ದೆಹಲಿ ಹಿಟ್ ಆಂಡ್ ರನ್ ಪ್ರಕರಣ: ನಿಧಿ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ ತಾಯಿ
ಹೊಸದಿಲ್ಲಿ ಜನವರಿ 5: ಹೊಸ ವರ್ಷದ ದಿನದಂದು ಮುಂಜಾನೆ ಕಾರೊಂದು ಡಿಕ್ಕಿ ಹೊಡೆದು ಭೀಕರ ಅಫಘಾತದಿಂದ ಸಾವನ್ನಪ್ಪಿದ ಅಂಜಲಿಯ ಸ್ನೇಹಿತೆ ನಿಧಿಯ ತಾಯಿ ಹೇಳಿಕೆಯನ್ನು ನೀಡಿದ್ದಾರೆ. ಅಫಘಾತದ ವೇಳೆ ಮೃತ ಅಂಜಲಿಯೊಂದಿಗೆ ಆಕೆಯ ಸ್ನೇಹಿತೆ ನಿಧಿ ಕೂಡ ಇದ್ದರು. ಆದರೆ ನಿಧಿ ಅಪಘಾತದ ಬಳಿಕ ಮನೆಗೆ ಮರಳಿದ್ದಾಳೆ. ಪೊಲೀಸ್ ದೂರು ಆಗಲಿ ಅಥವ ಮನೆಯಲ್ಲಿ ಘಟನೆಯ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ. ಘಟನೆಯನ್ನು ಕಣ್ಣಾರೆ ಕಂಡರು ಅಂಜಲಿಯನ್ನು ರಕ್ಷಿಸದೇ ನಿಧಿ ತೆರಳಿದ್ದರ ಬಗ್ಗೆ ಅನುಮಾನ ಸೃಷ್ಟಿಯಾಗಿದೆ. ನಿಧಿಗೂ ಆರೋಪಿಗಳಿಗೂ ಪರಿಚರವಿತ್ತಾ ಎನ್ನುವ ಪ್ರಶ್ನೆಗಳೂ ಎದ್ದಿವೆ. ಹಲವಾರು ಈ ಬಗ್ಗೆ ಪ್ರಶ್ನೆ ಕೂಡ ಮಾಡಿದ್ದಾರೆ. ಆದರೆ ನಿಧಿ ತಾಯಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಪಘಾತ ನಡೆದಾಗ ನಿಧಿ ತುಂಬಾ ಗಾಬರಿಯಾಗಿದ್ದಳು. ಆಕೆ ಮನೆಗೆ ಬಂದಾಗ ಆಕೆಯ ಪರಿಸ್ಥಿತಿ ಹೇಗಿತ್ತು ಎನ್ನುವುದು ನಮಗೆ ಮಾತ್ರ ಗೊತ್ತು. ಆಕೆ ಯಾರಿಗೂ ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆಕೆ ತುಂಬಾ ಗಾಬರಿಗೊಂಡಿದ್ದಳು ಎಂದು ನಿಧಿ ತಾಯಿ ಹೇಳಿದ್ದಾರೆ.
ಆರೋಪಿಗಳು ಅವಳನ್ನು ಓಡಿಸಲು ಪ್ರಯತ್ನಿಸಿದರು. "ನಿಧಿಯ ಸ್ಥಿತಿಯನ್ನು ನೋಡಿ ನಾವು ಭಯಭೀತರಾಗಿದ್ದೆವ. ಅವಳು ತುಂಬಾ ಭಯಭೀತಳಾಗಿದ್ದಳು" ಎಂದು ನಿಧಿ ತಾಯಿ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಹೊಸ ವರ್ಷದ ದಿನದಂದು ಅಂಜಲಿ ಸಿಂಗ್ ತನ್ನ ಸ್ನೇಹಿತೆ ನಿಧಿಯೊಂದಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಐವರು ಕುಡುಕರನ್ನು ಹೊಂದಿದ್ದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಆಕೆಯ ದೇಹ ಕಾರಿಗೆ ಸಿಕ್ಕಿಕೊಂಡಿದ್ದು ಅಂಜಲಿಯನ್ನು 13 ಕಿಲೋಮೀಟರ್ ಎಳೆದೊಯ್ದಿದೆ. ಆಕೆಯ ಶವ ದೆಹಲಿಯ ಕಾಂಜಾವಾಲಾದಲ್ಲಿ ಪತ್ತೆಯಾಗಿದೆ. ಶವಪರೀಕ್ಷೆ ವರದಿ ಲೈಂಗಿಕ ದೌರ್ಜನ್ಯವನ್ನು ತಳ್ಳಿಹಾಕಿದೆ.
"ನಿಧಿ ಮುಂಜಾನೆ 3 ಗಂಟೆಗೆ ಮನೆಗೆ ಮರಳಿದರು. ಮಾರಣಾಂತಿಕ ಅಪಘಾತ ಸಂಭವಿಸಿದೆ ಎಂದು ಅವರು ನನಗೆ ಹೇಳಿದರು. ಪುರುಷರು ನಿಧಿಯ ಮೇಲೂ ಕಾರನ್ನು ಚಲಾಯಿಸಲು ಪ್ರಯತ್ನಿಸಿದರು. ನಿಧಿ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿರುವುದಾಗಿ ಹೇಳಿದಳು. ಕಾರಿಗೆ ಟಿಂಟೆಡ್ ಗ್ಲಾಸ್ ಇತ್ತು" ಎಂದು ನಿಧಿ ಅವರ ತಾಯಿಗೆ ಹೇಳಿರುವುದಾಗಿ ತಾಯಿ ಹೇಳಿದ್ದಾರೆ.
ನಿಧಿ ನೀಡಿರುವ ಹೇಳಿಕೆಗಳ ಬಗ್ಗೆ ಅಂಜಲಿಯ ಚಿಕ್ಕಪ್ಪ ಪ್ರಶ್ನೆಗಳನ್ನು ಎತ್ತಿದ್ದು, ಘಟನೆಯ ಬಗ್ಗೆ ಯಾರಿಗೂ ಏಕೆ ತಿಳಿಸಲಿಲ್ಲ ಎಂದು ಹೇಳಿದ್ದಾರೆ. ಆದರೆ "ನಾವು ಓಡಿಹೋಗುವುದಿಲ್ಲ. ನಾನು ಹೇಳುತ್ತಿರುವುದೆಲ್ಲ ಸತ್ಯ. ನಿಧಿ ಮತ್ತು ಅಂಜಲಿಗೆ ಆರೋಪಿಗಳ ಪರಿಚಯವಿರಲಿಲ್ಲ" ಎಂದು ನಿಧಿಯ ತಾಯಿ ಹೇಳಿದ್ದಾರೆ.

ಆ ಸಮಯದಲ್ಲಿ ಮದ್ಯಪಾನ ಮಾಡಿದ್ದನ್ನು ಒಪ್ಪಿಕೊಂಡಿರುವ ಐವರು ವ್ಯಕ್ತಿಗಳು ತಮಗೆ ಘಟನೆಯ ಬಗ್ಗೆ ಪರಿವಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪವನ್ನು ಹೊರಿಸಲಾಗಿದೆ. ದೆಹಲಿಯ ಕಾರು ಭೀಕರ ಪ್ರಕರಣದಲ್ಲಿ ಇನ್ನೂ ಇಬ್ಬರು ಶಂಕಿತರು ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications