Delhi hit and run case: 'ನನ್ನ ಮಗಳು ಯಾವತ್ತೂ ಕುಡಿಯುತ್ತಿರಲಿಲ್ಲ' ಅಂಜಲಿ ತಾಯಿ
ದೆಹಲಿ ಕಾಂಜಾವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅಂಜಲಿ ತಾಯಿ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ತಮ್ಮ ಮಗಳ ಬಗ್ಗೆ ತಾಯಿ ಕೆಲ ಮಾತುಗಳನ್ನಾಡಿದ್ದು 'ನಿಧಿ ಯಾರು ಎಂದು ನನಗೆ ಗೊತ್ತಿಲ್ಲ, ನನ್ನ ಮಗಳು ಯಾವತ್ತೂ ಕುಡಿಯುತ್ತಿರಲಿಲ್ಲ' ಎಂದಿದ್ದಾರೆ.
ದೆಹಲಿಯ ಕಾಂಜಾವಾಲಾದಲ್ಲಿ ಹೊಸ ವರ್ಷಾಚರಣೆಯ ನಡುವೆ ಆಘಾತಕಾರಿ ಘಟನೆಯೊಂದು ನಡೆದಿದೆ. ಶನಿವಾರ-ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸುಲ್ತಾನ್‌ಪುರಿ ಪ್ರದೇಶದಿಂದ ಕಾಂಜಾವಾಲಾಗೆ ತೆರಳುತ್ತಿದ್ದ 5 ಯುವಕರಿದ್ದ ಕಾರು 23 ವರ್ಷದ ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದು ನಂತರ 4 ಕಿಲೋಮೀಟರ್‌ವರೆಗೆ ಆಕೆಯ ದೇಹವನ್ನು ಎಳೆದೊಯ್ದಿದೆ. ಬಳಿಕ ಬಾಲಕಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಈ ಘಟನೆಯ ನಂತರ, ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಚಾರಣೆ ಮಾಡುತ್ತಿದ್ದಾರೆ.
ಕಾಂಜಾವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮೃತ ಅಂಜಲಿ, ಆಕೆಯ ಸ್ನೇಹಿತೆ ನಿಧಿ ಮತ್ತು ನಾಲ್ವರು ಆರೋಪಿಗಳ ಕರೆ ವಿವರಗಳನ್ನು ಸಂಗ್ರಹಿಸಿದ್ದಾರೆ. ಮತ್ತೊಂದೆಡೆ, ಎಫ್‌ಎಸ್‌ಎಲ್ ತಂಡವು ಪೊಲೀಸ್ ತಂಡದೊಂದಿಗೆ ದೆಹಲಿಯ ಸುಲ್ತಾನ್‌ಪುರಿ ಪೊಲೀಸ್ ಠಾಣೆಯಲ್ಲಿ ಕಾರನ್ನು ಪರಿಶೀಲಿಸಿತು. ಮಾಧ್ಯಮ ವರದಿಗಳ ಪ್ರಕಾರ, ಇದಕ್ಕಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಅಂಜಲಿಯ ತಾಯಿ ಹೇಳಿಕೆ
ಮತ್ತೊಂದೆಡೆ, ಅಂಜಲಿಯ ಸ್ನೇಹಿತೆ ನಿಧಿ ಹೇಳಿಕೆಯ ಮೇರೆಗೆ, ಇದೀಗ ಮೃತ ಅಂಜಲಿಯ ತಾಯಿಯ ಹೇಳಿಕೆ ಮುನ್ನೆಲೆಗೆ ಬಂದಿದೆ. ನಿಧಿಯ ಮಾತುಗಳೆಲ್ಲ ತಪ್ಪಾಗಿದೆ ಎಂದು ಅವರು ಹೇಳಿದ್ದಾರೆ. 'ನಿಧಿ ಯಾರು ಎಂದು ನನಗೆ ಗೊತ್ತಿಲ್ಲ, ನಾನು ಅವಳನ್ನು ನೋಡಿಲ್ಲ. ನಿಧಿ ಅಂಜಲಿ ಫ್ರೆಂಡ್ ಆಗಿದ್ದರೆ ಅವಳನ್ನು ಯಾಕೆ ಒಂಟಿಯಾಗಿ ಬಿಟ್ಟು ಹೋದಳು. ಎಲ್ಲವೂ ಯೋಜಿತ ಪಿತೂರಿ, ನಿಧಿ ಕೂಡ ಭಾಗಿಯಾಗಿರಬಹುದು. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು. ಅಂಜಲಿ ಎಂದಿಗೂ ಕುಡಿದಿಲ್ಲ. ಅವಳು ಯಾವತ್ತೂ ಕುಡಿದು ಮನೆಗೆ ಬಂದಿಲ್ಲ ಮತ್ತು ನಿಧಿ ಹೇಳಿಕೊಂಡಿರುವುದನ್ನು ನಾವು ನಂಬುವುದಿಲ್ಲ' ಎಂದು ಹೇಳಿಕೊಂಡಿದ್ದಾರೆ.
ಕಂಜಾವಾಲಾ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದ ತನಿಖೆ ನಡೆಯುತ್ತದೆ. ನಾವು ಪ್ರತಿಯೊಂದು ಕೋನದಿಂದ ವಿಶ್ಲೇಷಿಸುತ್ತಿದ್ದೇವೆ ಎಂದು ದೆಹಲಿ ಪೊಲೀಸ್ ವಿಶೇಷ ಸಿಪಿ ಶಾಲಿನಿ ಸಿಂಗ್ ಹೇಳಿದ್ದಾರೆ. ಇದು ಮುಗಿದ ನಂತರ ನಾವು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸುತ್ತೇವೆ.
ಎಫ್ಎಸ್ಎಲ್ ವರದಿ
ಈ ಹಿಂದೆ ಕಾಂಜಾವಾಲಾ ಪ್ರಕರಣದಲ್ಲಿ, ಎಫ್‌ಎಸ್‌ಎಲ್‌ನ ವರದಿ ಬಂದಿತ್ತು. ಅದರಲ್ಲಿ ರಕ್ತದ ಗುರುತುಗಳು ಅಥವಾ ಕಾರಿನಲ್ಲಿ ಹುಡುಗಿ ಇರುವಿಕೆಯ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಕಾರಿನ ಮುಂಭಾಗದ ಎಡ ಚಕ್ರದಲ್ಲಿ ರಕ್ತದ ಗುರುತುಗಳು ಕಂಡುಬಂದಿವೆ ಎಂದು ಎಫ್‌ಎಸ್‌ಎಲ್ ವರದಿ ತಿಳಿಸಿದೆ. ವರದಿಗಳ ಪ್ರಕಾರ, ಬಲಿಪಶು ಕಾರಿನ ಮುಂಭಾಗದ ಎಡ ಚಕ್ರಕ್ಕೆ ಸಿಕ್ಕಿಬಿದ್ದಿದ್ದು, ದೇಹವನ್ನು 4 ಕಿಮೀ ಎಳೆದೊಯ್ಯಲಾಗಿದೆ. ಈ ವೇಳೆ ಅಂಜಲಿಯ ಮೈಮೇಲೆ ಒಂದು ಬಟ್ಟೆಯೂ ಇರಲಿಲ್ಲ. ಅವರ ದೇಹದಲ್ಲಿ ಚರ್ಮ ಇಲ್ಲವಾಘಿತ್ತು. ದೇಹವೆಲ್ಲ ರಕ್ತದಿಂದ ತೊಯ್ದು ಹೋಗಿತ್ತು.












Click it and Unblock the Notifications