• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಸ್ಕೋಗೆ ಹೊರಟಿದ್ದ ವಿಮಾನ ವಾಪಸ್; ತನಿಖೆಗೆ ಆದೇಶ

|

ನವದೆಹಲಿ, ಮೇ 30 : ದೆಹಲಿ-ಮಾಸ್ಕೋ ವಿಮಾನ ಮಾರ್ಗ ಮಧ್ಯೆಯೇ ವಾಪಸ್ ಆದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಒಂದೇ ಭಾರತ್ ಮಿಷನ್ ಅಡಿ ಭಾರತೀಯರನ್ನು ಕರೆತರಲು ಹೋಗುತ್ತಿದ್ದ ವಿಮಾನದ ಪೈಲೆಟ್‌ಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು.

ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ಎ320 ವಿಮಾನ ವಾಪಸ್ ಆದ ಬಗ್ಗೆ ತನಿಖೆಗೆ ಆದೇಶ ನೀಡಿದೆ. ವಿಮಾನದ ಪೈಲೆಟ್‌ನ ಕೋವಿಡ್ - 19 ಪರೀಕ್ಷೆ ವರದಿ ಬರುವ ಮೊದಲೇ ವಿದೇಶಕ್ಕೆ ತೆರಳಲು ಅನುಮತಿ ಸಿಕ್ಕಿದ್ದು ಹೇಗೆ? ಎಂದು ತನಿಖೆ ನಡೆಯಲಿದೆ.

ದೆಹಲಿಯಿಂದ ಮಾಸ್ಕೋಗೆ ತೆರಳುತ್ತಿದ್ದ ವಿಮಾನ ಅರ್ಧಕ್ಕೆ ವಾಪಸ್

ದೆಹಲಿಯಿಂದ ಮಾಸ್ಕೋಗೆ ಭಾರತೀಯರನ್ನು ಕರೆತರಲು ಹೊರಟಿದ್ದ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಉಜ್ಬೇಕಿಸ್ಥಾನ್ ವಾಯುನೆಲೆ ಬಳಿ ವಿಮಾನ ಇದ್ದಾಗ ಪೈಲೆಟ್‌ಗೆ ಕೋವಿಟ್ - 19 ಸೋಂಕು ಇರುವುದು ಖಚಿತವಾಗಿದ್ದು, ತಕ್ಷಣ ವಿಮಾನವನ್ನು ವಾಪಸ್ ಕರೆಸಿಕೊಳ್ಳಲಾಗಿದೆ.

5 ರಾಜ್ಯಗಳ ವಿಮಾನ, ರೈಲು, ವಾಹನಕ್ಕೆ ನಿರ್ಬಂಧ ಹೇರಿದ ಕರ್ನಾಟಕ

"ಇಬ್ಬರು ಪೈಲೆಟ್‌ಗಳ ಪೈಕಿ ಒಬ್ಬರಿಗೆ ಸೋಂಕು ತಗುಲಿರುವುದು ಖಚಿತವಾದ ತಕ್ಷಣ ವಿಮಾನವನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಶನಿವಾರ ಮಧ್ಯಾಹ್ನ 12.30ಕ್ಕೆ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಿದೆ. ಎಲ್ಲಾ ಸಿಬ್ಬಂದಿಗಳನ್ನು ಕ್ವಾರಂಟೈನ್‌ಗೆ ಕಳಿಸಲಾಗಿದೆ. ಮಾಸ್ಕೋಗೆ ಬೇರೆ ವಿಮಾನ ಕಳಿಸಲಾಗಿದೆ" ಎಂದು ಏರ್ ಇಂಡಿಯಾ ಹೇಳಿದೆ.

ನಾಲ್ಕು ಜನರ ಪ್ರಯಾಣಕ್ಕೆ ಏರ್ ಬಸ್ ಬುಕ್ ಮಾಡಿದ ಉದ್ಯಮಿ!

ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಅಂತರಾಷ್ಟ್ರೀಯ ವಿಮಾನ ಸಂಚಾರ ಸಂಪೂರ್ಣ ರದ್ದಾಗಿದೆ. ಆದರೆ, ವಿದೇಶಿದಲ್ಲಿ ಸಿಲುಕಿರುವ ಭಾರತೀಯರನ್ನು ವಂದೇ ಭಾರತ್ ಮಿಷನ್ ಅಡಿ ವಿಶೇಷ ವಿಮಾನದಲ್ಲಿ ಏರ್ ಇಂಡಿಯಾ ವಾಪಸ್ ಕರೆತರುತ್ತಿದೆ.

English summary
Director General of Civil Aviation ordered for the probe after Delhi-Moscow Air India flight returned midway on May 30, 2020 after pilot found positive for COVID - 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X