Delhi Election Results 2025: ಕಾಂಗ್ರೆಸ್ ರಾಜಕೀಯ ಹಿನ್ನೆಲೆ, ದೆಹಲಿ ಸೋಲಿಗೆ ಕಾರಣಗಳು-ವಿಶ್ಲೇಷಣೆ

ದೆಹಲಿ, ಜನವರಿ 08: ದೆಹಲಿಯಲ್ಲಿ ಉಳಿವಿಗಾಗಿ ಹೋರಾಟ ನಡೆಸಿ ಕೊನೆಗೆ ಮುಖಭಂಗ ಅನುಭವಿಸಿದ ಕಾಂಗ್ರೆಸ್‌ ಅನ್ನು ರಾಜ್ಯದ ಜನರು ಅಧಿಕಾರದಿಂದ ದೂರ ಇಡುವಲ್ಲಿ ಯಶಸ್ವಿಯಾಗಿದ್ದಾರೆ. ಮೂರು ಭಾರಿ ಅಧಿಕಾರ ನೀಡಿದ್ದ ಇದೇ ಕಾಂಗ್ರೆಸ್‌ಗೆ ಇಂದು ಬರಬಾರದ ಸ್ಥಿತಿ ಬಂದಿದೆ. ಒಂದೇ ಒಂದು ಸೀಟು ಗೆಲ್ಲುವುದು ಅನುಮಾನ ಎಂಬಂತಹ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣವೇನು? ಎಷ್ಟು ಬಾರಿ ದೆಹಲಿಯಲ್ಲಿ ಕಾಂಗ್ರೆಸ್ ಆಡಳಿತ ನಡೆಸಿ, ರಾಜಕೀಯ ಹಿನ್ನೆಲೆ, ವಿಶ್ಲೇಷಣೆ ವರದಿ ಇಲ್ಲಿದೆ.

ದೆಹಲಿ ರಾಜ್ಯ ವಿಧಾನಸಭಾ ಚುನಾವಣೆ 2025 ನಡೆದು, ಫೆಬ್ರವರಿ 8ರಂದು ಫಲಿತಾಂಶ ಬಿಡುಗಡೆ ಆಗುತ್ತಿದೆ. ಸದ್ಯದ ಸಮೀಕ್ಷೆ ಪ್ರಕಾರ, ಇಲ್ಲಿ ಕಾಂಗ್ರೆಸ್ ಅತೀ ಕನಿಷ್ಠ ಸೀಟು ಗೆಲ್ಲುವುದು ಅನುಮಾನ ಎಂಬಂತಾಗಿದೆ. 2015ರಿಂದ ಈವರೆಗೆ ದೆಹಲಿಯಲ್ಲಿ ಹೀನಾಯ ಸೋಲು, ಐತಿಹಾಸಿಕ ಹಿನ್ನಡೆ ಅನುಭವಿಸಿದೆ. ದಶಕಗಳ ಕಾಲ ದೇಶವಾಳಿದ ಪಕ್ಷಕ್ಕೆ ಪ್ರಮುಖ ರಾಜ್ಯ ದೆಹಲಿಯಲ್ಲಿ ಕನಿಷ್ಠ ವಿಪಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ.

Delhi Election Results 2025 Congress Political History of Delhi Why Party Defeated Report

2015ಕ್ಕೂ ಮೊದಲು ಮೂರು ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಹೌದು, 1952ರಲ್ಲಿ ಕೇವಲ 48 ಕ್ಷೇತ್ರ ಹೊಂದಿದ್ದ ದೆಹಲಿ ರಾಜ್ಯಕ್ಕೆ ಚುನಾವಣೆ ನಡೆದಿತ್ತು. ಬಳಿಕ 1956ರಲ್ಲಿ ಕೇಂದ್ರಾಡಳಿತ ಪ್ರದೇಶವಾಯಿತು. ಇದಾದ ಹಿನ್ನೆಲೆಯಲ್ಲಿ 1993ರವರೆಗೆ ಚುನಾವಣೆ ನಡೆಯಲಿಲ್ಲ ಎಂದು ಇತಿಹಾಸ ಹೇಳುತ್ತದೆ.

1993ರ ಚುನಾವಣೆ ನಡೆದಾಗಿ ದೆಹಲಿಯ ವಿಧಾನಸಭಾ ಚುನಾವಣೆ ಸಂಖ್ಯೆ 70ಕ್ಕೆ ಏರಿಕೆ ಆಯಿತು. ಈಗಲೂ ಅಷ್ಟೇ ಕ್ಷೇತ್ರಗಳು ಇವೆ. ಅಂದು ಬಹುಮತ ಪಡೆದ ಬಿಜೆಪಿ (49) ಮೊದಲ ಬಾರಿಗೆ ಅಧಿಕಾರಕ್ಕೆ ಬಂತು. ಪೂರ್ಣಾವಧಿಗೆ ಅಧಿಕಾರ ನಡೆಸಿತು. ಬಳಿಕ 1998ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರದ ಚುಕ್ಕಾಣೆ ಹಿಡಿಯಿತು.

