ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Delhi MCD Election Results: ಸ್ಪಷ್ಟ ಬಹುಮತದತ್ತ ಆಮ್ ಆದ್ಮಿ ಪಕ್ಷ- ಕಾರ್ಯಕರ್ತರ ಸಂಭ್ರಮ

|
Google Oneindia Kannada News

ದೆಹಲಿ ಡಿಸೆಂಬರ್ 7: ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಇನ್ನೇನು ಮುಕ್ತಾಯದ ಹಂತ ತಲುಪುತ್ತಿದ್ದು ಸ್ಪಷ್ಟ ಬಹುಮತದತ್ತ ಆಮ್ ಆದ್ಮಿ ಪಕ್ಷ ಸಾಗುತ್ತಿದೆ. ಇದರಿಂದ ಎಎಪಿ ಕಾರ್ಯಕರ್ತರಲ್ಲಿ ಸಂಭ್ರಮಾಚಾರಣೆ ಮುಗಿಲು ಮುಟ್ಟಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) 2022 ರ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಮತಗಳ ಎಣಿಕೆ ಇನ್ನೂ ಪೂರ್ಣಗೊಂಡಿಲ್ಲ. ಅದಾಗಲೇ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಿಸುತ್ತಿರುವುದು ಕಂಡುಬಂದಿದೆ. ಮತ ಎಣಿಕೆ ಆರಂಭವಾದ ಕೆಲ ಗಂಟೆಗಳಲ್ಲಿ ತೀವ್ರ ಪೈಪೋಟಿ ನೀಡಿದ ಬಿಜೆಪಿ ಕಡಿಮೆ ಅಂತರದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ನಿರೀಕ್ಷೆಯಂತೆ ಮುನ್ನಡೆ ಸಾಧಿಸದೆ ಮೂರನೇ ಸ್ಥಾನದಲ್ಲಿ ಉಳಿದಿದೆ. ಎಎಪಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಮುನ್ನಡೆಯನ್ನು ಸಾಧಿಸಿದೆ. ಆರಂಭಿಕ ಭಯದ ನಂತರ ಎಎಪಿ 100 ಸ್ಥಾನಗಳನ್ನು ದಾಟಿದೆ, ಗೆಲುವಿನ ಹತ್ತಿರದಲ್ಲಿದೆ.

ಮಧ್ಯಾಹ್ನ 12.33 ಕ್ಕೆ ದೆಹಲಿ ರಾಜ್ಯ ಚುನಾವಣಾ ಆಯೋಗ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ 250 ಸ್ಥಾನಗಳ ಪೈಕಿ ಎಎಪಿ 104 ಸ್ಥಾನಗಳನ್ನು ಗೆದ್ದಿದೆ ಮತ್ತು 31 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 83 ರಲ್ಲಿ ಗೆದ್ದು 19 ರಲ್ಲಿ ಮುಂದಿದೆ ಎಂದಿದೆ. ಕಾಂಗ್ರೆಸ್ ಐದರಲ್ಲಿ ಗೆದ್ದು ಐದರಲ್ಲಿ ಮುನ್ನಡೆ ಸಾಧಿಸಿದೆ. ಮ್ಯಾಜಿಕ್ ನಂಬರ್ 126 ಆಗಿದೆ.

ಈ ಬಗ್ಗೆ ಮಾತನಾಡಿದ ಶಾಸಕ ಸೌರಭ್ ಭಾರದ್ವಾಜ್ ಎಎಪಿ 180 ರಿಂದ 230ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. "ನಾವು 180 ಕ್ಕಿಂತ ಹೆಚ್ಚು ಮತ ಪಡೆಯಲಿದ್ದೇವೆ. ಮತದಾರರು ನಮಗೆ ಒಲವು ತೋರಿದರೆ ನಾವು 230 ಅನ್ನು ಸಹ ದಾಟಬಹುದು. ಮೇಯರ್ ನಮ್ಮ ಪಕ್ಷದವರೇ ಆಗಿರುತ್ತಾರೆ. ಎಕ್ಸಿಟ್ ಪೋಲ್‌ಗಳು ಹೇಳಿದಂತೆ ಫಲಿತಾಂಶ ಹೊರಬರಲಿದೆ ಎಂದು ನಾನು ಭಾವಿಸುತ್ತೇನೆ" ಎಂದರು.

Delhi MCD Election Results: Aam Aadmi Party to a clear majority

ಈ ಸಮಯದಲ್ಲಿ ದೆಹಲಿ ಬಿಜೆಪಿ ನಾಯಕ ಹರೀಶ್ ಖುರಾನಾ ಸುದ್ದಿ ಸಂಸ್ಥೆ ANI ಗೆ ಮಾತನಾಡಿ: "ನಾವು ಕಸ ವಿಲೇವಾರಿಗಾಗಿ ಕೆಲಸ ಮಾಡಿದ್ದೇವೆ ಮತ್ತು ಇದು (ಸಾಂಕ್ರಾಮಿಕ ಸಮಯದಲ್ಲಿಯೂ) ಮುಂದುವರೆಯಿತು, ಅದಕ್ಕಾಗಿಯೇ ಮುಂದಿನ ಮೇಯರ್ ಬಿಜೆಪಿಯಿಂದ ಬರುತ್ತಾರೆ ಎಂಬ ವಿಶ್ವಾಸ ನಮಗಿದೆ " ಎಂದರು.

Delhi MCD Election Results: Aam Aadmi Party to a clear majority

ಎಎಪಿಯ ಆಲೆ ಮೊಹಮ್ಮದ್ ಇಕ್ಬಾಲ್ ಅವರು ಚಾಂಡಿ ಮಹಲ್ ಸ್ಥಾನವನ್ನು ಅತಿ ಹೆಚ್ಚು ಗೆಲುವಿನ ಅಂತರದಿಂದ ಅಂದರೆ 17,134 ಮತಗಳಿಂದ ಗೆದ್ದಿದ್ದಾರೆ. ಆಮ್ ಆದ್ಮಿ ಪಕ್ಷದ ಸೀಮಾ ಅವರು ಈ ಚುನಾವಣೆಯಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಅಂತರದ ಗೆಲುವನ್ನು ದಾಖಲಿಸಿದ್ದಾರೆ - ಅವರು ಕೇವಲ 24 ಮತಗಳಿಂದ ಪಟ್ಪರ್ಗಂಜ್ ಸ್ಥಾನವನ್ನು ಗೆದ್ದಿದ್ದಾರೆ. ಜೊತೆಗೆ ಏಪ್ರಿಲ್‌ನಲ್ಲಿ ಕೋಮುಗಲಭೆಗಳು ನಡೆದ ಜಹಾಂಗೀರ್‌ಪುರಿ ವಾರ್ಡ್‌ನಲ್ಲಿ ಹಕ್ಕು ಸಾಧಿಸಿದ ಎಎಪಿಯ ತಿಮ್ಸಿ ಶರ್ಮಾ ಗೆಲುವು ಸಾಧಿಸಿದ್ದಾರೆ.

English summary
Counting of votes in the Delhi Metropolitan Corporation election is nearing its final stage and the Aam Aadmi Party is moving towards a clear majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X