ವಿಶ್ವದ ಅತ್ಯಂತ ನಕಾರಾತ್ಮಕ ಪಕ್ಷವನ್ನು ದೆಹಲಿ ಜನ ಸೋಲಿಸಿದ್ದಾರೆ: ಬಿಜೆಪಿ ಕುರಿತು ಮನೀಶ್‌ ಸಿಸೋಡಿಯಾ ಹೇಳಿಕೆ

ನವದೆಹಲಿ, ಡಿಸೆಂಬರ್‌ 07: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಭರ್ಜರಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಎಎಪಿ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಗೆಲುವನ್ನು ಸ್ವಾಗತಿಸಿರುವ ಎಎಪಿ ನಾಯಕರು ದೆಹಲಿ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ, 'ಇದು ಕೇವಲ ಗೆಲುವಲ್ಲ, ದೊಡ್ಡ ಜವಾಬ್ದಾರಿ' ಎಂದು ಹೇಳಿದ್ದಾರೆ.

'ದೆಹಲಿಯ ಎಂಸಿಡಿ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ನಂಬಿದ್ದಕ್ಕಾಗಿ ನಾವು ದೆಹಲಿಯ ಜನರಿಗೆ ಧನ್ಯವಾದಗಳನ್ನು ಹೇಳುತ್ತೇವೆ. ವಿಶ್ವದ ಅತಿದೊಡ್ಡ ಹಾಗೂ ಅತ್ಯಂತ ನಕಾರಾತ್ಮಕ ಪಕ್ಷವನ್ನು ಜನರು ಸೋಲಿಸಿದ್ದಾರೆ. ಪ್ರಾಮಾಣಿಕ ಅರವಿಂದ್ ಕೇಜ್ರಿವಾಲ್ ಅವರನ್ನು ಗೆಲ್ಲಿಸಿದ್ದಾರೆ' ಎಂದು ತಿಳಿಸಿದ್ದಾರೆ.

Delhi MCD Election Results Manish Sisodia Raghav Chadda Reaction AAP

ಎಎಪಿ ಗೆಲುವನ್ನು ಸ್ವಾಗತಿಸಿರುವ ರಾಜ್ಯಸಭಾ ಸದಸ್ಯ ರಾಘವ್‌ ಚಡ್ಡಾ, 'ಧನ್ಯವಾದಗಳು, ದೆಹಲಿ! ಎಂಸಿಡಿ ಚುನಾವಣೆಯಲ್ಲಿ ಎಎಪಿ ಗೆಲುವು ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವ ಮತ್ತು ದೂರದೃಷ್ಟಿಯ ಫಲವಾದಿಗೆ. ಇದು ನಿಮ್ಮ ನಂಬಿಕೆಯ ಪ್ರತಿಬಿಂಬವಾಗಿದೆ. ತಮ್ಮ ನಿರಾಸಕ್ತಿ, ಸುಳ್ಳು ಮತ್ತು ಕೆಸರೆರಚಾಟದ ರಾಜಕೀಯದಿಂದ ದೆಹಲಿಯನ್ನು ನಾಶಮಾಡಲು ಪ್ರಯತ್ನಿಸಿದವರ ವಿರುದ್ಧ ನಿಮ್ಮ ವಿಜಯವಾಗಿದೆ. ಸ್ವಚ್ಛವಾದ, ಹಸಿರಿನಿಂದ ಕೂಡಿದ ದೆಹಲಿ ನಿಮ್ಮ ಮುಂದೆ ಕಾಣಿಸಲಿದೆ' ಎಂದು ಹೇಳಿದ್ದಾರೆ.

ಮೂರು ಮುನಿಸಿಪಲ್ ಸಂಸ್ಥೆಗಳನ್ನು ವಿಲೀನಗೊಳಿಸಿ ಒಂದನ್ನು ರೂಪಿಸಿದ ನಂತರ ಮತ್ತು ವಾರ್ಡ್‌ಗಳನ್ನು ಮರುವಿನ್ಯಾಸಗೊಳಿಸಲಾಗಿತ್ತು. ಅವುಗಳ ಸಂಖ್ಯೆಯನ್ನು 272 ರಿಂದ 250 ಕ್ಕೆ ಇಳಿಸಿದ ನಂತರ ದೆಹಲಿಯಲ್ಲಿ ಇದು ಮೊದಲ ಚುನಾವಣೆಯಾಗಿದೆ.

Delhi MCD Election Results Manish Sisodia Raghav Chadda Reaction AAP

ಎಎಪಿ 136 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದರೆ, ಬಿಜೆಪಿ 100 ಸ್ಥಾನ ಗಳಿಸಿದೆ. ಜೊತೆಗೆ ಕಾಂಗ್ರೆಸ್ ಹತ್ತು ವಾರ್ಡ್‌ಗಳನ್ನು ಗೆದ್ದು ಮೂರನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+