮುಕ್ತಗೊಳಿಸುವುದು

* ಎಂಸಿಡಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಸುಧಾರಿಸಲಾಗುವುದು

* ಉದ್ಯಾನವನಗಳನ್ನು ಸುಧಾರಿಸಲಾಗುವುದು ಮತ್ತು ದೆಹಲಿ ಉದ್ಯಾನವನಗಳ ನಗರವಾಗಲಿದೆ

* ತಾತ್ಕಾಲಿಕ ಕಾರ್ಮಿಕರನ್ನು ಕಾಯಂಗೊಳಿಸಲಾಗುವುದು, ವೇತನವನ್ನು ನಿಯಮಿತವಾಗಿ ನೀಡಲಾಗುವುದು

* ಈಗ ವ್ಯಾಪಾರಿಗಳಿಗೆ ಆನ್‌ಲೈನ್‌ನಲ್ಲಿ ಪರವಾನಗಿ ನೀಡಲಾಗುವುದು. "ಇನ್ಸ್‌ಪೆಕ್ಟರ್ ರಾಜ್" ಕೊನೆಗೊಳ್ಳುತ್ತದೆ

* ಬೀದಿ ವ್ಯಾಪಾರಿಗಳಿಗಾಗಿ ಸ್ವಚ್ಛ ಮಾರಾಟ ವಲಯಗಳನ್ನು ಮಾಡಲಾಗುವುದು

ರಾಜಧಾನಿ ಮಹಾನಗರ ಪಾಲಿಕೆಗಾಗಿ ತ್ರಿಕೋನ ಸ್ಪರ್ಧೆ

ರಾಜಧಾನಿ ಮಹಾನಗರ ಪಾಲಿಕೆಗಾಗಿ ತ್ರಿಕೋನ ಸ್ಪರ್ಧೆ

ನವದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ರಾಜಕೀಯ ಪಕ್ಷಗಳು ಪೈಪೋಟಿಗೆ ಇಳಿದಿವೆ. ರಾಷ್ಟ್ರೀಯ ಪಕ್ಷಗಳ ಎದುರು ಆಮ್ ಆದ್ಮಿ ಪಕ್ಷ ಕೂಡ ತೊಡೆ ತಟ್ಟಿ ನಿಂತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ನವದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಪ್ ಪಕ್ಷಕ್ಕೆ ಚುನಾವಣೆಯು ಪ್ರತಿಷ್ಠೆಯಾಗಿದ್ದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಮರ್ಯಾದೆ ಪ್ರಶ್ನೆಯಾಗಿದೆ. ಅದೇ ರೀತಿ ಆಪ್ ಮತ್ತು ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಕೂಡ ಕಚ್ಚೆ ಕಟ್ಟಿಕೊಂಡು ನಿಂತಿದೆ.

ದೆಹಲಿ ಮಹಾನಗರ ಪಾಲಿಕೆಗೆ ಯಾವಾಗ ಚುನಾವಣೆ

ದೆಹಲಿ ಮಹಾನಗರ ಪಾಲಿಕೆಗೆ ಯಾವಾಗ ಚುನಾವಣೆ

ನವದೆಹಲಿ ಮಹಾನಗರ ಪಾಲಿಕೆಯ 250 ಕ್ಷೇತ್ರಗಳಿಗೆ ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 4ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 7ರಂದು ಮತ ಎಣಿಕೆ ಕಾರ್ಯ ನಡೆಯುತ್ತದೆ. ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದ 2012ರಲ್ಲಿ ದೆಹಲಿ ಪಾಲಿಕೆಯನ್ನು ಉತ್ತರ, ದಕ್ಷಿಣ ಹಾಗೂ ಪೂರ್ವ ನಿಗಮಗಳಾಗಿ ವಿಭಜನೆ ಮಾಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+