• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಿ ವಿರುದ್ಧದ ಕೇಸ್ ವಾಪಸ್ ತೆಗೆದುಕೊಂಡ ಸತ್ಯೇಂದರ್ ಜೈನ್!

|
Google Oneindia Kannada News

ನವದೆಹಲಿ, ನವೆಂಬರ್ 23: ತಿಹಾರ್ ಜೈಲಿನಲ್ಲಿರುವ ಎಎಪಿ ಸಚಿವ ಸತ್ಯೇಂದ್ರ ಜೈನ್ ಅವರು ಸೋಮವಾರ ತಮ್ಮ ಜೈಲಿನ ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಕೋರಿ ದೆಹಲಿ ನ್ಯಾಯಾಲಯದಿಂದ ಸಲ್ಲಿಸಿದ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.

ಸಚಿವ ಸತ್ಯೇಂದರ್ ಜೈನ್ ಪರ ವಕೀಲರು ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಎದುರು ಈ ವಿಷಯದಲ್ಲಿ ಪರಿಹಾರಕ್ಕಾಗಿ ಸೂಕ್ತ ವೇದಿಕೆಗೆ ಹೋಗುವುದಾಗಿ ತಿಳಿಸಿದರು. ತದನಂತರ ನ್ಯಾಯಾಲಯವು ಈ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು.

ನಾನು ಅಜ್ಮಲ್ ಕಸಬ್‌ಗಿಂತ ಕೆಟ್ಟವನಲ್ಲ ಎಂದಿದ್ದೇಕೆ ದೆಹಲಿ ಮಿನಿಸ್ಟರ್!ನಾನು ಅಜ್ಮಲ್ ಕಸಬ್‌ಗಿಂತ ಕೆಟ್ಟವನಲ್ಲ ಎಂದಿದ್ದೇಕೆ ದೆಹಲಿ ಮಿನಿಸ್ಟರ್!

'ನ್ಯಾಯಾಲಯದಲ್ಲಿ ನೀಡಿದ ಭರವಸೆಯ ಹೊರತಾಗಿಯೂ' ರಾಜಕಾರಣಿಯೊಬ್ಬರು ತಿಹಾರ್ ಜೈಲಿನೊಳಗೆ ಮಸಾಜ್ ಮಾಡುವ ಸಿಸಿಟಿವಿ ದೃಶ್ಯಗಳನ್ನು ಇಡಿ ಸೋರಿಕೆ ಮಾಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ತಿಹಾರ್ ಜೈಲಿನಲ್ಲಿ ಜೈನ್ ಮಸಾಜ್ ಪಡೆಯುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಜಾರಿ ನಿರ್ದೇಶನಾಲಯದ ಆರೋಪವೇನು?

ಜಾರಿ ನಿರ್ದೇಶನಾಲಯದ ಆರೋಪವೇನು?

ಈ ಹಿಂದೆ ಜಾಮೀನು ವಿಚಾರಣೆ ವೇಳೆ ತಿಹಾರ್ ಜೈಲಿನೊಳಗೆ ಸಚಿವ ಸತ್ಯೇಂದರ್ ಜೈನ್‌ಗೆ ವಿಶೇಷ ಆತಿಥ್ಯವನ್ನು ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಸಿದ್ದರು. ಈ ಸಂಬಂಧ ಅಫಿಡವಿಟ್‌ಗಳು ಮತ್ತು ವೀಡಿಯೊಗಳ ಯಾವುದೇ ವಿಷಯವನ್ನು ಸೋರಿಕೆ ಮಾಡದಂತೆ ನ್ಯಾಯಾಲಯವು ಈ ಹಿಂದೆ ಇಡಿ ಮತ್ತು ಜೈನ್ ಅವರ ಕಾನೂನು ತಂಡಕ್ಕೆ ಆದೇಶಿಸಿತ್ತು. ಆದಾಗ್ಯೂ, ಮಾಧ್ಯಮಗಳಿಗೆ ಯಾವುದೇ ನಿರ್ಬಂಧವನ್ನು ಹಾಕಲು ಅಥವಾ ಯಾವುದೇ ನಿರ್ದೇಶನವನ್ನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಈ ಪ್ರಕರಣದಲ್ಲಿ ಜೈನ್ ಮತ್ತು ಇತರ ಇಬ್ಬರಿಗೆ ನ್ಯಾಯಾಲಯ ನವೆಂಬರ್ 17ರಂದು ಜಾಮೀನು ನಿರಾಕರಿಸಿತ್ತು.