ಕಾಂಗ್ರೆಸ್ ಅಲ್ಲಿಂದ ಮೂರು ಬಾರಿ ಅಂದರೆ 1998, 2003, 2008ರವರೆಗೆ ನಿರಂತರ ಹ್ಯಾಟ್ರಿಕ್ ಗೆಲುವು ಕಂಡ ಕಾಂಗ್ರೆಸ್‌ ಅನ್ನು ಶೀಲಾ ದಿಕ್ಷಿತ್ ಅವರು ಮುಖ್ಯಮಂತ್ರಿಯಾಗಿ ನೇತೃತ್ವ ವಹಿಸಿದ್ದರು. ಒಂದಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ಪಕ್ಷಕ್ಕೆ ಹೆಸರು ತಂದು ಕೊಟ್ಟರು. ಅವರ ಆಡಳಿತವೇ ಕೊನೆ ಮತ್ತೆ ಈವರೆಗೂ ದೆಹಲಿಯಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಕೈ ಪಡೆ ವಿಜಯ ಸಾಧಿಸಲಾಗಿಲ್ಲ. 2025 ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬಂದರೆ ಒಂದು ಇಲ್ಲವೇ ಎರಡು ಸೀಟು ಬರಬಹುದು ಎನ್ನಲಾಗುತ್ತಿದೆ. ಇದರರ್ಥ ದೆಹಲಿಯಲ್ಲಿ ಕಾಂಗ್ರೆಸ್ ಮತ್ತೆ ಮಕಾಡೆ ಮಲಗಿತು ಎಂದರ್ಥ.

ಸೋಲಿಗೆ ಕಾರಣಗಳೇನು?

ಕಾಂಗ್ರೆಸ್ ಮೊದಲಿನಿಂದಲೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಾ ಬಂದಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳ ಕುರಿತು ಮಾತನಾಡುವಾಗ ಕೈ ನಾಯಕರು ಎಲ್ಲೆ ಮೀರಿ ಮಾತನಾಡಿದ್ದು ಇದೆ. ಕೆಲವು ಬಾರಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಉದಾಹರಣೆಗಳು ಇವೆ. ಇದು ದೆಹಲಿ ಹಿಂದೂಪರ ಮತದಾರರ ಮನಸ್ಸು ನೋಯಿಸಲು ಕಾರಣವಾಗಿರಬಹುದು.

ಇತ್ತೀಚೆಗೆ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಬಿಜೆಪಿ ಅಮಿತ್ ಶಾ ಅವರು ತೆರಳಿದ್ದ ವೇಳೆ ಮಲ್ಲಿಕಾರ್ಜುನ್ ಖರ್ಗೆ ಅವರು ವ್ಯಂಗ್ಯವಾಡಿದ್ದರು. ಅಮಿತ್ ಶಾ ಅವರು ಗಂಗೆಯಲ್ಲಿ ಮಿಂದು ಪವಿತ್ರ ಸ್ನಾನ ಮಾಡಿದರೆ ಬಡತನ, ನಿರುದ್ಯೋಗ ನಿವಾರಣೆ ಆಗಲ್ಲ ಎಂದು ಹೇಳಿಕೆ ನೀಡಿದ್ದರು. ಇದು ದೆಹಲಿ ಹಿಂದೂಗಳ ಆಕ್ರೋಶಕ್ಕೆ ಕಾರಣವೂ ಆಗಿರಬಹುದು.

ದೆಹಲಿ ರಾಜ್ಯದಲ್ಲಿ ಶೀಲಾ ದೀಕ್ಷಿತ್ ಅವರ ಬಳಿಕ ಪ್ರಮುಖ ಮತ್ತು ಪ್ರಬಲ ಸಿಎಂ ಅಭ್ಯರ್ಥಿ ಕೊರತೆ ಎದುರಾಯಿತು ಎನ್ನಬಹುದು. ಪಕ್ಷದೊಳಗಿನ ಒಳಜಗಳವು, ಗಾಂಧಿ ಕುಟುಂಬ ರಾಜಕೀಯವು ಸೋಲಿಗೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ.

ಎಎಪಿ ಯೋಜನೆ ಕಾಪಿ ಮಾಡಿತೇ?

ಈಗಾಗಲೇ ಎಎಪಿ ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್, ಉಚಿತ ಚಿಕಿತ್ಸೆ, ಶಿಕ್ಷಣ ಉಚಿತ, ಸಾರಿಗೆ ಉಚಿತ ಯೋಜನೆ ಸೇರಿದಂತೆ ಕೆಲವು ಮಹತ್ವದ ಯೋಜನೆ ಜಾರಿಗೆ ತಂದಿದೆ. ಇದನ್ನೆ ಕಾಂಗ್ರೆಸ್ ಕರ್ನಾಟಕ ಸೇರಿದಂತೆ ಬೇರೆ ಬೇರೆ ಕಚೇರಿಗಳಲ್ಲಿ ಅಪ್ಡೇಟ್ ವರ್ಷನ್ ರೀತಿಯಲ್ಲಿ ಜಾರಿಗೊಳಿಸಿದೆ ಎಂಬುದು ಎಎಪಿ ವಾದ. ಉಚಿತ ಕಾಂಗ್ರೆಸ್ ಗ್ಯಾರಂಟಿಗಳಿಗೆ ಮತದಾರರು ಮನ ಸೋಲದಿರುವುದು ಸಹ ದೆಹಲಿಯಲ್ಲಿ ಕಾಂಗ್ರೆಸ್ ಮಕಾಡೆ ಮಲಗಲು ಕಾರಣ ಎನ್ನಲಾಗುತ್ತಿದೆ.

ಇನ್ನೂ ಬಿಜೆಪಿ ಬರೋಬ್ಬರಿ 27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರಕ್ಕೆ ಬರಲಿವೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ತಿಳಿಸಿವೆ. ಇತ್ತ ಎಎಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದು ಹ್ಯಾಟ್ರಿಕ್ ಬಾರಿಸಲಿದೆ ಎಂದು ಕೆಲ ಸಮೀಕ್ಷೆ ತಿಳಿಸಿವೆ. ದೆಹಲಿ ರಾಜಕೀಯ ಹಣೆಬರಹ ಫೆ.8ರ ಫಲಿತಾಂಶದಂದು ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+