Delhi hit and drag case: ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು

ಹೊಸ ವರ್ಷದಂದು ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿ ಹಿಟ್ ಆಂಡ್ ಡ್ರ್ಯಾಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇತ್ತೀಚಿಗೆ ಬಂದ ವರದಿ ಪ್ರಕಾರ ದೆಹಲಿ ಅಂಜಲಿ ಸಿಂಗ್ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ರಾಜಧಾನಿ ದೆಹಲಿಯ ಕಂಜಾವಾಲಾ ಪ್ರದೇಶದಲ್ಲಿ ಹೊಸ ವರ್ಷದ ಮುಂಜಾನೆ ನಡೆದ ಕ್ರೌರ್ಯ (ದೆಹಲಿ ಹಿಟ್ ಆಂಡ್ ಡ್ರ್ಯಾಗ್ ಕೇಸ್) ಜನರನ್ನು ಬೆಚ್ಚಿಬೀಳಿಸಿದೆ. ಕಾರಿನಲ್ಲಿ ಬಂದ ಐವರು ಯುವಕರು ಯುವತಿ ಸ್ಕೂಟಿಗೆ ಡಿಕ್ಕಿ ಹೊಡೆದು ಆಕೆ ಕಾರಿನಡಿ ಸಿಲುಕಿಕೊಂಡರೂ ಕೆಲ ದೂರ ಕಾರಿನೊಂದಿಗೆ ದೇಹವನ್ನು ಎಳೆದೊಯ್ದಿದ್ದಾರೆ. ಘಟನೆ ನಡೆದ ಬಳಿಕ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಸದ್ಯ ಅವರ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

Delhi hit and drag case: Murder case filed against the accused

ಕೇಂದ್ರ ಗೃಹ ಸಚಿವಾಲಯದ ಆದೇಶದ ನಂತರ ದೆಹಲಿಯ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ದೇಶವನ್ನೇ ಬೆಚ್ಚಿ ಬೀಳಿಸಿದ್ದ ಅಂಜಲಿ ಸಿಂಗ್ ಪ್ರಕರಣದಲ್ಲಿ ವಿಶೇಷ ತನಿಖೆ ನಡೆಸಿದ ಬಳಿಕ ಸಚಿವಾಲಯ ಆದೇಶ ಹೊರಡಿಸಿದೆ.

20 ವರ್ಷದ ಯುವತಿಯನ್ನು ಐವರು ಕುಡುಕರ ಕಾರು ಡಿಕ್ಕಿ ಹೊಡೆದು 13 ಕಿಮೀ ಎಳೆದೊಯ್ಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳಿಂದ ಬಂದ ಅನೇಕ ಕರೆಗಳನ್ನು ನಿರ್ಲಕ್ಷಿಸಿದ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

Delhi hit and drag case: Murder case filed against the accused

ತೀವ್ರವಾಗಿ ಗಾಯಗೊಂಡಿಂದ್ದರಿಂದ ಅಂಜಲಿ ಸಿಂಗ್ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಘಟನೆಯಿಂದ ಆಕೆಯ ತಲೆ ಒಡೆದುಹೋಗಿದೆ. ಜೊತೆಗೆ ಅವಳ ದೇಹದ ಚರ್ಮ ಸುಲಿದು ಹೋಗಿದೆ. ದೇಹದಿಂದ ಮೂಳೆಗಳು ಕಾಣಿಸುತ್ತಿತ್ತು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+