ಜೈನ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು

ಜೈನ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು

2017ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಜೈನ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದ್ದನ್ನು ಆಧರಿಸಿ ಫೆಡರಲ್ ಏಜೆನ್ಸಿ ಆರೋಪಿಗಳನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿತ್ತು. ಜೈನ್ ಅವರಿಗೆ ನಂಟು ಹೊಂದಿರುವ ನಾಲ್ಕು ಕಂಪನಿಗಳ ಮೂಲಕ ಹಣ ಲಪಟಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

28 ಕೆಜಿ ಕಡಿಮೆ ಆಗಿದ್ದೀನಿ ಎಂದಿದ್ದ ಸಚಿವ ಜೈನ್

28 ಕೆಜಿ ಕಡಿಮೆ ಆಗಿದ್ದೀನಿ ಎಂದಿದ್ದ ಸಚಿವ ಜೈನ್

ಈ ಹಿಂದೆ ಸಚಿವ ಸತ್ಯೇಂದರ್ ಜೈನ್ ವಿಚಾರಣಾ ನ್ಯಾಯಾಲಯಕ್ಕೆ ಈ ಬಗ್ಗೆ ದೂರು ಸಲ್ಲಿಸಿದ್ದು, ಜೈಲಿನಲ್ಲಿ "ಸರಿಯಾದ" ಆಹಾರ ಮತ್ತು ವೈದ್ಯಕೀಯ ಚಿಕಿತ್ಸೆಯು ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಅವರು ಕಸ್ಟಡಿಯಲ್ಲಿ ಸುಮಾರು 28 ಕೆಜಿ ತೂಕ ಕಡಿಮೆಯಾಗಿದ್ದಾರೆ ಎಂದು ಅವರ ಪರ ಹಿರಿಯ ವಕೀಲ ರಾಹುಲ್ ಮೆಹ್ರಾ ಉಲ್ಲೇಖಿಸಿದ್ದರು.

ತಮ್ಮ ಜೈಲಿನ ಕೊಠಡಿಯೊಳಗಿನ ದೃಶ್ಯಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಆರೋಪದ ಮೇಲೆ ಕೇಂದ್ರ ತನಿಖಾ ಸಂಸ್ಥೆ ಇಡಿ ವಿರುದ್ಧ ಸತ್ಯೇಂದ್ರ ಜೈನ್ ಅವರು ಸಲ್ಲಿಸಿದ ಅವಹೇಳನದ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ವಿಚಾರಣೆ ನಡೆಸಿದರು. ಈ ಸಂಬಂಧ ಹೆಚ್ಚಿನ ವಾದ-ಪ್ರತಿವಾದವನ್ನು ಆಲಿಸುವುದಕ್ಕಾಗಿ ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿಕೆ ಮಾಡಿತು.

ಒಂದು ವಿಡಿಯೋ ಲೀಕ್ ಮಾಡಿಲ್ಲ ಎಂದಿದ್ದ ಇಡಿ

ಒಂದು ವಿಡಿಯೋ ಲೀಕ್ ಮಾಡಿಲ್ಲ ಎಂದಿದ್ದ ಇಡಿ

ಜೂನ್‌ನಿಂದ ಸತ್ಯೇಂದರ್ ಜೈನ್ ಅನ್ನು ಜೈಲಿನಲ್ಲಿಡಲು ಕೇಂದ್ರ ಬಿಜೆಪಿ ಸರ್ಕಾರವು ಕೇಂದ್ರೀಯ ಸಂಸ್ಥೆ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಎಪಿ ಪದೇ ಪದೇ ಹೇಳುತ್ತಿದೆ. ಆದರೆ "ಫಿಸಿಯೋಥೆರಪಿ" ಸಂಬಂಧಿಸಿದ ವಿಡಿಯೋದಿಂದ ತೀವ್ರವಾಗಿ ಮುಖಭಂಗವನ್ನು ಎದುರಿಸುವಂತಾಗಿದೆ. ಇದರ ಮಧ್ಯೆ "ಮಸಾಜ್" ಮಾಡಿದವನು ಒಬ್ಬ ವಿಚಾರಣಾಧೀನ ಕೈದಿಯಾಗಿದ್ದು, ಅತ್ಯಾಚಾರದ ಆರೋಪಿ ಎಂದು ಮೂಲಗಳು ತಿಳಿಸಿವೆ.

ಸತ್ಯೇಂದ್ರ ಜೈನ್ ಅವರಿಗೆ ಫಿಸಿಯೋಥೆರಪಿ ಮಾಡುವಂತೆ ಸಲಹೆ ನೀಡಿದ್ದರಿಂದ ಅದನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಇಡಿ ವಕೀಲ ಜೊಹೈಬ್ ಹೊಸೈನ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಅಲ್ಲದೇ ಕೇಂದ್ರೀಯ ಸಂಸ್ಥೆಯಿಂದ "ಒಂದೇ ಒಂದು ಸೋರಿಕೆಯೂ ಆಗಿಲ್ಲ," ಎಂದು ಅವರು ಹೇಳಿದರು. ಜೈನ್ ಅವರ ತಂಡಕ್ಕೆ ಪೆನ್ ಡ್ರೈವ್‌ನಲ್ಲಿ ಸೆರೆಮನೆಯ ದೃಶ್ಯಾವಳಿಗಳನ್ನು ನೀಡಲಾಗಿದೆ ಎಂದು ಇಡಿ ಹೇಳಿದೆ.

ಇಡಿ ಪ್ರಕರಣದ ನೇತೃತ್ವ ವಹಿಸಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ವೈಯಕ್ತಿಕ ಕಾರಣಗಳಿಗಾಗಿ ಹಾಜರಾಗದ ಕಾರಣ ನ್ಯಾಯಾಲಯವು ಪ್ರಕರಣವನ್ನು ಮುಂದೂಡಿದೆ.

English summary
Delhi Minister Satyendar Jain withdraws plea for contempt action against ED.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X